ಚಂಡಿಗಡದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 3 ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭೆ ಆರಂಭ

ಸಂಘದ ಶಾಖೆಯಲ್ಲಿ ಮಹಿಳೆಯರಿಗೆ ಪ್ರವೇಶ ನೀಡುವ ವಿಷಯದಲ್ಲಿ ನಿರ್ಣಯದ ಸಾಧ್ಯತೆ !

(ಎಡದಿಂದ) ಸಭೆಯಲ್ಲಿ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಮತ್ತು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರು ಉಪಸ್ಥಿತರಿರರುವುದು

ಚಂಡಿಗಡ – ಇಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 3 ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭೆ ಮಾರ್ಚ 12 ರಿಂದ ಪ್ರಾರಂಭವಾಯಿತು. ಈ ಸಭೆಯಲ್ಲಿ ಸಂಘದ ಶಾಖೆಗಳಲ್ಲಿ ಮಹಿಳೆಯರನ್ನು ಸೇರ್ಪಡೆಗೊಳಿಸಿಕೊಳ್ಳುವ ಚರ್ಚೆಯಾಗಲಿದೆ. ಇಲ್ಲಿಯವರೆಗೆ ಶಾಖೆಗಳಲ್ಲಿ ಮಹಿಳೆಯರನ್ನು ಸೇರ್ಪಡೆಗೊಳಿಸುತ್ತಿರಲಿಲ್ಲ. ಸಂಘದಿಂದ ದುರ್ಗಾವಾಹಿನಿಯಂತಹ ಸಂಘಟನೆಗಳು ಮಹಿಳೆಯರಿಗೆ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಈಗ ನೇರವಾಗಿ ಸಂಘಗಳ ಶಾಖೆಯಲ್ಲಿ ಮಹಿಳೆಯರಿಗೆ ಪ್ರವೇಶ ನೀಡುವುದರ ಮೇಲೆ ನಿರ್ಣಯ ತೆಗೆದುಕೊಳ್ಳಬಹುದಾಗಿದೆ. ಜೊತೆಗೆ ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯಾಭಿಷೇಕಕ್ಕೆ 300 ವರ್ಷ ಪೂರ್ಣಗೊಳ್ಳುವ ನಿಮಿತ್ತ ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಅಂಶಗಳ ಮೇಲೆ ಸಭೆಯಲ್ಲಿ ಚರ್ಚೆಗಳು ನಡೆಯಲಿದೆ. ಈ ಸಭೆಗೆ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಮತ್ತು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರು ಉಪಸ್ಥಿತರಿದ್ದಾರೆ.