‘ಹಿಂದೂ ರಾಷ್ಟ್ರದ ಬೇಡಿಕೆ ಮಾಡುವವರ ಮೇಲೆ ಕ್ರಮಕೈಗೊಳ್ಳದಿದ್ದರೆ, ಖಲಿಸ್ತಾನಿಗಳ ಬೇಡಿಕೆಯೂ ಸರಿ ಇದೆ !’ (ಅಂತೆ)

ಮೌಲಾನಾ ತೌಕೀರ ರಝಾ ಇವರ ಹಿಂದೂದ್ವೇಷಿ ಹೇಳಿಕೆ

ಮೌಲಾನಾ ತೌಕೀರ ರಝಾ

ರಾಮಪುರ (ಉತ್ತರ ಪ್ರದೇಶ) – ಒಂದು ವೇಳೆ ಹಿಂದೂ ರಾಷ್ಟ್ರದ ಬೇಡಿಕೆ ಸರಿಯಾಗಿದ್ದರೆ, ಖಲಿಸ್ತಾನದ ಬೇಡಿಕೆಯೂ ಸರಿ ಇದೆ. ನಾವು ಅವರ ಪರವಾಗಿ ನಿಂತರೆ, ನಮ್ಮ ಮುಸ್ಲಿಂ ಯುವಕರು ಎದ್ದು ನಿಂತು ಇಸ್ಲಾಮಿಕ್ ರಾಷ್ಟ್ರಕ್ಕಾಗಿ ಒತ್ತಾಯಿಸಿದರೆ ಏನಾಗುತ್ತದೆ ? ಇದಕ್ಕಾಗಿ ನಮಗೆ ದೇಶದ ಇನ್ನೊಂದು ವಿಭಜನೆ ಅವಕಾಶ ನೀಡಬಾರದು, ಎಂದು ಇತ್ತೆಹಾದ್ ಮಿಲ್ಲತ್ ಕೌನ್ಸಿಲ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ (ಇಸ್ಲಾಂ ಧರ್ಮಗುರು) ತೌಕೀರ್ ರಜಾ ಇವರು ಸುದ್ಧಿಗಾರರೊಂದಿಗೆ ಮಾತನಾಡುವಾಗ ಹೇಳಿದರು. ಮೊರಾದಾಬಾದ್‌ನಲ್ಲಿ ಹಿಂದೂ ರಾಷ್ಟ್ರದ ಆಗ್ರಹಿಸುವವರ ವಿರುದ್ಧ ಮಾತನಾಡುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ‘ಧೃತರಾಷ್ಟ್ರ’ ಎಂದೂ ಕರೆದಿದ್ದಾರೆ. ಈ ವೇಳೆ, ‘ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳವನ್ನೂ ಭಯೋತ್ಪಾದಕ ಸಂಘಟನೆಗಳು’ ಎಂದು ಆರೋಪಿಸಿದರು.

(ಸೌಜನ್ಯ – News State)

1. ಮೌಲಾನಾ ರಝಾ ಒವರು ಮಾತನ್ನು ಮುಂದುವರೆಸುತ್ತಾ, ಹೇಗೆ ದೇಶದ್ರೋಹದ ಅಪರಾಧವನ್ನು ದಾಖಲಿಸುವ ಮೂಲಕ ಖಲಿಸ್ತಾನ್‌ಗೆ ಬೇಡಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೋ, ಹಿಂದೂ ರಾಷ್ಟ್ರಕ್ಕಾಗಿ ಒತ್ತಾಯಿಸುವವರ ವಿರುದ್ಧವೂ ಇದೇ ರೀತಿಯ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಹಿಂದೂ ರಾಷ್ಟ್ರವನ್ನು ಬೇಡುವವರ ವಿರುದ್ಧ ಕ್ರಮಕೈಗೊಳ್ಳದೇ, ಖಾಲಿಸ್ತಾನದ ಬೇಡಿಕೆ ಮಾಡುವುದು ಸರಿ ಇದೆ.

