ಹಿಂದೂ ಅಲ್ಪಸಂಖ್ಯಾತರೆಂದರೆ ಭಾರತವನ್ನು ಕಳೆದುಕೊಳ್ಳುವುದು !

ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ

ಭಾಜಪ ಮುಖಂಡ ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ ಅವರು ‘ಜನಸಂಖ್ಯೆಯ ಆಧಾರದಲ್ಲಿ ರಾಜ್ಯದಲ್ಲಿ ಹಿಂದೂಗಳಿಗೆ ‘ಅಲ್ಪಸಂಖ್ಯಾತ’ ಸ್ಥಾನಮಾನವನ್ನು ಕೋರಿ ‘ಸರ್ವೋಚ್ಚ ನ್ಯಾಯಾಲಯ’ದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ. ನ್ಯಾಯಾಲಯದ ಸೂಚನೆಯಂತೆ ಕೇಂದ್ರ ಸರಕಾರವು ಈ ಕುರಿತು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಈ ಮಾಹಿತಿಯನ್ನು ಕೇಳಿತ್ತು. ಅದರಂತೆ ಕೇಂದ್ರ ಸರಕಾರವು ೨೪ ರಾಜ್ಯಗಳು ಮತ್ತು ೬ ಕೇಂದ್ರಾಡಳಿತ ಪ್ರದೇಶಗಳು ನೀಡಿದ ಮಾಹಿತಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತು. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಕೊನೆಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಬಹುಶಃ ಹಿಂದೂಗಳು ಅಲ್ಪಸಂಖ್ಯಾತರಾಗಿರುವ ರಾಜ್ಯಗಳಲ್ಲಿ ಹಿಂದೂಗಳಿಗೆ ‘ಅಲ್ಪಸಂಖ್ಯಾತ’ ಸ್ಥಾನಮಾನ ಮತ್ತು ಸೌಲಭ್ಯಗಳು ಸಿಗಬಹುದು; ಆದರೆ ಯಾವ ಬಹುಸಂಖ್ಯಾತ ಹಿಂದೂಗಳ ತೆರಿಗೆಯಿಂದ ದೇಶದ ಆರ್ಥವ್ಯವಸ್ಥೆ ನಡೆಯುತ್ತಿದೆಯೋ, ಯಾವ ಹಿಂದೂಗಳ ಪೂರ್ವಜರು ದೇಶದಸಂಪನ್ಮೂಲ ಮತ್ತು ಸಂಸ್ಕೃತಿಯನ್ನು ಕಾಪಾಡಲು ಹುತಾತ್ಮರಾದರೋ, ಆ ಹಿಂದೂಗಳಿಗೆ ಭಾರತದಲ್ಲಿ ಉತ್ತಮ ಸೌಲಭ್ಯಗಳನ್ನು ಪಡೆಯಲು ‘ಅಲ್ಪಸಂಖ್ಯಾತ’ ಪಟ್ಟವನ್ನು ನೀಡಬೇಕಾದ ಪ್ರಮೇಯ ಬಂದೆರಗಿದ್ದು ಸಮಸ್ತ ಹಿಂದೂಗಳಿಗೆ ಅವಮಾನ ಮಾಡುವಂತಿದೆ. ಇದು ಹಿಂದುತ್ವಕ್ಕಾಗಿ ಸರ್ವಸ್ವವನ್ನು ತ್ಯಜಿಸುವ ಮತ್ತು ದೇಶವನ್ನು ಆಕ್ರಮಣಕಾರರಿಂದ ರಕ್ಷಿಸುವ ಎಲ್ಲ ರಾಷ್ಟ್ರಪುರುಷರಿಗೆ ಅವಮಾನವೆಂದು ಹಿಂದೂಗಳು ಅರಿತಿದ್ದಾರೆಯೇ ? ಇದೇ ಮೂಲ ಪ್ರಶ್ನೆಯಾಗಿದೆ.

