ಪಿ.ಎಫ್.ಐ.ಗೆ ಯುನೈಟೆಡ್ ಅರಬ ಎಮಿರೇಟ್ಸ್ ನಿಂದ ಆರ್ಥಿಕ ಸಹಾಯ ಒದಗಿಸಲಾಗುತ್ತಿತ್ತು !

ಈ ಹಣದಿಂದ ಮದ್ದುಗುಂಡು ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುವವರಿದ್ದರು !

ನವದೆಹಲಿ – ಪಾಪ್ಯುಲರ ಫ್ರಂಟ ಆಫ್ ಇಂಡಿಯಾ ಈ ನಿಷೇಧಿತ ಜಿಹಾದಿ ಸಂಘಟನೆಗೆ ವಿದೇಶದಿಂದ ಕೋಟಿಗಟ್ಟಲೆ ಹಣವನ್ನು ಪೂರೈಸಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ) ಮಾಹಿತಿ ನೀಡಿದೆ. ಯುನೈಟೆಡ್ ಅರಬ ಎಮಿರಾಟ್ಸ್ ನಿಂದ ಈ ಹಣವನ್ನು ಪೂರೈಸಲಾಗಿದೆ. ಈ ಹಣವನ್ನು ವಿವಿಧ ರಾಜ್ಯಗಳ ಕಾರ್ಯಕರ್ತರಿಗೆ ವಿತರಿಸಲಾಗಿತ್ತು. ಈ ಪ್ರಕರಣದಲ್ಲಿ ಎನ್ಐ.ಎ.ಯು ಕರ್ನಾಟಕ ಮತ್ತು ಕೇರಳದಿಂದ 5 ಜನರನ್ನು ಬಂಧಿಸಿದೆ. ಈ 5 ಜನರಿಗೆ ಬಿಹಾರನ ಫುಲವಾರಿ ಶರೀಫನಲ್ಲಿನ ಬಾಂಬಸ್ಫೋಟದ ಪ್ರಕರಣದಲ್ಲಿ ಬಂಧಿಸಲಾಗಿದೆ. ಇದರಲ್ಲಿ ಕರ್ನಾಟಕದ ಮಹಮ್ಮದ ಸಿನ್ನಾನ, ಸರ್ಫರಾಜ ನವಾಜ, ಇಕ್ಬಾಲ, ಅಬ್ದುಲ ರಫೀಕ ಮತ್ತು ಕೇರಳದ ಆಬಿದ ಸೇರಿದ್ದಾರೆ. ಅವರಿಂದ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಬ್ಯಾಂಕ ಖಾತೆಯ ಪರಿಶೀಲನೆಯಿಂದ ಹಣದ ಕೊಡುಕೊಳ್ಳುವಿಕೆಯ ಮಾಹಿತಿ ಸಿಕ್ಕಿದೆ.

ಎನ್.ಐ.ಎ.ಯು, ಯುನೈಟೆಡ್ ಅರಬ ಎಮಿರಾಟ್ಸ್ ನಿಂದ ಬಂದಿರುವ ಹಣವನ್ನು ಮದ್ದುಗುಂಡು ಮತ್ತು ಶಸ್ತ್ರಾಸ್ತ್ರಗಳ ಖರೀದಿಗಾಗಿ ಉಪಯೋಗಿಸುವವರಿದ್ದರು. ಈ ಹಣ ಬಂಧಿತ ಆರೋಪಿ ಸರ್ಫರಾಜ ಮತ್ತು ಮಹಮ್ಮದ ಸಿನ್ನಾನ ಇವರ ಖಾತೆಗೆ ಹವಾಲಾ ಮಾಧ್ಯಮದಿಂದ ಕಳುಹಿಸಲಾಗಿತ್ತು. ಇಕ್ಬಾಲ ಮತ್ತು ಅವನ ಸಹಚರರು ದುಬೈಯಿಂದ ಹಣವನ್ನು ಸಂಗ್ರಹಿಸಿದ್ದರು.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದಕರಿಗೆ ಮುಸ್ಲಿಂ ದೇಶದಿಂದ ಆರ್ಥಿಕ ಸಹಾಯವನ್ನು ಪೂರೈಸಲಾಗುತ್ತಿತ್ತು ಎನ್ನುವುದು ಈಗ ಬಹಿರಂಗವಾಗಿದೆ. ಇದು ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುವ ಪ್ರಯತ್ನವಾಗಿದೆ. ಇದನ್ನು ತಡೆಯಲು ಹಿಂದೂಗಳಿಗೆ ಸಂಘಟಿತರಾಗಿ ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲದೇ ಬೇರೆ ಮಾರ್ಗವಿಲ್ಲ.