ಭಾರತಕ್ಕೆ ಭೇಟಿ ನೀಡಿದ ಜಪಾನಿನ ಪ್ರವಾಸಿಗರಿಂದ ಹಿಂದು ಧರ್ಮ ಸ್ವಿಕಾರ !

ಛತರಪುರ (ಮಧ್ಯಪ್ರದೇಶ) – ಭಾರತ ಭೇಟಿಗೆ ಬಂದ ಜಪಾನಿನ ಪ್ರವಾಸಿ ಕಾಜಿ ಸಿಮಿಯು ರಾಮಕೃಷ್ಣ ಆಶ್ರಮ ನೋಡಿ ಪ್ರಭಾವಿಯಾಗಿ ಹಿಂದೂಧರ್ಮ ಸ್ವಿಕಾರ ಮಾಡಿದರು. ಅವರ ಜಪಾನಿನ ಹೆಸರು ಬದಲಾಯಿಸಿ ಸುಮಿತ ಎಂದು ಮಾಡಲಾಯಿತು. ಪೂಜೆ-ಅರ್ಚನೆ ಮಾಡುವುದು, ಇದು ಅವರ ದಿನನಿತ್ಯದ ಕರ್ಮವಾಗಿದೆ. ಈಗ ಅವರು ಗಾಯತ್ರಿ ಮಂತ್ರವನ್ನು ಸ್ಪಷ್ಟವಾಗಿ ಉಚ್ಛರಿಸುತ್ತಾರೆ.

ಸುಮಿತ ಇವರ ಖಜುರಾಹೋ ಇಲ್ಲಿನ ನಿವಾಸಿಯಾಗಿದ್ದ ಭಾರತೀಯ ಸ್ನೇಹಿತ ಅವಿನಾಶ ತಿವಾರಿ ಇವರು, ದೆಹಲಿಯಲ್ಲಿ ಸುಮಿತ ಇವರ ಪರಿಚಯವಾಗಿತ್ತು. ಆಗ ಅವರಲ್ಲಿ ಹಿಂದು ಧರ್ಮದ ಮೇಲಿನ ಪ್ರೀತಿ ಹಾಗೂ ಶ್ರದ್ಧೆ ಕಂಡಿತು. ಆದ್ದರಿಂದ ಅವರ ಜೊತೆ ಸ್ನೇಹ ಬೆಳೆಯಿತು. ಸುಮಿತ ಇವರು ‘ನಾನು ವಾರಣಾಸಿಗೆ ಹೋಗಿ ಅಭಿಷೇಕವು ಮಾಡಿದೆ’, ಎಂದು ಹೇಳಿದರು. ಅವರು ‘ಓಂ ನಮಃ ಶಿವಾಯ’ ಹಾಗೂ ‘ಜೈ ಶ್ರೀ ರಾಮ’ ಜಪ ಮಾಡುತ್ತಾರೆ. ಸುಮಿತ ಇವರು ಖಜುರಾಹೋಗೆ ತಲುಪಿದ ನಂತರ ಶ್ರೀ ಹನುಮಾನ ದೇವಸ್ಥಾನದಲ್ಲಿ ಪೂಜೆ – ಅರ್ಚನೆ ಮಾಡಿದರು.

ಸಂಪಾದಕೀಯ ನಿಲುವು

ಹಿಂದು ಧರ್ಮವನ್ನು ನಿರಂತರ ಟೀಕಿಸುವವರಿಗೆ ಕಪಾಳಮೋಕ್ಷ !