ಬ್ಯಾಟರಿ ನಿರ್ಮಾಣಕ್ಕಾಗಿ ಬೇಕಾಗುವ ಮಹತ್ವದ ಧಾತು !
(‘ಲಿಥಿಯಂ ಎಂದರೆ ‘ನಾನ್-ಫೇರಸ ಮೆಟಲ್’ – ಅಲೋಹ ಧಾತು)
ನವ ದೆಹಲಿ – ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಪ್ರದೇಶದಲ್ಲಿ ೫೯ ಲಕ್ಷ ಟನ್ ‘ಲಿಥಿಯಂ’ನ (ನಾನ್-ಫೇರಸ ಮೆಟಲ್’ – ಅಲೋಹ ಧಾತು) ಸಂಗ್ರಹ ಪತ್ತೆಯಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಲಿಥಿಯಂನ ಸಂಗ್ರಹ ಸಿಕ್ಕಿದೆ. ಲಿಥಿಯಂಅನ್ನು ಮೊಬೈಲ್, ಲ್ಯಾಪಟಾಪ್, ಎಲೆಕ್ಟ್ರಿಕ್ ವಾಹನಗಳು ಇದರ ಬ್ಯಾಟರಿ ಮತ್ತು ಇತರ ಉಪಕರಣಗಳನ್ನು ಚಾರ್ಜ್ ಮಾಡುವುದಕ್ಕೆ ಬ್ಯಾಟರಿ ನಿರ್ಮಾಣಕ್ಕಾಗಿ ಮಾಡುತ್ತಾರೆ. ಇದು ಒಂದು ದುರ್ಲಭ ಧಾತು ಆಗಿದೆ. ಇದಕ್ಕಾಗಿ ಭಾರತಕ್ಕೆ ಇಲ್ಲಿಯವರೆಗೆ ಚೀನಾ ಮತ್ತು ಇತರ ದೇಶಗಳ ಮೇಲೆ ಅವಲಂಬಿಸಬೇಕಾಗುತ್ತದೆ; ಆದರೆ ಈಗ ಭಾರತದಲ್ಲಿ ಈ ಸಂಗ್ರಹ ಸಿಕ್ಕಿರುವುದರಿಂದ ಇತರ ದೇಶಗಳ ಮೇಲೀನ ಅವಲಂಬನೆ ಕಡಿಮೆ ಆಗುವುದು. ಭಾರತದಲ್ಲಿ ಲಿಥಿಯಂನ ಉತ್ಪಾದನೆ ತುಂಬಾ ಕಡಿಮೆ ಇದೆ. ೨೦೨೦ ರಲ್ಲಿ ಲಿಥಿಯಂ ಆಮದಿನ ಸಂದರ್ಭದಲ್ಲಿ ಭಾರತ ಜಗತ್ತಿನ ೪ ನೇ ಸ್ಥಾನದಲ್ಲಿತ್ತು. ಭಾರತ ಲಿಥಿಯಂ ಬ್ಯಾಟರಿಗಳಲ್ಲಿ ಶೇಕಡ ೮೦ ರಷ್ಟು ಬ್ಯಾಟರಿ ಚೀನಾದಿಂದ ಆಮದ ಮಾಡುತ್ತದೆ. ಈ ಕ್ಷೇತ್ರದಲ್ಲಿ ಸ್ವಾವಲಂಬಿ ಆಗುವುದಕ್ಕೆ ಭಾರತ ಅರ್ಜೆಂಟಿನ, ಚಿಲಿ, ಆಸ್ಟ್ರೇಲಿಯಾ ಮತ್ತು ಬೋಲಿವಿಯ ಇಂತಹ ಲಿಥಿಯಂ ಸಮೃದ್ಧ ದೇಶದ ಗಣಿಯಿಂದ ಪಾಲು ಕೊಳ್ಳುವ ಕುರಿತಾದ ಯೋಜನೆಯಲ್ಲಿ ಕೆಲಸ ಮಾಡುತ್ತಿದೆ.
(ಸೌಜನ್ಯ : Republic World)