ಟರ್ಕಿಯಲ್ಲಿನ ಭೂಕಂಪದಿಂದ ೫ ಸಾವಿರಕ್ಕಿಂತಲೂ ಹೆಚ್ಚಿನ ಜನರ ಸಾವು

ಟರ್ಕಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಅಂಕಾರ (ತುರ್ಕಸ್ಥಾನ) – ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಇಲ್ಲಿಯವರೆಗೆ ಟರ್ಕಿ ಮತ್ತು ಸಿರಿಯಾ ದೇಶದ ೫ ಸಾವಿರಗಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದ್ದೂ ಇದರಲ್ಲಿ ೧೫ ಸಾವಿರಗಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಕಳೆದ ೨೪ ಗಂಟೆಯಲ್ಲಿ ಟರ್ಕಿಯಲ್ಲಿ ೪ ಸಲ ಭೂಕಂಪನದ ಅರಿವಾಗಿದೆ. ಇದರಲ್ಲಿ ಇಲ್ಲಿಯವರೆಗೆ ೧೦ ನಗರದಲ್ಲಿನ ೨ ಸಾವಿರಗಿಂತಲೂ ಹೆಚ್ಚಿನ ಕಟ್ಟಡಗಳು ಕುಸಿದಿದೆ. ಸಿರಿಯಾದಲ್ಲಿ ಕನಿಷ್ಠವೆಂದರೆ ೭೮೩ ಜನರು ಸಾವನ್ನಪ್ಪಿದ್ದಾರೆ ಹಾಗೂ ೬೩೯ ಜನರು ಗಾಯಗೊಂಡಿದ್ದಾರೆ. ಟರ್ಕಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಭಾರತದಿಂದ ಸಹಾಯ

ಭಾರತ ಟರ್ಕಿಗೆ ಎಲ್ಲಾ ರೀತಿಯ ಸಹಾಯ ನೀಡುವ ಆಶ್ವಾಸನೆ ನೀಡಿದೆ. ಭಾರತದ ರಾಷ್ಟ್ರೀಯ ವಿಪತ್ತು ಪರಿಹಾರ ವ್ಯವಸ್ಥೆಯ ಎರಡು ತಂಡಗಳು ಟರ್ಕಿಗೆ ತಲುಪಿದೆ. ಅವರ ಜೊತೆಗೆ ಒಂದು ಶ್ವಾನ ಪಥಕ ಕೂಡ ಇದೆ.