‘ನಾನು ಹಿಂದೂ ವಿರೋಧಿಯಲ್ಲ, ಮನುವಾದ ವಿರೋಧಿ’ ! (ಅಂತೆ) – ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ

ಬೆಂಗಳೂರು – ನನ್ನನ್ನು ಹಿಂದೂ ಧರ್ಮವಿರೋಧಿ ಎಂದು ಹೇಳುತ್ತಾರೆ; ಆದರೆ ನಾನು ಹಿಂದೂ ಧರ್ಮವಿರೋಧಿಯಲ್ಲ. ನಾನು ಹಿಂದೂ ಆಗಿದ್ದೇನೆ. ನಾನು ಮನುವಾದಿ ವಿರೋಧಿಯಾಗಿದ್ದೇನೆ. ಹಿಂದುತ್ವ ವಿರೋಧಿ ಆಗಿದ್ದೇನೆ. ಹಿಂದೂ ಧರ್ಮ ಬೇರೆ ಮತ್ತು ಹಿಂದೂತ್ವ ಬೇರೆ ಎಂದು ಕಾಂಗ್ರೆಸ್ ನಾಯಕ ಮತ್ತು ರಾಜ್ಯದ ವಿರೋಧಿ ಪಕ್ಷ ನಾಯಕ ಸಿದ್ಧರಾಮಯ್ಯನವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಅವರು ಹಿಂದೂ ಧರ್ಮದ ವಿಷಯದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕಾರಣದಿಂದ ಅವರ ಮೇಲೆ ಟೀಕೆಗಳು ಆಗತೊಡಗಿದ ಬಳಿಕ ಅವರು ಈ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಸಂಪಾದಕೀಯ ನಿಲುವು

ಸಿದ್ಧರಾಮಯ್ಯನವರು ಎಂದಾದರೂ ಮನುಸ್ಮೃತಿಯನ್ನು ಅಧ್ಯಯನ ಮಾಡಿದ್ದಾರೆಯೇ ? ಅಧ್ಯಯನ ಮಾಡಿದ್ದರೆ, ಅವರು ಈ ರೀತಿ ಹೇಳಿಕೆ ನೀಡುತ್ತಿರಲಿಲ್ಲ ! ಕೇವಲ ದಲಿತರ ಮತಗಳನ್ನು ಪಡೆಯಲು ಹಿಂದೂಗಳ ಶ್ರೇಷ್ಠ ಧರ್ಮಗ್ರಂಥಗಳ ಮೇಲೆ ಈ ರೀತಿ ಹೇಳಿಕೆ ನೀಡುವುದು ಹಿಂದೂ ವಿರೋಧಿಯಾಗಿದೆ ಎಂಬುದನ್ನು ಗಮನಿಸಿರಿ !

ಜಿಹಾದಿ ಭಯೋತ್ಪಾದನೆ ಯಾವ ಪುಸ್ತಕದ ಕಾರಣದಿಂದ ಆಗುತ್ತದೆ, ಎಂಬುದು ಸಿದ್ಧರಾಮಯ್ಯನವರು ಹೇಳಲು ಎಂದಿಗೂ ಧೈರ್ಯ ಮಾಡಲಾರರು; ಆದರೆ ಹಿಂದೂಗಳು ಸಹಿಷ್ಣು ಆಗಿರುವುದರಿಂದ ತಮ್ಮ ಧರ್ಮಗ್ರಂಥಗಳ ಅಧ್ಯಯನ ಮಾಡದೇ ಮಾತನಾಡುವ ಧೈರ್ಯ ಮಾಡುತ್ತಾರೆ !