ಸಲ್ಮಾನ್ ಖಾನ್ ಇವನಿಗೆ ಪ್ರಸಿದ್ಧಿಗಾಗಿ ಅಲ್ಲ ಉದ್ದೇಶಪೂರ್ವಕವಾಗಿ ಹತ್ಯೆ ಮಾಡುವೆನು ! – ಕುಖ್ಯಾತ ರೌಡಿ ಲಾರೆನ್ಸ್ ಬಿಶ್ನೋಯೀ

ಕುಖ್ಯಾತ ರೌಡಿ ಲಾರೆನ್ಸ್ ಬಿಶ್ನೋಯೀ ಇವನು ‘ಎಬಿಪಿ ನ್ಯೂಸ್’ ಹಿಂದಿ ವಾರ್ತಾ ವಾಹಿನಿಗೆ ಜೈಲಿನಿಂದ ನೀಡಿರುವ ಸಂದರ್ಶನದಲ್ಲಿ ಬೆದರಿಕೆ !

ನವದೆಹಲಿ – ಪ್ರಸಿದ್ಧಿಗಾಗಿ ಅಥವಾ ಹಣ ಗಳಿಕೆಗಾಗಿ ಹಿಂದಿ ಚಿತ್ರರಂಗದಲ್ಲಿನ ವ್ಯಕ್ತಿಗಳ ಹತ್ಯೆ ಮಾಡಬೇಕಿದ್ದರೆ ಜುಹು ಚೌಪಾಟಿಯಲ್ಲಿ ತಿರುಗಾಡುವ ಯಾರನ್ನು ಬೇಕಾದರೂ ಹತ್ಯೆ ಮಾಡಬಹುದಿತ್ತು; ಆದರೆ ಹಾಗೆ ಇಲ್ಲ. ನಾವು ಇತರ ಯಾರಿಗೂ ಕೂಡ ಬೆದರಿಕೆ ನೀಡಿಲ್ಲ. ಸಲ್ಮಾನ್ ಖಾನ ಇವರ ಬಗ್ಗೆ ನಮ್ಮ ಕೆಲವು ವೈಚಾರಿಕ ಮತಭೇದವಿದೆ ಆದ್ದರಿಂದ ನಾವು ಸಲ್ಮಾನನಿಗೆ ಕ್ಷಮೆ ಯಾಚಿಸಲು ಹೇಳುತ್ತಿದ್ದೇವೆ. ಕ್ಷಮೆಯಾಚಿಸದಿದ್ದರೆ ಮುಂದೆ ಏನಾಗಬಹುದು, ಭಗವಂತ ಯಾರ ಅಹಂಕಾರ ಕೂಡ ಇರಲು ಬಿಡುವುದಿಲ್ಲ, ಎಂದು ಕುಖ್ಯಾತ ರೌಡಿ ಲಾರೆನ್ಸ್ ಬಿಶ್ನೋಯೀ ಇವನು ‘ಎಬಿಪಿ ನ್ಯೂಸ್’ ಈ ವಾರ್ತಾ ವಾಹಿನಿಗೆ ಜೈಲಿನಿಂದ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂದರ್ಶನ ನೀಡುವಾಗ ಹೇಳಿದನು. ಪಂಜಾಬದಲ್ಲಿ ಪ್ರಸಿದ್ಧ ಗಾಯಕ ಮತ್ತು ಕಾಂಗ್ರೆಸ್ ಮುಖಂಡ ಸಿದ್ದು ಮುಸೇವಾಲ ಹತ್ಯೆಯ ಪ್ರಕರಣದಲ್ಲಿ ಲಾರೆನ್ಸ್ ಬಿಶ್ನೋಯೀಗೆ ಬಂಧಿಸಲಾಗಿದೆ. ‘ಪ್ರಸಿದ್ಧಿಗಾಗಿ ನಟ ಸಲ್ಮಾನ್ ಖಾನ್ ಇವರಿಗೆ ಬೆದರಿಕೆ ನೀಡಿದ್ದಿರಾ ?’, ಎಂದು ಪ್ರಶ್ನೆಗೆ ಉತ್ತರಿಸುವಾಗ ಬಿಶ್ನೋಯೀ ಮೇಲಿನ ಹೇಳಿಕೆ ನೀಡಿದನು. ‘ಪ್ರಸಿದ್ಧಿಗಾಗಿ ಮಾಡುವುದಿದ್ದರೆ, ನಾವು ನಟ ಶಾಹರುಖ ಖಾನ್ ಇವರ ಹತ್ಯೆ ಮಾಡುತ್ತಿದ್ದೆವು; ಆದರೆ ಸಲ್ಮಾನ್ ಖಾನ್ ಗೆ ಪ್ರಸಿದ್ಧಿಗಾಗಿ ಅಲ್ಲ, ಉದ್ದೇಶಪೂರ್ವಕವಾಗಿ ಹತ್ಯೆ ಮಾಡುವೆವು’, ಎಂದು ಅವನು ಹೇಳಿದನು.

