ಜೋಶಿಮಠ ಗ್ರಾಮದಂತೆ ಈಗ ಜಮ್ಮು ಕಾಶ್ಮೀರದ ಒಂದು ಗ್ರಾಮದಲ್ಲಿನ ಮನೆಗಳಿಗೆ ಬಿರುಕು !

ಡೋಡಾ (ಜಮ್ಮು ಕಾಶ್ಮೀರ) – ಇಲ್ಲಿಯ ೫೦ ಮನೆಗಳಿರುವ ನಯಿ ಬಸ್ತಿ ಹೆಸರಿನ ಗ್ರಾಮದಲ್ಲಿ ೨೦ ಮನೆಗಳಿಗೆ ಮತ್ತು ಒಂದು ಮಸೀದಿಗೆ ಬಿರುಕು ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದ ಸರಕಾರವು ತಜ್ಞರ ಒಂದು ತಂಡವನ್ನು ಗ್ರಾಮಕ್ಕೆ ಕಳುಹಿಸಿದ್ದು ಅವರು ಪರಿಶೀಲನೆ ನಡೆಸಿ ಅದರ ಹಿಂದಿನ ಕಾರಣ ಕಂಡುಹಿಡಿಯುವರು.

ಸ್ಥಳೀಯರ ಹೇಳಿಕೆಯ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಮತ್ತು ನೀರು ಇಂಗುವುದು ಇದರಿಂದ ಬಹುಶಃ ಮನೆಗಳಿಗೆ ಬಿರುಕು ಬಂದಿರುವ ಸಾಧ್ಯತೆ ಇದೆ ಎಂದು ಹೇಳಿದರು. ಈ ಮೊದಲು ಉತ್ತರಖಂಡದಲ್ಲಿನ ಜೋಶಿಮಠ ಗ್ರಾಮದಲ್ಲಿ ಭೂಕುಸಿತದಿಂದ ಮನೆಗಳಿಗೆ ಬಿರುಕು ಬಿಟ್ಟಿದ್ದವು. ಆದ್ದರಿಂದ ಅಲ್ಲಿಯ ಜನರನ್ನು ಸ್ಥಳಾಂತರಗೊಳಿಸಿದ್ದಾರೆ.