ಹರಿಯಾಣದ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳಿಗೆ ನಿಯಮಾವಳಿ ಘೋಷಣೆ !
ಚಂಡಿಗಡ್ – ಹರಿಯಾಣ ಸರಕಾರದ ಆರೋಗ್ಯ ಇಲಾಖೆಯಿಂದ ವಸ್ತ್ರ ಸಂಹಿತೆಯ ಬಗ್ಗೆ ನಿಯಮಾವಳಿಯನ್ನು ಸಿದ್ದಗೊಳಿಸಿದೆ. ಈ ಮೂಲಕ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳು ಜೀನ್ಸ್, ಪ್ಲಾಝೋ, ಬ್ಯಾಕ್ ಲೆಸ್ ಟಾಪ್, ಸ್ಕರ್ಟ್ ಇಂತಹ ಫ್ಯಾಷನೆಬಲ್ ಬಟ್ಟೆಗಳನ್ನು ಧರಿಸುವುದು ನಿಷೇಧಿಸಿದ್ದಾರೆ. ಹಾಗೂ ಪುರುಷ ಸಿಬ್ಬಂದಿಗಳು ಕಾಲರ್ ಗಿಂತ ಹೆಚ್ಚಿನ ಕೂದಲು ಬಿಡಬಾರದು, ಅದರ ಬಗ್ಗೆ ಕೂಡ ತಿಳುವಳಿಕೆ ನೀಡಿದೆ. ಮಹಿಳಾ ಸಿಬ್ಬಂದಿಗಳು ಬೆಲೆ ಬಾಳುವ ಒಡವೆ, ಮೇಕಪ್ ಮತ್ತು ಉಗುರು ಬೆಳೆಸುವುದು ನಿಷೇಧಿಸಿದೆ. ಈ ನಿಯಮಗಳ ಪಾಲನೆ ಮಾಡದೇ ಇರುವ ಸಿಬ್ಬಂದಿಗಳನ್ನು ಕರ್ತವ್ಯದಲ್ಲಿ ಉಪಸ್ಥಿತರಿಲ್ಲವೆಂದು ಕ್ರಮ ಕೈಗೊಳ್ಳುಲಿದೆ.
Haryana govt announces a new dress code policy for medical &non-medical staff in state govt hospitals. Jeans, palazzo pants, skirts banned; female staff to not wear jewellery or heavy makeup, while male staff to not grow their hair long
Visuals from Dist Civil Hospital in Rohtak pic.twitter.com/HLEtKpyWWa
— ANI (@ANI) February 10, 2023