2. ನರೇಂದ್ರ ಮೋದಿ ಸರಕಾರವು ಮುಸ್ಲಿಮರು ಮತ್ತು ಇಸ್ಲಾಂ ಧರ್ಮದ ಶತ್ರುಗಳನ್ನು ನಿರಂತರವಾಗಿ ಬೆಂಬಲಿಸುತ್ತಿದೆ ಎಂದು ಮೌಲಾನಾ ರಜಾ ಆರೋಪಿಸಿದ್ದಾರೆ.

3. ಇಸ್ಲಾಂನ ವೈರಿಗಳನ್ನೇ ಮೋದಿ ಸರಕಾರ ಬೆಂಬಲಿಸುತ್ತಿದೆ. ಅವರು ನಮ್ಮ ಮಾತನ್ನು ಕೇಳದೇ ಇದ್ದಲ್ಲಿ ರಾಷ್ಟ್ರಪತಿ ಇವರು ನಮ್ಮ ಮಾತು ಕೇಳಬೇಕು ಎಂದೂ ರಾಝಾ ಈ ವೇಳೆ ಹೇಳಿದರು.

’10 ಲಕ್ಷ ಮುಸ್ಲಿಂ ಹುಡುಗಿಯರನ್ನು ಹಿಂದೂ ಸಂಘಟನೆಗಳು ಅಪಹರಿಸಿ ಮತಾಂತರ ಮಾಡಿದ್ದಾರೆ !'(ಅಂತೆ)

ಮೌಲಾನಾ ತೌಕೀರ್ ಇವರು, ಸಮೀಕ್ಷೆಯೊಂದರ ಪ್ರಕಾರ ಸುಮಾರು 10 ಲಕ್ಷ ಮುಸ್ಲಿಂ ಹುಡುಗಿಯರನ್ನು ಹಿಂದೂ ಸಂಘಟನೆಗಳು ಅಪಹರಿಸಿ ಬೆದರಿಸಿ ಮತಾಂತರ ಮಾಡಿದ್ದಾರೆ. ಅದಕ್ಕೆ ಅವರು ಘರವಾಪಸಿ ಎಂದು ಹೆಸರಿಟ್ಟಿದ್ದಾರೆ. ಈ ಯುವತಿಯರನ್ನು ಹಿಂದೂ ಯುವಕರೊಂದಿಗೆ ಮದುವೆ ಕೂಡ ಮಾಡಿಸಿ ಕೊಟ್ಟಿದ್ದಾರೆ. ಇದರಿಂದಾಗಿ ಅವರು ಹಿಂದೂ ಧರ್ಮಕ್ಕೆ ಧಕ್ಕೆ ತಂದಿದ್ದಾರೆ ಎಂದು ದಾವೆ ಮಾಡಿದ್ದಾರೆ.

(ಸೌಜನ್ಯ – Zee Uttar Pradesh UttaraKhand)

ಮುಸ್ಲಿಮರಲ್ಲ, ಆದರೆ ಈಗ ಅಧಿಕಾರದಲ್ಲಿರುವವರು ಬಾಂಬ್‌ಗಳನ್ನು ಸ್ಪೋಟಿಸುತ್ತಿದ್ದರು !

