ಕರಾಚಿ (ಪಾಕಿಸ್ತಾನ) ಇಲ್ಲಿ ಜಿಹಾದಿ ಸಂಘಟನೆಯಿಂದ ಅಹಮದಿಯಾ ಮುಸಲ್ಮಾನರ ಮಸೀದಿಯ ಧ್ವಂಸ !

ಅಹಮದಿಯಾ ಮುಸಲ್ಮಾನರ ಮಸೀದಿಯನ್ನು ಧ್ವಂಸ ಮಾಡುತ್ತಿರುವ ಘಟನೆ

ಕರಾಚಿ (ಪಾಕಿಸ್ತಾನ) – ಇಲ್ಲಿ ‘ತಹರಿಕ-ಎ-ಲಬ್ಬೈಕ ಪಾಕಿಸ್ತಾನ’ ಈ ಜಿಹಾದಿ ಸಂಘಟನೆಯು ಅಹಮದಿಯಾ ಮುಸಲ್ಮಾನರ ಒಂದು ಮಸೀದಿಯನ್ನು ಧ್ವಂಸ ಮಾಡಿದ್ದಾರೆ. ಕಳೆದ ಕೆಲವು ದಿನದಲ್ಲಿ ಈ ರೀತಿಯ ಇದು ಐದನೇ ಘಟನೆ ಎಂದು ಹೇಳುತ್ತಿದ್ದಾರೆ. ಪಾಕಿಸ್ತಾನದಲ್ಲಿ ಅಹಮದಿಯಾ ಮುಸಲ್ಮಾನರನ್ನು ‘ಮುಸಲ್ಮಾನ’ರೆಂದು ತಿಳಿಯುವುದಿಲ್ಲ. ಅವರಿಗೆ ಅಲ್ಪಸಂಖ್ಯಾತರ ರೀತಿಯಲ್ಲಿ ನೋಡುತ್ತಾರೆ. ಈ ಹಿಂದೆ ಕೆಲವು ಅಹಮದಿಯಾ ಮುಸಲ್ಮಾನರಿಗೆ ಪೈಗಂಬರನ ಅವಾಮಾನ ಮಾಡಿರುವ ಸುಳ್ಳು ಆರೋಪದಲ್ಲಿ ಗಲ್ಲು ಶಿಕ್ಷೆ ಕೂಡ ವಿಧಿಸಿದ್ದರು. ಕಳೆದ ವರ್ಷ ‘ತಹರಿಕ್-ಎ-ಲಬ್ಬೈ-ಕ ಪಾಕಿಸ್ತಾನ’ದ ಮೌಲ್ವಿ (ಇಸ್ಲಾಮಿನ ಧಾರ್ಮಿಕ ಮುಖಂಡ) ಮಹಮ್ಮದ್ ನಹಿಮ್ ಚಟ್ಟಾ ಇವನು ಮಹಮ್ಮದಿಯಾ ಮುಸಲ್ಮಾನ ಗರ್ಭಿಣಿ ಮಹಿಳೆಯ ಮೇಲೆ ದಾಳಿ ಮಾಡಲು ಕರೆ ನೀಡಿದ್ದನು. ‘ಹೀಗೆ ಮಾಡಿದರೆ ಅಹಮದಿಯಾ ಮುಸಲ್ಮಾನರು ಹುಟ್ಟುವುದಿಲ್ಲ’ ಎಂದು ಮೌಲ್ವಿ ಹೇಳುತ್ತಿದ್ದನು.