‘ವಂದೇ ಮಾತರಂ’ ಹೇಳಲು ಒಪ್ಪದವರಿಗೆ ಅವರ ಧರ್ಮದ ಆಧಾರದಲ್ಲಿ ‘ಅಲ್ಪಸಂಖ್ಯಾತ’ ಎಂದ ಮಾತ್ರಕ್ಕೆ ಈ ಮಾತೃಭೂಮಿಯ ಸಂಪತ್ತನ್ನು ಪುಕ್ಕಟ್ಟೆಯಾಗಿ ಹಂಚಲಾಗುತ್ತಿದೆ. ‘ಈ ದೇಶದ ಸಂಪನ್ಮೂಲದಲ್ಲಿ ಮುಸಲ್ಮಾನರಿಗೆ ಮೊದಲ ಹಕ್ಕಿದೆ’ ಎಂದು ದೇಶದ ಅಂದಿನ ಕಾಂಗ್ರೆಸ್‌ ಪ್ರಧಾನಿ ಹೇಳಿದ್ದರು. ಈ ಪರಿಸ್ಥಿತಿ ಸಮಸ್ತ ಹಿಂದೂಗಳಿಗೆ ಗೌರವಾಸ್ಪದವಲ್ಲ. ಜಗತ್ತಿನ ಯಾವುದೇ ದೇಶವು ಬಹುಸಂಖ್ಯಾತ ನಾಗರಿಕರ ಹಕ್ಕುಗಳನ್ನು ಹೊಸಕಿ ಅಲ್ಪ ಸಂಖ್ಯಾತರನ್ನು ಓಲೈಸುವುದಿಲ್ಲ. ಆದರೆ ಭಾರತದಲ್ಲಿ ಬಹುಸಂಖ್ಯಾತ ರಿಗೆ ಸೌಲಭ್ಯ ಸಿಗಬೇಕಾದರೆ ‘ನಾವು ಅಲ್ಪಸಂಖ್ಯಾತರು’ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದು ಎಂತಹ ವಿರೋಧಾಭಾಸ ? ಆದ್ದರಿಂದ, ನಾವು ‘ಅಲ್ಪಸಂಖ್ಯಾತ’ರಾಗಿ ಆರ್ಥಿಕ ಮತ್ತು ಭೌತಿಕ ಪ್ರಯೋಜನಗಳನ್ನು ಪಡೆಯಬೇಕೇ ? ಎಂಬುದನ್ನು ಹಿಂದೂಗಳು ಸಮಯೋಚಿತವಾಗಿ ಯೋಚಿಸಬೇಕು.

ಪ್ರಗತಿಪರ ಹಿಂದೂಗಳನ್ನೇ ಅಪರಾಧಿಗಳನ್ನಾಗಿ ಮಾಡುವರು !

ಹಿಂದೂಗಳು ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸಲ್ಮಾನರು ಅಥವಾ ಇತರ ಪಂಗಡಗಳ ಮೇಲೆ ತಮ್ಮ ಧರ್ಮವನ್ನು ಹೇರಲು ಎಂದಿಗೂ ಪ್ರಯತ್ನಿಸಲಿಲ್ಲ. ಮತ್ತೊಂದೆಡೆ, ಮುಸಲ್ಮಾನರು ಲಕ್ಷಾಂತರ ಹಿಂದೂಗಳನ್ನು ಖಡ್ಗದ ಭಯದಿಂದ ಮತಾಂತರಿಸಿದರು. ಕ್ರೈಸ್ತರು ಹಿಂದೂಗಳನ್ನು ಆಮಿಷ ಅಥವಾ ಕುತಂತ್ರದ ಮೂಲಕ ಮತಾಂತರಿಸಿದರು, ಆದರೂ ಸ್ವಾತಂತ್ರ್ಯದ ನಂತರ ಹಿಂದೂಗಳು ಇವೆರಡೂ ಪಂಗಡಗಳನ್ನು ತಮ್ಮೊಳಗೆ ಸೇರಿಸಿಕೊಂಡರು. ಇದನ್ನು ಪ್ರಗತಿಪರರು ತಮ್ಮ ಸ್ವಾರ್ಥಕ್ಕಾಗಿ ಕಡೆಗಣಿಸಿ ಕ್ರೈಸ್ತರು ಮತ್ತು ಮುಸಲ್ಮಾನರನ್ನು ಓಲೈಸುತ್ತಾ ಹಿಂದೂಗಳನ್ನು ದಾಳಿಕೋರರಂತೆ ಬಿಂಬಿಸಲು ಪ್ರಯತ್ನಿಸುತ್ತಾರೆ. ಕ್ರೈಸ್ತರು ಮತ್ತು ಮುಸಲ್ಮಾನರು ಅಲ್ಪಸಂಖ್ಯಾತರಾಗಿರುವುದರಿಂದ, ತಥಾಕಥಿತ ಪ್ರಗತಿಪರರು ಅಥವಾ ಮಾನವತಾವಾದಿ ಗುಂಪುಗಳು ಅವರ ಬಗ್ಗೆ ಸಹಾನುಭೂತಿ ಹೊಂದಿವೆ ಎಂದು ಒಬ್ಬರು ತಪ್ಪಾಗಿ ಅರ್ಥೈಸಿಕೊಳ್ಳಬಹುದು; ಆದರೆ ಯಾವ ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಿದ್ದಾರೆ ಆ ರಾಜ್ಯಗಳಲ್ಲಿ ಹಿಂದೂಗಳ ಬಗ್ಗೆ ಎಂದಿಗೂ ಸಹಾನುಭೂತಿ ತೋರಿಸಿಲ್ಲ. ಅದಕ್ಕಿಂತ ಹೆಚ್ಚಾಗಿ, ಕಾಶ್ಮೀರದಿಂದ ಸ್ಥಳಾಂತರಗೊಂಡ ನಾಲ್ಕೂವರೆ ಲಕ್ಷ ಕಾಶ್ಮೀರಿ ಪಂಡಿತರು, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಸಂತ್ರಸ್ತ ಅಲ್ಪಸಂಖ್ಯಾತ ಹಿಂದೂಗಳ ಬಗ್ಗೆ ಜಾಣಮೌನ ತಳೆದಿದ್ದಾರೆ. ಆದುದರಿಂದ ‘ಹಿಂದೂದ್ವೇಷ’ ಎಂಬುದು ಈ ಚರ್ಚ್‌ಗಳ ಅಜೆಂಡಾ ಎಂಬುದನ್ನು ನೆನಪಿನಲ್ಲಿಡಬೇಕು.