ರಝಾ ಇವರು, ಮುಸ್ಲಿಂ ಬಾಂಬುಗಳನ್ನು ಮೊದಲು ಸ್ಪೋಟಿಸುತ್ತಿರಲಿಲ್ಲ ಮತ್ತು ಇಂದಿಗೂ ಸ್ಫೋಟಿಸುತ್ತಿಲ್ಲ. ಬಾಂಬ್ ಸಿಡಿಸುತ್ತಿದ್ದವರು ‘ಮುಸ್ಲಿಮರು ಬಾಂಬ್ ಸ್ಪೋಟಿಸುತ್ತಾರೆ’ ಎಂದು ಹಿಂದೂ ಸಮಾಜವನ್ನು ದಿಕ್ಕು ತಪ್ಪಿಸುತ್ತಿದ್ದರು ನಿಜವಾಗಿ ಹೇಳಬೇಕೆಂದರೆ ಇಂದು ಸರಕಾರದಲ್ಲಿ ಇರುವವರೇ ಬಾಂಬ್ ಸ್ಪೋಟಿಸುತ್ತಿದ್ದಾರೆ. ಗಲಭೆಕೋರರು ಅಧಿಕಾರದಲ್ಲಿರುವುದರಿಂದ ದೇಶದಲ್ಲಿ ಈಗ ಗಲಭೆಗಳಿಲ್ಲ ಎಂದು ಆರೋಪಿಸಿದ್ದಾರೆ. (ಇಂತಹ ಹಾಸ್ಯಾಸ್ಪದ ಆರೋಪಗಳನ್ನು ಮಾಡುವ ಮೂಲಕ ರಜಾ ಮತಾಂಧರು ಮತ್ತು ಜಿಹಾದಿಗಳನ್ನು ಬೆಂಬಲಿಸುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ! – ಸಂಪಾದಕರು)

(ಸೌಜನ್ಯ : TIMES NOW Navbharat)

ಸಂಪಾದಕೀಯ ನಿಲುವು

ಮುಸಲ್ಮಾನರೂ ಇಸ್ಲಾಮಿ ರಾಷ್ಟ್ರದ ಬೇಡಿಕೆ ಮಾಡತೊಡಗಿದರೆ ಏನಾಗುವುದು ? – ರಝಾ ಇವರ ಪ್ರಶ್ನೆ

ಜಗತ್ತಿನಲ್ಲಿ ಮುಸ್ಲಿಂ, ಕ್ರೈಸ್ತ, ಜ್ಯೂ ಮತ್ತು ಬೌದ್ಧ ರಾಷ್ಟ್ರಗಳಿವೆ; ಆದರೆ 100 ಕೋಟಿ ಜನಸಂಖ್ಯೆಯಿರುವ ಹಿಂದೂಗಳ ಒಂದೇ ಒಂದು ರಾಷ್ಟ್ರವಿಲ್ಲ. ಅವರು ಅದನ್ನು ಸ್ಥಾಪಿಸಿದರೆ, ಅದರಲ್ಲಿ ತಪ್ಪೇನಿದೆ ?

ಖಲಿಸ್ತಾನದ ಬೇಡಿಕೆಯು ಪ್ರತ್ಯೇಕತಾವಾದಿ ಬೇಡಿಕೆಯಾಗಿದೆ, ಅವರೊಂದಿಗೆ ಹಿಂದೂ ರಾಷ್ಟ್ರದ ಬೇಡಿಕೆಯ ತುಲನೆ ಎಂದಿಗೂ ಸಾಧ್ಯವಿಲ್ಲ ! ತೌಫೀರ ರಝಾರಂತಹ ಜನರು ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆ ನೀಡಿ ಹಿಂದೂ ಮತ್ತು ಸಿಖ್ಖರಲ್ಲಿ ಬಿರುಕು ಮೂಡಿಸುತ್ತಿದ್ದಾರೆ. ಇಂತಹವರ ಮೇಲೆ ದೇಶದ್ರೋಹದ ಅಪರಾಧವನ್ನು ದಾಖಲಿಸಿ ಅವರ ಮೇಲೆ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ !

ಮುಸಲ್ಮಾನರಿಗೆ ಈ ಹಿಂದೆಯೇ ಒಂದು ದೇಶವನ್ನು ನೀಡಲಾಗಿದೆ. ಅವರು ಭಾರತದಲ್ಲಿ ಪುನಃ ಇಂತಹ ಬೇಡಿಕೆ ಮಾಡುವ ಪ್ರಯತ್ನ ಮಾಡಿದರೆ, ಸರಕಾರ ಅವರನ್ನು ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಅಟ್ಟಬೇಕು ಎಂದು ರಾಷ್ಟ್ರಾಭಿಮಾನಿ ಹಿಂದೂಗಳು ಆಗ್ರಹಿಸಬಹುದು !