ಲಕ್ಷ್ಮಣಪುರಿ – ಉತ್ತರ ಪ್ರದೇಶ ಸರಕಾರದಿಂದ ನಡೆಯುತ್ತಿರುವ ‘ರಾಮಕಥಾ ಸಂಗ್ರಹಾಲಯ’ವನ್ನು ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ಗೆ ಒಪ್ಪಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ಟ್ರಸ್ಟ್ ಮತ್ತು ಸರಕಾರ ಇವರಲ್ಲಿ ಒಪ್ಪಂದ ಮಾಡಿಕೊಳ್ಳುವರು. ಶ್ರೀರಾಮ ಜನ್ಮಭೂಮಿ ಹಿಂದೂಗಳಿಗೆ ಹಿಂತಿರುಗಿ ಪಡೆಯುವುದಕ್ಕೆ ಸುದೀರ್ಘ ಕಾನೂನಿನ ಹೋರಾಟ ಮಾಡಬೇಕಾಯಿತು. ಅದಕ್ಕಾಗಿ ಅವಶ್ಯಕವಾಗಿರುವ ದಾಖಲೆ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾಗಿತ್ತು. ಟ್ರಸ್ಟ್ ಈ ಸಂಗ್ರಾಲಯ ವಶಕ್ಕೆ ಪಡೆದ ನಂತರ ಈ ದಾಖಲೆ ಜನರಿಗಾಗಿ ಬಿಡುಗಡೆಗೊಳಿಸುವರು ಹಾಗೂ ಶ್ರೀರಾಮ ಜನ್ಮ ಭೂಮಿಯ ಸ್ಥಳದಲ್ಲಿ ಉತ್ಖನದ ಸಮಯದ ನಂತರ ದೊರೆತಿರುವ ಕಲಾಕೃತಿಗಳು ಕೂಡ ಎಲ್ಲರಿಗೂ ನೋಡುವುದಕ್ಕಾಗಿ ಸಾರ್ವಜನಿಕಗೊಳಿಸುವರು . ಪ್ರಸ್ತುತ ಉತ್ತರ ಪ್ರದೇಶ ಸರಕಾರದ ಸಾಂಸ್ಕೃತಿಕ ಇಲಾಖೆ ‘ರಾಮಕಥಾ ಸಂಗ್ರಹಾಲಯ’ ನಡೆಸುತ್ತದೆ.
(ಸೌಜನ್ಯ : Punjab Kesari UP)