ಇದಂತೂ ಕಾಂಗ್ರೆಸ್‌ ನ ರಾಜಮಾರ್ಗ !

‘ಮುಸಲ್ಮಾನರ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ’ಗಾಗಿ ಕಾಂಗ್ರೆಸ್‌ ೨೦೦೫ ರಲ್ಲಿ ಸಚ್ಚರ ಸಮಿತಿಯನ್ನು ಸ್ಥಾಪಿಸಿತು. ಈ ಸಮಿತಿಯು ಒಟ್ಟು ೭೬ ಶಿಫಾರಸುಗಳನ್ನು ಸಲ್ಲಿಸಿದೆ. ಅದರಲ್ಲಿ ಮುಸಲ್ಮಾನರನ್ನು ಉದ್ದೇಶಪೂರ್ವಕವಾಗಿ ಹಿಂದುಳಿದಂತೆ ಬಿಂಬಿಸಲು ಪ್ರಯತ್ನಿಸಲಾಯಿತು; ಆದರೆ, ಹಿಂದುಳಿಯಲು ‘ಇಸ್ಲಾಂನ ಮೂಲಭೂತವಾದ’ವೇ ಕಾರಣ ಎಂದು ಹೇಳುತ್ತಿಲ್ಲ. ಈ ವರದಿ ಬಂದ ನಂತರ ಕೇಂದ್ರದಲ್ಲಿದ್ದ ಅಂದಿನ ಕಾಂಗ್ರೆಸ್‌ ಸರಕಾರ ಮುಸಲ್ಮಾನರ ಅಭಿವೃದ್ಧಿಗೆ ೧೫ ಅಂಶಗಳ ಕೃತಿಕಾರ್ಯಕ್ರಮವನ್ನು ಘೋಷಿಸಿತ್ತು. ೨೦೧೦ರ ದೇಶದ ಮುಂಗಡಪತ್ರದಲ್ಲಿ (ಬಜೆಟ್‌ನಲ್ಲಿ) ವಿವಿಧ ಸರಕಾರಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ. ೧೫ ರಷ್ಟು ಹಣವನ್ನು ಕಾಯ್ದಿರಿಸಿದೆ. ೨೦೦೭ ರಿಂದ ೨೦೧೨ ರ ವರೆಗಿನ ಪಂಚವಾರ್ಷಿಕ ಯೋಜನೆಗಳಲ್ಲಿಯಂತೂ ಅಲ್ಪಸಂಖ್ಯಾತರ ಅಭಿವೃದ್ಧಿಯ ಯೋಜನೆಗಳಿಗೆ ೭ ಸಾವಿರ ಕೋಟಿ ರೂಪಾಯಿ ಅನುಮೋದಿಸಿತು. ಭಾರತದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕೇಂದ್ರ ಸರಕಾರವು ಇನ್ನೂ ೪೧ ಯೋಜನೆಗಳನ್ನು ನಡೆಸುತ್ತಿದೆ ಮತ್ತು ಸಚ್ಚರ ಆಯೋಗದ ಶಿಫಾರಸುಗಳ ಮೇಲೆ ೧೫ ಬೇರೆಯೇ ಅಂಶಗಳ ಕಾರ್ಯಕ್ರಮವನ್ನು ನಡೆಸುತ್ತಿದೆ. ಭಾರತದಲ್ಲಿ ಮುಸಲ್ಮಾನರನ್ನು ಬಹುಸಂಖ್ಯಾತರನ್ನಾಗಿಸಲು ಕಾಂಗ್ರೆಸ್‌ ಹಾಕಿದ ರಾಜಮಾರ್ಗವಿದು.

