ಪ್ರಚಂಡ ಸರಕಾರವು ವಿರೋಧಿ ಪಕ್ಷದಲ್ಲಿನ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಗೆ ಬೆಂಬಲ ನೀಡಿದ ಪರಿಣಾಮ !
ಕಾಠ್ಮಂಡು (ನೇಪಾಳ) – ನೇಪಾಳದ ಪುಷ್ಪ ಕಮಲ ದಹಲ ಪ್ರಚಂಡ ಇವರ ಸರಕಾರದಲ್ಲಿನ ಉಪ ಪ್ರಧಾನಮಂತ್ರಿ ರಾಜೇಂದ್ರ ಸಿಂಹ ಲಿಂಗಡೆನ್ ಸಹಿತ ರಾಷ್ಟ್ರೀಯ ಪ್ರಜಾತಂತ್ರ ಪಕ್ಷದ (ಆರ್.ಪಿ.ಪಿ.) ೪ ಸಚಿವರು ರಾಜೀನಾಮೆ ನೀಡಿದ್ದಾರೆ. ಪ್ರಚಂಡ ಸರಕಾರವು ಮಿತ್ರ ಪಕ್ಷದಿಂದ ಹೊರಬಂದು ವಿರೋಧಿ ಪಕ್ಷ ನೇಪಾಳಿ ಕಾಂಗ್ರೆಸ್ಸಿನ ರಾಮಚಂದ್ರ ಪೌಡೆಲ ಇವರಿಗೆ ರಾಷ್ಟ್ರಪತಿ ಸ್ಥಾನಕ್ಕಾಗಿ ಬೆಂಬಲ ಘೋಷಿಸಿರುವರಿಂದ ಅಸಮಾಧಾನಗೊಂಡಿದ್ದರಿಂದ ಆರ್.ಪಿ.ಪಿ. ಯ ಸಚಿವರು ಸರಕಾರದಿಂದ ಹೊರಬರುವ ನಿರ್ಣಯ ತೆಗೆದುಕೊಂಡರು. ಪಕ್ಷದಿಂದ ಈ ಸಚಿವರ ಇಲ್ಲಿಯವರೆಗೆ ಅಧಿಕೃತವಾಗಿ ಸರಕಾರದ ಬೆಂಬಲ ಹಿಂಪಡೆದಿಲ್ಲ.
Nepal’s ruling coalition in turmoil as deputy PM and 3 other ministers quit https://t.co/MuVocpX1tf pic.twitter.com/hapRqnDGby
— Reuters (@Reuters) February 25, 2023