ಲಾರೆನ್ಸ್ ಬಿಶ್ನೋಯೀ ಮಾತು ಮುಂದುವರೆಸಿ, ನಮ್ಮ ಬಿಶ್ನೋಯೀ ಸಮಾಜದಲ್ಲಿನ ಜನರಿಗೆ ಸಲ್ಮಾನ ಖಾನ್ ಬಗ್ಗೆ ಬಹಳ ಸಿಟ್ಟು ಇದೆ. ಅವನು ಯಾವಾಗಲೂ ನಮ್ಮ ಸಮಾಜವನ್ನು ಕೀಳಾಗಿ ನೋಡಿದ್ದಾನೆ. ಅವನ ಮೇಲೆ ಮೊಕದ್ದಮೆ ನಡೆಯುತ್ತಿದೆ; ಆದರೆ ಇಲ್ಲಿಯವರೆಗೆ ಅವನು ಕ್ಷಮೆಯಾಚಿಸಿಲ್ಲ. ನಮ್ಮ ಪರಿಸರದಲ್ಲಿ ಪ್ರಾಣಿಗಳ ಜೀವ ತೆಗೆಯಲಾಗುವುದಿಲ್ಲ, ಮರಗಳನ್ನು ಕತ್ತರಿಸಲು ನಿಷೇಧವಿದೆ; ಆದರೆ ಎಲ್ಲಿ ಬಿಶ್ನೋಯೀ ಸಮಾಜದ ಸಂಖ್ಯೆ ಹೆಚ್ಚಾಗಿದೆ, ಅಲ್ಲಿ ಹೋಗಿ ಸಲ್ಮಾನ್ ಖಾನ್ ಇವನು ಜಿಂಕೆಯ ಬೇಟೆಯಾಡಿದನು. ನಾನು ಒಂದಲ್ಲಾ ಒಂದು ದಿನ ಸಲ್ಮಾನ್ ಖಾನನ ಅಹಂಕಾರ ಮುರಿಯುವೆನು. ಅವನು ನಮ್ಮ ದೇವರ ದೇವಸ್ಥಾನಕ್ಕೆ ಬಂದು ಕ್ಷಮೆ ಯಾಚಿಸಬೇಕು. ಸಲ್ಮಾನನು ಬಿಶ್ನೋಯೀ ಸಮಾಜದ ಜನರಿಗೆ ದುಡ್ಡಿನ ಆಮಿಷ ಒಡ್ಡಿದ್ದನು ಎಂದು ಹೇಳಿದ.

ನನ್ನ ಸಹೋದರನ ಹತ್ಯೆಯ ಸೇಡೆಂದು ಮುಸೇವಾಲನ ಹತ್ಯೆ ಮಾಡಿದೆ !

ಗುರುಲಾಲ್ ಮತ್ತು ವಿಕ್ಕಿ ಇವರು ನನ್ನ ಸಹೋದರರು. ಅವರ ಹತ್ಯೆಯಲ್ಲಿ ಸಿದ್ದು ಮುಸೇವಾಲನ ಕೈವಾಡವಿತ್ತು. ಅವನ ಕುಟುಂಬದ ಜೊತೆ ನಮ್ಮ ಯಾವುದೇ ಮತ ಭೇದವಿಲ್ಲ. ಅವರ ತಂದೆಯ ಜೊತೆಗೂ ನಮ್ಮ ಯಾವುದೇ ತಕರಾರು ಇಲ್ಲ, ಎಂದು ಲಾರೆನ್ಸ್ ಬಿಶ್ನೋಯೀ ಈ ಸಮಯದಲ್ಲಿ ಹೇಳಿದನು. ಅವನು ಮಾತು ಮುಂದುವರಿಸಿ, ಮುಸೇವಾಲನ ತಂದೆ ಬಲಕೌರ್ ಸಿಂಹ ಇವರು ಚುನಾವಣೆಗೆ ಸ್ಪರ್ಧಿಸುವವರಿದ್ದರು. ಆದ್ದರಿಂದ ಅವರು ವಾತಾವರಣ ನಿರ್ಮಿತಿಯ ಕಾರ್ಯ ಮಾಡುತ್ತಿದ್ದಾರೆ. ಮಗನ ಮೃತ್ಯುವಿನಂತರ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಿದ್ದುವಿನ ಹತ್ಯೆಯ ಪ್ರಕರಣದಲ್ಲಿ ೫೦ ಜನರನ್ನು ಬಂಧಿಸಿದ್ದಾರೆ; ಆದರೆ ಈ ಪ್ರಕರಣದಲ್ಲಿ ಸಿಬಿಐ ವಿಚಾರಣೆ ನಡೆದರೇ ಅನೇಕ ಜನರು ಖುಲಾಸೆಯಾಗುವರು ಎಂದು ಹೇಳಿದ.

ಸಂಪಾದಕೀಯ ನಿಲುವು

ಓರ್ವ ಕುಖ್ಯಾತ ರೌಡಿ ಜೈಲಲ್ಲಿ ಇರುವಾಗ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಾರ್ತಾ ವಾಹಿನಿಗೆ ನೇರ ಸಂದರ್ಶನ ನೀಡುತ್ತಾನೆ, ಇದು ಕೇವಲ ಭಾರತದಲ್ಲಿ ಸಾಧ್ಯ !

ಈ ಪ್ರಕರಣದಲ್ಲಿ ವಾರ್ತಾ ವಾಹಿನಿ, ಜೈಲು ಆಡಳಿತ ಮತ್ತು ಲಾರೆನ್ಸ್ ಬಿಶ್ನೋಯೀ ಇವರ ಮೇಲೆ ಸರಕಾರ ಕ್ರಮ ಕೈಗೊಳ್ಳುವುದೇ ? ಅಥವಾ ಕೇವಲ ಕಾನೂನು ಸಾಮಾನ್ಯ ಕೈದಿಗಳಿಗಾಗಿ ಇರುವುದು ಎಂದೂ ಜನರು ತಿಳಿಯಬೇಕೆ ?