ಉತ್ತರಾಖಂಡದಲ್ಲಿ ಅನಧಿಕೃತ 26 ಗೋರಿಗಳನ್ನು ಬುಲ್ಡೋಜರ್ ಮೂಲಕ ತೆರವು !

ಡೆಹ್ರಾಡೂನ (ಉತ್ತರಾಖಂಡ) – ಇಲ್ಲಿನ ಅರಣ್ಯ ಇಲಾಖೆಯ ಪರಿಸರದಲ್ಲಿ ಅನಧಿಕೃತವಾಗಿ ಕಟ್ಟಲಾಗಿದ್ದ 26 ಗೋರಿಗಳನ್ನು ಉತ್ತರಾಖಂಡನ ಧಾಮಿ ಸರಕಾರ ಬುಲ್ಡೋಜರ್ ಮೂಲಕ ತೆರವುಗೊಳಿಸಿತು. ಉತ್ತರಾಖಂಡನಲ್ಲಿ ಲ್ಯಾಂಡ ಜಿಹಾದ್ ಅಡಿಯಲ್ಲಿ ಅರಣ್ಯದ 11 ಸಾವಿರ 400 ಕ್ಕಿಂತಲೂ ಹೆಚ್ಚು ಅನಧಿಕೃತ ಗೋರಿ ಮತ್ತು ಇತರೆ ಅತಿಕ್ರಮಣ ಮಾಡಲಾಗಿತ್ತು. ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿಯವರು ಈ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿದ್ದರು.

ಒಂದು ವಾರ್ತಾ ವಾಹಿನಿಯು ನೀಡಿರುವ ಮಾಹಿತಿಯನುಸಾರ, ಬರೇಲವಿ ಮುಸಲ್ಮಾನ ಸಮಾಜದ ಕೆಲವು ಜನರು ‘ಲ್ಯಾಂಡ್ ಗೋರಿ ಜಿಹಾದ್’ನ ಅಡಿಯಲ್ಲಿ ಉತ್ತರಾಖಂಡ ಅರಣ್ಯದಲ್ಲಿ ಚಟುವಟಿಕೆ ನಡೆಸುತ್ತಿದ್ದಾರೆ. ಈ ಜನರು ಕಲ್ಲುಗಳಿಗೆ ಸುಣ್ಣ ಬಳಿದು ಅರಣ್ಯದಲ್ಲಿ ಕಲ್ಲುಗಳನ್ನು ಒಟ್ಟು ಮಾಡುತ್ತಾರೆ. ಅದರ ಮೇಲೆ ಬಿಳಿ ಮತ್ತು ನೀಲಿ ಚಾದರಗಳನ್ನು ಹೊದಿಸುತ್ತಾರೆ. ಅಕ್ಕ ಪಕ್ಕದ ಮರಗಳಿಗೆ ಹಸಿರು ಬಾವುಟ ಹಚ್ಚುತ್ತಾರೆ. ತದನಂತರ ಊದಬತ್ತಿ ಉರಿಸಿ ಉದ್ಯೋಗ ಪ್ರಾರಂಭಿಸುತ್ತಾರೆ. ನಿಧಾನವಾಗಿ ಈ ಗೋರಿ ದೊಡ್ಡ ರೂಪ ಪಡೆಯುತ್ತದೆ. ಅರಣ್ಯ ಇಲಾಖೆಯು ಅರಣ್ಯದಲ್ಲಿ ಕಟ್ಟಲಾಗಿದ್ದ ಹಜರತ್ ರೋಶನ್ ಶಾಹನ ಗೋರಿಯನ್ನು ತೆರವುಗೊಳಿಸಿದರು. ಮೀಸಲು ಅರಣ್ಯ ಪ್ರದೇಶದಲ್ಲಿ ಅನೇಕ ಅನಧಿಕೃತ ಗೋರಿಗಳನ್ನು ಕಟ್ಟಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಡೆಹ್ರಾಡೂನ ಜಿಲ್ಲೆಯ ಅನಧಿಕೃತ ಗೋರಿಗಳನ್ನು ತೆರವುಗೊಳಿಸುತ್ತಿರುವ ಇದು 3ನೇ ದೊಡ್ಡ ಉಪಕ್ರಮವಾಗಿದೆ. 2 ತಿಂಗಳ ಹಿಂದೆ ಡೆಹ್ರಾಡೂನ ಅರಣ್ಯ ಇಲಾಖೆಯು 24 ಗೋರಿಗಳನ್ನು ತೆರವುಗೊಳಿಸಿತ್ತು.

ಸಂಪಾದಕೀಯ ನಿಲುವು

ಈ ಅತಿಕ್ರಮಣ ಮಾಡುವ ಮತ್ತು ಅದಕ್ಕೆ ಅವಕಾಶ ಕೊಡುವವರ ಮೇಲೆಯೂ ಕಠಿಣ ಕ್ರಮ ನಡೆಸಬೇಕು !