ಚಂದಿಗಡ – ಹರಿಯಾಣದಲ್ಲಿನ ಕರನಾಲ ಇಲ್ಲಿಯ ನಂದಿಗ್ರಾಮ ಗೋಶಾಲೆಯಲ್ಲಿ ಮೇವಿನಲ್ಲಿ ವಿಷ ಬೆರೆಸಿ ೪೫ ಗೋವುಗಳ ಹತ್ಯೆ ಮಾಡಿರುವ ಪ್ರಕರಣದಲ್ಲಿ ವಿಶಾಲ, ರಜತ, ಸೂರಜ ಮತ್ತು ಸೋನು ಈ ಮತಾಂತರ ಗೊಂಡಿರುವ ಕ್ರೈಸ್ತರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಅಮರ ಎಂಬ ಸೂತ್ರಧಾರ ಪರಾರಿಯಾಗಿದ್ದಾನೆ. ಬಂಧಿಸಿರುವ ನಾಲ್ಕು ಜನ ಮೃತ ಗೋವುಗಳ ವಶಕ್ಕೆ ಪಡೆಯುವ ದಲ್ಲಾಳಿಯ ಬಳಿ ಕೆಲಸಕ್ಕೆ ಇದ್ದಾರೆ. ಈ ಗೋಶಾಲೆಯಲ್ಲಿನ ಗೋವುಗಳ ಸಾವಿನ ಪ್ರಮಾಣ ಕಡಿಮೆ ಇದೆ. ಆದ್ದರಿಂದ ಗೋವುಗಳ ಮೂಳೆ, ಕೊಬ್ಬು ಮತ್ತು ಚರ್ಮ ಇದರ ಮಾರಾಟದ ಪ್ರಮಾಣ ಕಡಿಮೆಯಾಗಿದ್ದೂ ಅವರ ಉದ್ಯೋಗದ ಮೇಲೆ ವಿಪರೀತ ಪರಿಣಾಮ ಆಗುತ್ತಿತ್ತು. ಈ ಕಾರಣದಿಂದ ಅವರು ಗೋವುಗಳ ಹತ್ಯೆ ಮಾಡಿದ್ದರು.
हिंदू से बने ईसाई, गुड़ में जहर मिला मार डाले 45 गाय: कॉन्ग्रेस नेता के पति के पास मृत गायों को उठाने का ठेका, कम मौतों से धंधा हो गया था मंदा#Haryana https://t.co/hTUmpDxH7p
— ऑपइंडिया (@OpIndia_in) February 13, 2023
೧. ಜನವರಿ ೨೬, ೨೦೨೩ ರಿಂದ ಪ್ರತಿದಿನ ರಾತ್ರಿ ಒಂದೊಂದು ಗೋವನ್ನು ಹತ್ಯೆ ಮಾಡುವ ಪ್ರಕ್ರಿಯೆ ನಡೆಯುತ್ತಿತ್ತು. ಕೆಲವು ಸಮಯದ ನಂತರ ೪೫ ಗೋವುಗಳು ಕೆಲವು ನಿರ್ಧಾರೀತಿ ದಿನಗಳ ಅಂತರದಲ್ಲಿ ಸಾವನ್ನಪ್ಪಿದವು.
೨. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಮನೋಹರ ಲಾಲ ಖಟ್ಟರ ಇವರು ಉನ್ನತ ಮಟ್ಟದ ಸಮಿತಿ ಸ್ಥಾಪಿಸಿ ವಿಚಾರಣೆಯ ಆದೇಶ ನೀಡಿದ್ದರು.
೩. ವಿಚಾರಣೆಯ ಸಮಯದಲ್ಲಿ ವಿಶಾಲ ಮತ್ತು ರಜತ ಇವರು ಮೃತ ಗೋವುಗಳ ಮಾರಾಟದಿಂದ ಅವರಿಗೆ ೮ ರಿಂದ ೧೦ ಸಾವಿರ ರೂಪಾಯಿ ಸಿಗುತ್ತಿರುವ ಮಾಹಿತಿ ನೀಡಿದರು. ಇವರಿಬ್ಬರೂ ಗೋಶಾಲೆಯಿಂದ ಮೃತ ಗೋವುಗಳನ್ನು ಪಡೆದು ಅದನ್ನು ಮಾರುತ್ತಿದ್ದರು.
೪. ಈ ನಾಲ್ಕು ಜನ ಈ ಹಿಂದೆ ಕೂಡ ೩-೪ ಸಲ ಈ ರೀತಿ ಗೋವುಗಳಿಗೆ ವಿಷ ನೀಡಿ ಅವುಗಳ ಹತ್ಯೆ ಮಾಡಿದ್ದರು.
೫. ಈ ಗೋಶಾಲೆಯಲ್ಲಿನ ಮೃತ ಗೋವುಗಳನ್ನು ಸಾಗಿಸುವ ಕೆಲಸ ಕಾಂಗ್ರೆಸ್ಸಿನ ನಾಯಕಿ ರಾಣಿ ಕಾಂಬೋಜ ಇವರ ಪತಿ ದೀಪಕ ಮೆಹರಾ ಇವರಿಗೆ ನೀಡಿದ್ದಾರೆ. ಮೆಹರಾ ಇವರು ಈ ಜವಾಬ್ದಾರಿಯನ್ನು ಅಮಿತ ಇವನಿಗೆ ನೀಡಿದ್ದರು. ೪೫ ಗೋವುಗಳು ಮೃತಪಟ್ಟ ನಂತರ ಕಾಂಗ್ರೆಸ್ಸಿನವರು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಅದರಲ್ಲಿ ರಾಣಿ ಕಂಬೋಜ ಸಹಭಾಗಿ ಆಗಿದ್ದರು.
ಸಂಪಾದಕರ ನಿಲುವು* ಗೋವುಗಳನ್ನು ಅಮಾನುಷವಾಗಿ ಹತ್ಯೆ ಮಾಡಿರುವವರಿಗೆ ಜೀವಾವಧಿ ಶಿಕ್ಷೆ ನೀಡುವುದು ಅವಶ್ಯಕ ! ಮತಾಂಧ ಮುಸಲ್ಮಾನರ ಜೊತೆ ಜೊತೆಗೆ ಕ್ರೈಸ್ತರು ಗೋವುಗಳ ಹತ್ಯೆ ಮಾಡುತ್ತಿರುವುದು ಈ ಉದಾಹರಣೆಯಿಂದ ತಿಳಿದು ಬಂದಿದೆ ! |