ನೇಪಾಳದಿಂದ ಅಯೋಧ್ಯೆ ತಲುಪಿದ ಶ್ರೀರಾಮನ ಮೂರ್ತಿಗಾಗಿ ಶಾಲಿಗ್ರಾಮ ಶಿಲೆ !

ಶಾಲಿಗ್ರಾಮ ಶಿಲೆ

ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿನ ಶ್ರೀರಾಮಜನ್ಮಭೂಮಿಯಲ್ಲಿ ನಿರ್ಮಿಸುತ್ತಿರುವ ಭವ್ಯ ಶ್ರೀರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿ ಸ್ಥಾಪಿಸಲು ನೇಪಾಳದ ಗಂಡಕೀ ನದಿಯಿಂದ ಎರಡು ಶಾಲಿಗ್ರಾಮ ಶಿಲೆಗಳನ್ನು ಆರಿಸಲಾಗಿದೆ. ಅವುಗಳನ್ನು ಯಾತ್ರೆಯ ಮೂಲಕ ನೇಪಾಳದಿಂದ ಅಯೋಧ್ಯೆಗೆ ತರಲಾಯಿತು. ಭಕ್ತರು ಶರಯೂ ನದಿಯ ಸೇತುವೆಯ ಮೇಲಿಂದ ಪುಷ್ಪವೃಷ್ಟಿ ಮಾಡಿ ಹಾಗೂ ಢೋಲು ಬಾರಿಸುತ್ತಾ ಅದನ್ನು ಸ್ವಾಗತಿಸಿದರು. ೬ ಕೋಟಿ ವರ್ಷಳಷ್ಟು ಹಳೆಯ ಈ ಶಾಲಿಗ್ರಾಮ ಶಿಲೆಯಿಂದ ಭಗವಾನ ಶ್ರೀರಾಮ ಮತ್ತು ದೇವೀ ಸೀತೆಯ ಮೂರ್ತಿಯನ್ನು ನಿರ್ಮಿಸಲಾಗುವುದು.

ಒರಿಸ್ಸಾ ಹಾಗೂ ಕರ್ನಾಟಕ ರಾಜ್ಯಗಳಿಂದಲೂ ಶಿಲೆಗಳನ್ನು ತರಿಸಲಾಗುವುದು !

ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ ರಾಯ್ ಇವರು ನಾವು ಭಗವಾನ ಶ್ರೀರಾಮನ ಮಂದಿರಕ್ಕಾಗಿ ಯಾವ ಪದ್ಧತಿಯ ಮೂರ್ತಿಯನ್ನು ನಿರ್ಮಿಸುವುದು ಹಾಗೂ ಈ ಮೂರ್ತಿ ಯಾವ ಶಿಲೆಯಿಂದ ನಿರ್ಮಿಸಬೇಕು ಎಂಬುದರ ವಿಚಾರ ಮಾಡುತ್ತಿದ್ದೇವೆ. ಅದಕ್ಕಾಗಿ ದೇಶದಾದ್ಯಂತದ ಮೂರ್ತಿಕಾರರನ್ನು ಕರೆಸಿ ಅವರ ಅಭಿಪ್ರಾಯವನ್ನು ತಿಳಿದುಕೊಂಡಿದ್ದೇವೆ. ‘ದೇವರ ಮೂರ್ತಿಯ ಹಾವಭಾವ ಹೇಗಿರಬೇಕು’, ಎಂಬುದನ್ನು ಆಳವಾಗಿ ವಿಚಾರ ಮಾಡಲಾಗುತ್ತಿದೆ. ಒರಿಸ್ಸಾ ಮತ್ತು ಕರ್ನಾಟಕ ರಾಜ್ಯಗಳಿಂದಲೂ ಶಿಲೆಗಳನ್ನು ತರಿಸಿದ್ದೇವೆ; ಆದರೆ ಅವುಗಳ ಆಗಮನದ ಸಮಯ ಇದುವರೆಗೆ ನಿರ್ಧಾರವಾಗಿಲ್ಲ. ಎಲ್ಲ ಶಿಲೆಗಳನ್ನು ಸಂಗ್ರಹಿಸಿದ ನಂತರ ತಜ್ಞರ ಸಲಹೆ ಪಡೆದು ಗರ್ಭಗೃಹದ ಮೂರ್ತಿ ಯಾವ ಶಿಲೆಯಿಂದ ನಿರ್ಮಿಸಬೇಕೆಂಬ ನಿರ್ಣಯ ಮಾಡಲಾಗುವುದು.