ಬಾಗೇಶ್ವರ ಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಭವಿಷ್ಯವಾಣಿ !

ಛತ್ತರಪುರ (ಮಧ್ಯಪ್ರದೇಶ) – ಯಾವ ವ್ಯಕ್ತಿಯಲ್ಲಿ ಸನಾತನದ ರಕ್ತವಿದೆಯೋ, ಧ್ಯೇಯವಿದೆಯೋ, ಅವನು ಮುಕ್ತ ಮನಸ್ಸಿನಿಂದ ಹಿಂದೂ ರಾಷ್ಟ್ರವನ್ನು ಬೆಂಬಲಿಸುವನು, ಹಿಂದೂ ರಾಷ್ಟ್ರದ ಬೇಡಿಕೆ ಮಾಡುವನು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವನು; ಆದರೆ ಯಾರ ರಕ್ತದಲ್ಲಿ ಕಪಟತನವಿದೆಯೋ, ಅವನು ಹಿಂದೂ ರಾಷ್ಟ್ರದ ವಿಷಯದಲ್ಲಿ ಮಾತನಾಡುವುದಿಲ್ಲ. ನಮಗೆ ಅದರ ಬಗ್ಗೆ ಏನೂ ಅನಿಸುವುದಿಲ್ಲ. ಬದಲಾಗಿ ಭಾರತ ಹಿಂದೂ ರಾಷ್ಟ್ರವೆಂದು ಘೋಷಿಸಲ್ಪಡುವುದು ಎಂದು ನಮಗೆ ತಿಳಿದಿದೆ. ಹಿಂದೂ ರಾಷ್ಟ್ರದ ನಿಮಿತ್ತದಿಂದ ಕ್ರಾಂತಿಯಾಗಲಿದೆ. ಆದಷ್ಟು ಬೇಗನೆ ಈ ಕ್ರಾಂತಿಯಿಂದ ಸಂಸತ್ತಿನಲ್ಲಿ ಏನೋ ನಡೆಯಲಿದೆ, ಎಂದು ಬಾಗೇಶ್ವರ ಧಾಮನ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ತಮ್ಮ ದರಬಾರಿನಲ್ಲಿ ಭಕ್ತರ ಎದುರಿಗೆ ಭವಿಷ್ಯವಾಣಿ ನುಡಿದಿದ್ದಾರೆ. ಧೀರೇಂದ್ರಕೃಷ್ಣ ಶಾಸ್ತ್ರಿಯವರು ಈ ಸಂದರ್ಭದಲ್ಲಿ ಭೋಪಾಲ ಭಾಜಪ ಶಾಸಕ ಸಾಧ್ವಿ ಪ್ರಜ್ಞಾಸಿಂಹ ಠಾಕೂರ ಇವರ ಕೋರಿಕೆಯಂತೆ `ಸನಾತನ ಬೋರ್ಡ’ ಸ್ಥಾಪನೆಯನ್ನು ಬೆಂಬಲಿಸಿದರು. ಬಾಗೇಶ್ವರ ಧಾಮನಲ್ಲಿ ಫೆಬ್ರುವರಿ 13 ರಿಂದ 19 ಈ ಕಾಲಾವಧಿಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಯಜ್ಞ ನಡೆಸಲಾಗುತ್ತಿದೆ.
‘हिंदू राष्ट्र को लेकर संसद में कुछ होने वाला है’! बागेश्वर धाम के धीरेन्द्र शास्त्री का बड़ा दावाhttps://t.co/ytTZmnNDmx#DhirendraShastri #BageshwarDham
— Oneindia Hindi (@oneindiaHindi) February 16, 2023
ಕಾಂಗ್ರೆಸ್ಸಿನ ಮುಖಂಡ ಕಮಲನಾಥರು ಇತ್ತೀಚೆಗಷ್ಟೇ ಬಾಗೇಶ್ವರ ಧಾಮಗೆ ಹೋಗಿದ್ದರು. ಅವರು `ಭಾರತ ಸಂವಿಧಾನದ ಮೂಲಕ ನಡೆಯುತ್ತದೆ’, ಎಂದು ಹೇಳಿದ್ದರು. ಈ ವಿಷಯದಲ್ಲಿ ಧೀರೇಂದ್ರಕೃಷ್ಣ ಶಾಸ್ತ್ರಿಯವರು, ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಯಾರು ಬೆಂಬಲಿಸುತ್ತಿದ್ದಾರೆ ಯಾರು ವಿರೋಧಿಸುತ್ತಿದ್ದಾರೆ ಎನ್ನುವ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರು ಬರುತ್ತಾರೆಯೋ ಅವರಿಗೆ ಧನ್ಯವಾದ. ಬಾಗೇಶ್ವರ ಧಾಮದಿಂದ ಎಲ್ಲರಿಗೂ ಆಶೀರ್ವಾದವಿದೆ ಎಂದು ಹೇಳಿದರು.
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation