ಅಮೃತಸರದಲ್ಲಿ ಸಾವಿರಾರು ಸಶಸ್ತ್ರ ಖಲಿಸ್ತಾನ ಬೆಂಬಲಿಗರಿಂದ ಪೊಲೀಸ್ ಠಾಣೆಗೆ ಘೆರಾವು !

  • ” ವಾರಿಸ್ ಪಂಜಾಬ ದೆ ” ಈ ಖಲಿಸ್ತಾನಿ ಸಂಘಟನೆಯ ಮುಖ್ಯಸ್ಥ ಅಮೃತಪಾಲಸಿಂಹ ಇವನ ಸಹಚರನನ್ನು ಬಿಡುಗಡೆಗೊಳಿಸಬೇಕೆಂಬ ಬೇಡಿಕೆ !

  • ಬಂದೂಕುಗಳು , ಕತ್ತಿಗಳು ಮತ್ತು ಲಾಠಿಗಳ ಸಹಿತ ಬಂದ ಖಲಿಸ್ತಾನಿಗಳು !

  • ಪೊಲೀಸರ ಅಸಹಾಯಕತೆ !

ಅಮೃತಸರ (ಪಂಜಾಬ) – ಅಜನಾಲಾದಲ್ಲಿ ‘ವಾರಿಸ ಪಂಜಾಬ ದೆ ‘ ಈ ಖಲಿಸ್ತಾನಿ ಸಮರ್ಥಕ ಸಂಘಟನೆಯ ಪ್ರಮುಖ ಅಮೃತ ಪಾಲಸಿಂಹ ಇವನ ಸಹಚರ ತೂಫಾನ ಸಿಂಹ ಇವನನ್ನು ಬಂಧಿಸಿರುವುದನ್ನು ನಿಷೇಧಿಸಲು ಅವನ ಸಾವಿರಾರು ಬೆಂಬಲಿಗರು ಇಲ್ಲಿಯ ಪೊಲೀಸ ಠಾಣೆಗೆ ಘೇರಾವ ಹಾಕಿದರು . ಅವರ ಕೈಯಲ್ಲಿ ಬಂದೂಕುಗಳು, ಕತ್ತಿಗಳು ಮತ್ತು ಲಾಠಿಗಳು ಇದ್ದವು. ಆ ಸಮಯದಲ್ಲಿ ಪೊಲೀಸರು ರಸ್ತೆಯಲ್ಲಿ ಬ್ಯಾರಿಕೆಡ್ಸ್ (ತಾತ್ಕಾಲಿಕ ತಡೆ) ಹಾಕಿದ್ದರು. ಅದನ್ನು ಉಲ್ಲಂಘಿಸಿ ಖಲಿಸ್ತಾನಿ ಬೆಂಬಲಿಗರು ಪೊಲೀಸ ಠಾಣೆಯ ಆವರಣದೊಳಗೆ ತಲುಪಿದರು. ಅವರು ‘ಖಲಿಸ್ತಾನ ಜಿಂದಾಬಾದ’ ಘೋಷಣೆ ನೀಡುತ್ತಿದ್ದರು. ಆ ಸಮಯದಲ್ಲಿ ಅಮೃತ ಪಾಲಸಿಂಹ ಪೊಲೀಸ್ ಠಾಣೆ ಒಳಗೆ ಹೋದನು ಮತ್ತು ಅವನ ಅಪರಾಧ ರದ್ದು ಗೊಳಿಸುವಂತೆ ಆಗ್ರಹಿಸಿದನು. ಎಲ್ಲಿಯವರೆಗೆ ಅಪರಾಧ ರದ್ದುಗೊಳಿಸುವ ತನಕ ನಾವು ಇಲ್ಲಿಂದ ಹೋಗುವುದಿಲ್ಲ, ಎಂದು ಅವನು ಘೋಷಿಸಿದನು. ಈ ಬೆಂಬಲಿಗರು ಇಲ್ಲಿ ಗುರು ಗ್ರಂಥ ಸಾಹೀಬದ ಪಲ್ಲಕ್ಕಿ ತಂದು ,ಅಲ್ಲಿ ಅವರು ಭಜನೆ ಮಾಡಲು ಪ್ರಾರಂಭಿಸಿದರು. ಅಮೃತಪಾಲನ ವಿರುದ್ಧ ಸಾಮಾಜಿಕ ಮಾಧ್ಯಮದಿಂದ ಟೀಕಿಸಿರುವ ಯುವಕನನ್ನು ಅಪಹರಿಸಿ ಅವನನ್ನು ಥಳಿಸಲಾಗಿತ್ತು. ಈ ಪ್ರಕರಣದಲ್ಲಿ ಅಮೃತಪಾಲ ಸಹಿತ ೩೦ ಜನರ ವಿರುದ್ಧ ದೂರು ದಾಖಲಿಸಲಾಗಿತ್ತು. ಇದೇ ಪ್ರಕರಣದಲ್ಲಿ ಪೊಲೀಸರು ತೂಫಾನ ಸಿಂಹನನ್ನು ಬಂಧಿಸಿದ್ದಾರೆ. ಇದರಿಂದ ಅಮೃತ ಪಾಲನು ಕೆರಳಿದನು. ಅದರ ನಂತರ ಅವನು ಪೋಲಿಸ್ ಠಾಣೆ ಹೊರಗೆ ಪ್ರತಿಭಟನೆ ನಡೆಸುವ ಘೋಷಣೆ ಮಾಡಿದ್ದನು.

