ದೇಶದಲ್ಲಿನ ಮೊದಲ ಹೈಡ್ರೋಜನ್ ರೈಲಿಗಾಗಿ ಹಿಮಾಚಲ ಪ್ರದೇಶದಲ್ಲಿ ಮಾರ್ಗ ನಿಶ್ಚಯ !

ನವ ದೆಹಲಿ – ಭಾರತದಲ್ಲಿ ಹೈಡ್ರೋಜನ್ ರೈಲು ನಡೆಸಲಾಗುವುದು. ಬಜೆಟ್ ನ ಸಮಯದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಈ ರೈಲಿನ ಘೋಷಣೆ ಮಾಡಿದರು. ದೇಶದ ಮೊದಲು ಹೈಡ್ರೋಜನ್ ರೈಲು ನಡೆಸುವುದಕ್ಕೆ ಹಿಮಾಚಲ ಪ್ರದೇಶದಲ್ಲಿನ ಕಾಲಕಾ-ಶಿಮ್ಲಾ ರೈಲು ಮಾರ್ಗದ ಆಯ್ಕೆ ಮಾಡಲಾಗಿದೆ. ಇದಕ್ಕಾಗಿ ಕಾಲಕಾ, ಶಿಮ್ಲಾ ಮತ್ತು ಬರೋಗ ನಿಲ್ದಾಣದಲ್ಲಿ ಹೈಡ್ರೋಜನ್ ಇಂಧನ ಸ್ಟೇಷನ್ ಎಂದು ಅಭಿವೃದ್ಧಿಗೊಳಿಸಲಾಗುವುದು. ನೀರಿನಿಂದ ಹೈಡ್ರೋಜನ್ ತೆಗೆದು ಅದನ್ನು ಇಂಧನಕ್ಕೆ ಪರಿವರ್ತಿಸುವ ಯೋಜನೆ ಈ ನಿಲ್ದಾಣಗಳಲ್ಲಿ ಮಾಡುವುದು. ಡಿಸೆಂಬರ್ ವರೆಗೆ ಈ ರೈಲುಗಳು ಆರಂಭ ಮಾಡುವ ಗುರಿ ಇಟ್ಟಿದೆ.

ಹೈಡ್ರೋಜನ್ ಇದು ಮಾಲಿನ್ಯ ರಹಿತ ಸ್ವಚ್ಛ ಇಂಧನ ಎಂದು ತಿಳಿಯುತ್ತಾರೆ. ಹೈಡ್ರೋಜನ್ ಇಂಧನದ ಉಪಯೋಗದಿಂದ ಹಾನಿಕಾರಕ ವಾಯು ಶೂನ್ಯ ಪ್ರಮಾಣದಲ್ಲಿ ಬಿಡುಗಡೆ ಆಗುವುದು ಮತ್ತು ಕೇವಲ ನೀರಿನ ಅಬೇಯಾಗಿದೆ.

(ಸೌಜನ್ಯ : Drishti IAS)