ಪಂಜಾಬನಲ್ಲಿ ನಡೆಯಬೇಕಿದ್ದ ‘ಜಿ-20’ ಸಮ್ಮೇಳನ ರದ್ದುಗೊಳ್ಳುವ ಸಾಧ್ಯತೆ !

ಖಲಿಸ್ತಾನಿಯರ ಚಟುವಟಿಕೆಯ ಪರಿಣಾಮ !

ಅಮೃತಸರ (ಪಂಜಾಬ) – ಪಂಜಾಬನಲ್ಲಿ ಕಳೆದ ಕೆಲವು ದಿನಗಳಿಂದ ಖಲಿಸ್ತಾನವಾದಿಗಳಿಂದ ನಡೆಸಲಾಗುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಮಾರ್ಚ 15 ರಿಂದ 17 ಮತ್ತು ಮಾರ್ಚ 19 ಮತ್ತು 20 ಈ ಕಾಲಾವಧಿಯಲ್ಲಿ ಆಯೋಜಿಸಲಾಗಿರುವ ಜಿ-20 ಸಮ್ಮೇಳನವನ್ನು ರದ್ದುಗೊಳಿಸುವ ಸಾಧ್ಯತೆ ನಿರ್ಮಾಣವಾಗಿದೆ. ಮೂಲಗಳ ಪ್ರಕಾರ ಈ ಸಮ್ಮೇಳನವನ್ನು ರದ್ದುಗೊಳಿಸಲಾಗಿದೆ; ಆದರೆ ಅದನ್ನು ಇದುವರೆಗೂ ಅಧಿಕೃತವಾಗಿ ಘೋಷಿಸಿಲ್ಲ.

ಅಮೃತಸರದಲ್ಲಿರುವ ಕೆಲವು ಉಪಹಾರಗೃಹಗಳಿಗೆ ಕರೆ ಮಾಡಿ ಈ ಸಮ್ಮೇಳನವನ್ನು ರದ್ದುಗೊಳಿಸಲಾಗಿದೆಯೆಂದು ಸರಕಾರದಿಂದ ತಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಶಾಸಕ ಗುರಜೀತ ಔಜಲಾ ಮತ್ತು ಸಂಸದ ಸುಖಪಾಲಸಿಂಹ ಖೆಹರಾ ಇವರು ಟ್ವೀಟ ಮಾಡಿ ಈ ಸಮ್ಮೇಳನ ರದ್ದುಗೊಂಡಿರುವ ಸಂಶಯವನ್ನು ಉಪಸ್ಥಿತಗೊಳಿಸಿದ್ದಾರೆ. ಈ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

2. ಸಮ್ಮೆಳನವನ್ನು ಭದ್ರತಾ ವ್ಯವಸ್ಥೆಯ ಸಲಹೆಯನುಸಾರ ರದ್ದುಗೊಳಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆಯೆಂದು ಹೇಳಲಾಗುತ್ತಿದೆ. ಖಲಿಸ್ತಾನವಾದಿಗಳ ಹೆಚ್ಚುತ್ತಿರುವ ಉಪದ್ರವದಿಂದ ಭದ್ರತಾ ವ್ಯವಸ್ಥೆಯು ಸಮ್ಮೇಳನವನ್ನು ರದ್ದುಗೊಳಿಸುವಂತೆ ಸಲಹೆ ನೀಡಿದೆಯೆಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

  • ಒಂದು ವೇಳೆ ಹೀಗೆ ನಡೆದರೆ, ಇದು ಭಾರತಕ್ಕೆ ನಾಚಿಕೆಗೇಡು !
  • ಭಾರತ ಖಲಿಸ್ತಾನಿಯರ ಬಗ್ಗೆ ಯಾವಾಗ ಗಂಭೀರವಾಗಿ ಪರಿಗಣಿಸಲಿದೆ ? ಎನ್ನುವ ಪ್ರಶ್ನೆಯೇಳುತ್ತದೆ !