ರಾಜ್ಯದಲ್ಲಿ ಮುಸ್ಲಿಂ ಸಮುದಾಯವೇ ಎಲ್ಲಕ್ಕಿಂತ ದೊಡ್ಡದು!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ ಜಾತಿ ಆಧಾರಿತ ಜನಗಣತಿ ವರದಿಯಲ್ಲಿ ಬಹಿರಂಗ...

ಬೆಂಗಳೂರು – ರಾಜ್ಯದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಮುನ್ನ ಜಾತಿ ಆಧಾರಿತ ಜನಗಣತಿ ವರದಿಯನ್ನು ಸ್ವೀಕರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗ’ವು ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ಜಾತಿ ಆಧಾರಿತ ಜನಗಣತಿಯ ಅಂತಿಮ ವರದಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇಕಡಾ 32 ರಿಂದ ಶೇಕಡಾ 42 ಕ್ಕೆ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ. ಅಲ್ಲದೆ ಮುಸ್ಲಿಂ ಸಮುದಾಯವು ರಾಜ್ಯದಲ್ಲಿ ಶೇಕಡಾ 14 ರಷ್ಟು ಅಂದರೆ 80 ಲಕ್ಷ 14 ಸಾವಿರ ಜನಸಂಖ್ಯೆಯೊಂದಿಗೆ ಎಲ್ಲಕ್ಕಿಂತ ದೊಡ್ಡ ಸಮುದಾಯವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿಯಲ್ಲಿ ಜಾತಿವಾರು ಜನಸಂಖ್ಯೆಯ ಬಗ್ಗೆ ಉಲ್ಲೇಖಿಸಲಾಗಿದೆ. ಇದರಲ್ಲಿ 13 ಅಧ್ಯಾಯಗಳಿದ್ದು, ಪ್ರತಿ ಜಾತಿಯ ಜನಸಂಖ್ಯೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿ ಸೇರಿದಂತೆ ಸಮಗ್ರ ಮಾಹಿತಿಯನ್ನು ನೀಡಲಾಗಿದೆ. ಈ ವರದಿಯ ಪ್ರಕಾರ…

೧. ವೀರಶೈವ ಲಿಂಗಾಯತರು ಶೇಕಡಾ 11 ರಷ್ಟು ಅಂದರೆ 60 ರಿಂದ 65 ಲಕ್ಷ ಜನಸಂಖ್ಯೆಯೊಂದಿಗೆ ರಾಜ್ಯದ ಎರಡನೇ ಅತಿ ದೊಡ್ಡ ಸಮುದಾಯವಾಗಿದೆ.

೨. ಒಕ್ಕಲಿಗರು ಶೇಕಡಾ 10 ರಷ್ಟು ಅಂದರೆ 55 ರಿಂದ 60 ಲಕ್ಷ ಜನಸಂಖ್ಯೆಯೊಂದಿಗೆ ಮೂರನೇ ದೊಡ್ಡ ಸಮುದಾಯವಾಗಿದೆ.

೩. ಕುರುಬ ಸಮುದಾಯವು ಶೇಕಡಾ 8 ರಷ್ಟಿದ್ದು, 40 ರಿಂದ 45 ಲಕ್ಷ ಜನಸಂಖ್ಯೆಯೊಂದಿಗೆ ರಾಜ್ಯದ ನಾಲ್ಕನೇ ಅತಿ ದೊಡ್ಡ ಸಮುದಾಯವಾಗಿದೆ. (ಜಾತಿ ಆಧಾರಿತ ಜನಗಣತಿಯ ಹೆಸರಿನಲ್ಲಿ ಹಿಂದೂಗಳಲ್ಲಿ ಒಡಕು ಮೂಡಿಸುವ ಸಂಚು ಇದಾಗಿದೆ ಎಂಬುದನ್ನು ಗಮನಿಸಿರಿ. ರಾಜ್ಯದ ಹಿಂದೂಗಳು ಜಾಗೃತರಾಗಿ ಸಂಘಟಿತರಾಗುವುದೇ ಸದ್ಯದ ನಿಜವಾದ ಅಗತ್ಯವಾಗಿದೆ! – ಸಂಪಾದಕರು)

ಮುಖ್ಯಮಂತ್ರಿಗಳಿಗೆ ಜಾತಿ ಆಧಾರಿತ ಜನಗಣತಿ ವರದಿಯನ್ನು ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ ನಾಯಕ ಅವರು, ವರದಿ ಪೂರ್ಣಗೊಂಡಿದೆ. ಹಾಗೆಯೇ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ವರದಿಯೂ ಸಿದ್ಧವಾಗಿದೆ. ಈ ವರದಿಯು 300 ಪುಟಗಳಷ್ಟಿದೆ. ಈ ಸಮೀಕ್ಷೆಯ ಪ್ರಕ್ರಿಯೆಯಲ್ಲಿ ಕೆಲವು ಜನರು ಭಾಗವಹಿಸಿಲ್ಲ. ಆದ್ದರಿಂದ ಅಂಕಿ-ಅಂಶಗಳು ಕೊಂಚ ಕಡಿಮೆಯಾಗುವ ಸಾಧ್ಯತೆಯಿದೆ, ಎಂದು ತಿಳಿಸಿದರು. (ಇದರರ್ಥ ವರದಿಯಲ್ಲಿನ ಮಾಹಿತಿಯು ಅಪೂರ್ಣ ಮತ್ತು ತಪ್ಪಾಗಿದೆ. ಇದರಿಂದಾಗಿ ಈ ವರದಿಯ ಆಧಾರದ ಮೇಲೆ ಕೈಗೊಳ್ಳಲಾಗುವ ಕ್ರಮಗಳೂ ಸಹ ದೋಷಪೂರಿತವಾಗಿರುತ್ತವೆ. ಈ ವರದಿಯ ವಿರುದ್ಧ ಸಮಾಜದ ಹಿತಚಿಂತಕ ನಾಗರಿಕರು ನ್ಯಾಯಾಲಯದ ಮೊರೆ ಹೋಗಬೇಕು! – ಸಂಪಾದಕರು)

ಸಂಪಾದಕೀಯ ನಿಲುವು

ಜಾತಿ ಆಧಾರಿತ ಜನಗಣತಿಯನ್ನು ಕೇಂದ್ರ ಸರಕಾರವು ಈಗಾಗಲೇ ತಿರಸ್ಕರಿಸಿದೆ. ಹೀಗಿರುವಾಗ ಕಾಂಗ್ರೆಸ್ ಈ ರೀತಿಯ ಜನಗಣತಿಯನ್ನು ನಡೆಸಿ ಹಿಂದೂಗಳಲ್ಲಿ ಒಡಕು ಮೂಡಿಸುವ ಸಂಚು ರೂಪಿಸುತ್ತಿದೆ. ಈ ಎಲ್ಲದರ ನಡುವೆ ಮುಸ್ಲಿಂ ಸಮುದಾಯದಲ್ಲೂ 200 ಕ್ಕೂ ಹೆಚ್ಚು ಜಾತಿಗಳಿದ್ದರೂ ಸಹ, ಅವರನ್ನು ಒಂದೇ ಒಕ್ಕೂಟವಾಗಿ ತೋರಿಸಲಾಗಿದೆ. ಕಾಂಗ್ರೆಸ್ಸಿನ ಈ ಮುಸ್ಲಿಂ ಪ್ರೇಮವನ್ನು ಅರಿಯಿರಿ!