ಉತ್ತರಪ್ರದೇಶ ಸರಕಾರದ ಶ್ಲಾಘನೀಯ ಆದೇಶ !ಅಖಂಡ ರಾಮಾಯಣದ ಪಾರಾಯಣ ಕೂಡ ಸಮಾವೇಶ !ಪ್ರತಿಯೊಂದು ಜಿಲ್ಲೆಗಾಗಿ ೧ ಲಕ್ಷ ರೂಪಾಯ ವ್ಯವಸ್ಥೆ ! |
ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರ ಪ್ರದೇಶ ಸರಕಾರ ಎಲ್ಲಾ ಜಿಲ್ಲೆಯ ವಿಭಾಗಿಯ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಮಾರ್ಗದರ್ಶಕ ತತ್ವಗಳನ್ನು ಜಾರಿಗೊಳಿಸಿ ಅವರಿಗೆ ಚೈತ್ರ ನವರಾತ್ರಿ ಉತ್ಸವ ಉತ್ಸಾಹದಿಂದ ಆಚರಿಸಲು ಹೇಳಿದೆ. ಸರಕಾರವು ಎಲ್ಲಾ ಜಿಲ್ಲೆಗಳಲ್ಲಿ ಎಲ್ಲಾ ದೇವಿಯ ದೇವಸ್ಥಾನಗಳು ಮತ್ತು ಶಕ್ತಿ ಪೀಠಗಳಲ್ಲಿ ಚೈತ್ರ ನವರಾತ್ರಿಗೆ ಸಪ್ತಶತಿಯ ಪಾರಾಯಣ ಮತ್ತು ದೇವಿಯ ಜಾಗರಣೆ ಆಯೋಜನೆ ಮಾಡುವ ಆದೇಶ ನೀಡಿದ್ದಾರೆ. ಜೊತೆಗೆ ಅಖಂಡ ರಾಮಾಯಣ ಪಾರಾಯಣದ ಆಯೋಜನೆ ಕೂಡ ಮಾಡಲಾಗಿದೆ. ಇದಕ್ಕಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರಕಾರದಿಂದ ಪ್ರತಿಯೊಂದು ಜಿಲ್ಲೆಗಾಗಿ ೧ ಲಕ್ಷ ರೂಪಾಯ ನಿಧಿ ಕೂಡ ನೀಡುವರು.
೧. ಮಾರ್ಚ್ ೨೨ ರಿಂದ ೩೧ ರ ಕಾಲಾವಧಿಯಲ್ಲಿ ನಡೆಯುವ ಚೈತ್ರ ನವರಾತ್ರಿಯ ಸಿದ್ಧತೆಯನ್ನು ಮಾರ್ಚ್ ೨೧ ರ ವರೆಗೆ ಪೂರ್ಣಗೊಳಿಸಲು ಎಲ್ಲಾ ಅಧಿಕಾರಿಗಳಿಗೆ ಹೇಳಿದ್ದಾರೆ.
೨. ಎಲ್ಲಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಉತ್ತರ ಪ್ರದೇಶ ಸರಕಾರವು ಪ್ರತಿಯೊಂದು ತಾಲೂಕು ಮತ್ತು ಜಿಲ್ಲೆಯಲ್ಲಿ ಸಮಿತಿ ಸ್ಥಾಪನೆ ಮಾಡುವಂತೆ ಆದೇಶಿಸಿದೆ. ಹಾಗೂ ಇತರ ಇಬ್ಬರು ಅಧಿಕಾರಿಗಳ ನೇಮಕ ಮಾಡಿದ್ದಾರೆ. ಇದರ ಜೊತೆಗೆ ಮಹಿಳಾ ಮತ್ತು ಹುಡುಗಿಯರ ಸಹಭಾಗಕ್ಕೆ ವತ್ತು ನೀಡಿದ್ದಾರೆ.
೩. ದೇವಸ್ಥಾನದಲ್ಲಿ ಆಯೋಜನೆ ಮಾಡಿರುವ ಎಲ್ಲಾ ಕಾರ್ಯಕ್ರಮದ ಛಾಯಾಚಿತ್ರಗಳನ್ನು ಸಂಸ್ಕೃತಿಕ ಇಲಾಖೆಯ ಜಾಲತಾಣದಲ್ಲಿ ಪ್ರಸಾರ ಮಾಡಲಾಗುವುದು.
೪. ಜಿಲ್ಲಾ ಮ್ಯಾಜಿಸ್ಟ್ರೇಟ್ ಅಧ್ಯಕ್ಷತೆಯಲ್ಲಿ ಸಮಿತಿ ಸ್ಥಾಪನೆ ಮಾಡಿ ಈ ಸಮಿತಿ ಪಾರಾಯಣದಲ್ಲಿ ಸಹಭಾಗಿ ಆಗುವವರನ್ನು ಆಯ್ಕೆ ಮಾಡಲಿದೆ.
#BaatPateKi | ये है योगी सरकार का चैत्र नवरात्र और रामवनमी प्लान#YogiAdityanath #Navratri @preetiddahiya pic.twitter.com/pe2wD8Fc2w
— Zee News (@ZeeNews) March 14, 2023
ಯೋಗೀ ಸರಕಾರದಿಂದ ವಿಧಾನಸಭೆಯಲ್ಲಿ ಭಗವಾನ್ ಶ್ರೀ ರಾಮನ ಮೂರ್ತಿ ಸ್ಥಾಪಿಸಬೇಕು ! – ಕಾಂಗ್ರೆಸ್
ಯೋಗಿ ಸರಕಾರದ ನಿರ್ಣಯವನ್ನು ಕಾಂಗ್ರೆಸ್ಸಿನ ಮುಖಂಡರು ಸ್ವಾಗತಿಸಿದ್ದಾರೆ. ಯೋಗಿ ಆದಿತ್ಯನಾಥ ಇವರು ಕೇವಲ ರಾಜ್ಯದ ಮುಖ್ಯಮಂತ್ರಿ ಅಷ್ಟೇ ಅಲ್ಲದೆ ಮಠಗಳ ಮಠಾಧಿಪತಿ ಕೂಡ ಆಗಿದ್ದಾರೆ. ಆದ್ದರಿಂದ ನವರಾತ್ರಿಯಲ್ಲಿ ಅಲ್ಲಲ್ಲಿ ಜಾಗರಣೆ ಮತ್ತು ಕೀರ್ತನೆ ನಡೆಯಬೇಕು. ಪ್ರಭು ಶ್ರೀ ರಾಮನ ಮೂರ್ತಿಯನ್ನು ವಿಧಾನಸಭೆಯಲ್ಲಿ ಮತ್ತು ಪ್ರತಿಯೊಂದು ಜಿಲ್ಲಾಧಿಕಾರಿಯ ಕಾರ್ಯಾಲಯದಲ್ಲಿ ಸ್ಥಾಪಿಸಬೇಕು. ಪ್ರತಿಯೊಂದು ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ರಾಮಾಚಾರಿತ ಮಾನಸದ ಪಾರಾಯಣ ನಡೆಯಬೇಕು, ಆಗಲೇ ಹಿಂದು ರಾಷ್ಟ್ರ ಕಾಣುವುದು, ಎಂದು ಪ್ರಮೋದ ಕೃಷ್ಣಮ್ ಹೇಳಿದರು.