ಪ್ರಸ್ತುತ, ದೇಶದ ೮ ರಾಜ್ಯಗಳಲ್ಲಿ ಹಿಂದೂಗಳು ‘ಅಲ್ಪಸಂಖ್ಯಾತ’ರಾಗಿದ್ದಾರೆ. ಹಾಗಾಗಿ ಹಿಂದೂಗಳು ಈ ರಾಜ್ಯಗಳಲ್ಲಿ ‘ಅಲ್ಪಸಂಖ್ಯಾತ’ರೆಂದು ಸೌಲಭ್ಯಗಳನ್ನು ಕೋರುವ ಸಮಯ ಬಂದಿದೆ. ಈ ರಾಜ್ಯಗಳಲ್ಲಿ ಹಿಂದೂ ಅಲ್ಪಸಂಖ್ಯಾತರಾಗುವ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ. ಭವಿಷ್ಯದಲ್ಲಿ ಭಾರತದ ಇತರ ಕೆಲವು ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾದರೆ ಏನಾಗುತ್ತದೆ ? ಇದರ ಭಯಾನಕ ವಾಸ್ತವವು ‘ಕಾಶ್ಮೀರ’ದಿಂದ ಕಾಶ್ಮೀರಿ ಪಂಡಿತರನ್ನು ಓಡಿಸಿದಂತಹ ಉದಾಹರಣೆಯು ಹಿಂದೂಗಳ ಕಣ್ಮುಂದೆಯಿದೆ. ಇದು ಅತಿಶಯೋಕ್ತಿಯಲ್ಲ. ೧೯೪೭ ರಲ್ಲಿ ದೇಶ ವಿಭಜನೆಯಾಗಿ ಪಾಕಿಸ್ತಾನ ರಚನೆಯಾಯಿತು. ಅದಕ್ಕೂ ಮೊದಲು ಅಫ್ಘಾನಿಸ್ತಾನ, ನೇಪಾಳ, ಭೂತಾನ್, ಟಿಬೆಟ್, ಶ್ರೀಲಂಕಾ, ಮ್ಯಾನ್ಮಾರ್‌ ಇವೆಲ್ಲ ಭಾರತದಿಂದ ಬೇರ್ಪಟ್ಟು ಸ್ವತಂತ್ರ ರಾಷ್ಟ್ರಗಳಾದವು. ಈ ದೇಶಗಳಲ್ಲಿ ಯಾವುದೇ ಹಿಂದೂ ರಾಷ್ಟ್ರವಿಲ್ಲ. ಆದ್ದರಿಂದ ಹಿಂದೂಗಳು ಅಲ್ಪಸಂಖ್ಯಾತರು ಎಂದರೆ ಏನು ? ಅದಕ್ಕೆ ಉತ್ತರ ‘ಭಾರತವನ್ನು ಕಳೆದುಕೊಳ್ಳುವುದು’ ಎಂದಾಗಿದೆ. ಆದ್ದರಿಂದ ಅಲ್ಪಸಂಖ್ಯಾತರಾಗಬೇಕೆ? ಅಥವಾ ಭವ್ಯ ಭಾರತವನ್ನು ಸೃಷ್ಟಿಸಬೇಕಿದೆಯೇ ? ಇದನ್ನು ಹಿಂದೂಗಳೇ ನಿರ್ಧರಿಸಬೇಕು.