ನಿಷ್ಕ್ರಿಯ ಪೊಲೀಸರು !

ಅಮೃತಪಾಲ ಇವನು ೨ ದಿನಗಳ ಹಿಂದೆ ಪೊಲೀಸ ಠಾಣೆಗೆ ಘೇರಾವ ಹಾಕುವುದಾಗಿ ಘೋಷಿಸಿದ್ದನು; ಆದರೂ ಕೂಡ ಪಂಜಾಬ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸದೆ ಇರುವುದರಿಂದ ಅಮೃತಪಾಲನ ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ಅಲ್ಲಿಗೆ ಬಂದರು. ಸದ್ಯ ಬಿಗುವಿನ ವಾತಾವರಣವಿದ್ದು ಹೆಚ್ಚಿನ ಸಂಖ್ಯೆಯ ಪೊಲೀಸ ಬಂದೋಬಸ್ತ್ ಮಾಡಲಾಗಿದೆ. ಅಮೃತಪಾಲನು ಈ ಸಮಯದಲ್ಲಿ ಅಜನಾಲಾ ಇಲ್ಲಿಯ ಪೊಲೀಸ ಅಧಿಕಾರಿ ಸತಿಂದರ ಸಿಂಹ ಇವರ ಜೊತೆ ಚರ್ಚಿಸಿದನು. ಅವನು ತೂಫಾನ ಸಿಂಹ ಇವನನ್ನು ಬಿಡುಗಡೆಗೊಳಿಸಲು ಪೊಲೀಸರಿಗೆ ಒಂದು ಗಂಟೆಯ ಸಮಯಾವಕಾಶ ನೀಡಿದ್ದನು.

ಸಂಪಾದಕೀಯ ನಿಲುವು

ಪಂಜಾಬದಲ್ಲಿ ಖಲಿಸ್ತಾನಿಗಳ ಕಿರುಕುಳ ಹೇಗೆ ಹೆಚ್ಚಾಗುತ್ತಿದೆ ಎಂಬುದೇ ಇದರಿಂದ ತಿಳಿದು ಬರುತ್ತಿದೆ. ಆದರೂ ಕೂಡ ರಾಜ್ಯ ಮತ್ತು ಕೇಂದ್ರ ಸರಕಾರಗಳು ಇದನ್ನು ಅಷ್ಟೋಂದು ಗಾಂಭೀರ್ಯದಿಂದ ನೋಡುತ್ತಿಲ್ಲ, ಎಂಬಂತಹ ಚಿತ್ರಣ ಕಂಡುಬರುತ್ತಿದೆ. ಹಿಂದಿನ ಇತಿಹಾಸ ಅವಲೋಕಿಸಿದಾಗ ಯಾವುದಾದರೂ ದೊಡ್ಡ ಘಟನೆ ನಡೆದ ನಂತರ ಸರಕಾರ ಎಚ್ಚರಗೊಳ್ಳುವುದೇ? ಎಂಬ ಪ್ರಶ್ನೆ ಕೂಡ ಉದ್ಭವಿಸುತ್ತದೆ !