ದೆಹಲಿಯ ನ್ಯಾಯಾಲಯದ ಪರಿಸರದಲ್ಲಿ ಬಾರ್ ಅಸೊಸಿಯೆಶನ್ ನ ಹೋಳಿ ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯ !

ಜಿಲ್ಲಾ ನ್ಯಾಯಾಧೀಶರ ಬಳಿ ವರದಿ ಕೇಳಿದ ದೆಹಲಿ ಉಚ್ಚ ನ್ಯಾಯಾಲಯ !

ನವದೆಹಲಿ – ದಿಲ್ಲಿಯ ಪಟಿಯಾಲ ಹೌಸ್‌ ನ್ಯಾಯಾಲಯದ ಪರಿಸರದಲ್ಲಿ ನಡೆದ ಹೋಳಿ ಮಿಲನ್‌ ಸಮಾರಂಭದಲ್ಲಿ ದಿಲ್ಲಿ ಬಾರ್‌ ಅಸೋಸಿಯೇಶನ್‌ನ ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯ ಪ್ರದರ್ಶಿಸಲಾಯಿತು. ದೆಹಲಿ ಉಚ್ಚ ನ್ಯಾಯಾಲಯವು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾ ನ್ಯಾಯಾಧೀಶರಿಂದ ವರದಿ ಕೇಳಿದೆ.

ಈ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯವು, ನ್ಯಾಯಾಲಯದ ಪರಿಸರದಲ್ಲಿ ನಡೆದಿರುವ ನೃತ್ಯ ಅಯೋಗ್ಯವಾಗಿತ್ತು, ಕಾರ್ಯಕ್ರಮವನ್ನು ಬೆಂಬಲಿಸುವಂತಿಲ್ಲ. ಇದರಿಂದ ನ್ಯಾಯಾಂಗ ವ್ಯವಸ್ಥೆ ಸಂಕಷ್ಟದಲ್ಲಿದೆ. ಇಂತಹ ಸಂಗತಿಗಳಿಂದ ನ್ಯಾಯಾಂಗದ ವರ್ಚಸ್ಸು ಹಾಳಾಗಿದೆ. ಪ್ರಕರಣ ಸಂಪೂರ್ಣವಾಗಿ ಇತ್ಯರ್ಥವಾಗುವವರೆಗೆ, ನವದೆಹಲಿ ಬಾರ್ ಅಸೋಸಿಯೇಷನ್‌ನ ಪ್ರಸ್ತುತ ಕಾರ್ಯನಿರ್ವಾಹಕರು ತಮ್ಮ ಯಾವುದೇ ಕಾರ್ಯಕ್ರಮಗಳಿಗೆ ನ್ಯಾಯಾಲಯದ ಆವರಣವನ್ನು ಬಳಸುವಂತಿಲ್ಲ ಎಂದು ಹೇಳಿದೆ.

ಸಂಪಾದಕೀಯ ನಿಲುವು

ವ್ಯಕ್ತಿಯು ವಿದ್ಯಾವಂತನಾಗಿದ್ದರೆ, ಪದವಿಯನ್ನು ಸಹ ಗಳಿಸಿದರೆ; ಅಂದರೆ ಅವರು ಸುಸಂಸ್ಕೃತರು, ಸದಾಚಾರಿಗಳು ಎಂದು ಹೇಳಲಾಗದು ಎಂಬುದು ಈ ಘಟನೆಯಿಂದ ತಿಳಿಯುತ್ತದೆ ! ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದರೆ ಅದರಲ್ಲಿ ತಪ್ಪೇನು ?