ಭಯೋತ್ಪಾದಕನ ಅಂತ್ಯಸಂಸ್ಕಾರದಲ್ಲಿ ಸಾವಿರಾರು ಮುಸಲ್ಮಾನರ ಸಹಭಾಗ

ಆಜಮ್ ಗಡ (ಉತ್ತರಪ್ರದೇಶ)ದಲ್ಲಿ ಪೊಲೀಸರ ಉಪಸ್ಥಿತಿಯ ಖೇದಕರ ಘಟನೆ

ಆಝಮ್ ಗಡ (ಉತ್ತರಪ್ರದೇಶ) – ನಿಷೇಧಿತ ಇಂಡಿಯನ್ ಮುಜಾಹಿದೀನ ಸಂಘಟನೆಯ ಭಯೋತ್ಪಾದಕ ಶಹಜಾದ ಅಹಮದ್ 2008 ರ ದೆಹಲಿಯ ಬಾಟಲಾ ಹೌಸನಲ್ಲಿ ನಡೆದ ಚಕಮಕಿಯ ಪ್ರಕರಣದಲ್ಲಿ ತಿಹಾರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುವಿಸುತ್ತಿದ್ದನು. ಉಪಚಾರದ ಸಮಯದಲ್ಲಿ ‘ಏಮ್ಸ್’ ಆಸ್ಪತ್ರೆಯಲ್ಲಿ ಅವನು ಸಾವನ್ನಪ್ಪಿದನು. ಅವನ ಶವವನ್ನು ಅಂತ್ಯಸಂಸ್ಕಾರಕ್ಕಾಗಿ ಆಝಮ್ ಗಡದ ಖಲೀಶಪುರ ಗ್ರಾಮಕ್ಕೆ ತರಲಾಯಿತು. ಅವನ ಅಂತ್ಯಸಂಸ್ಕಾರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸಲ್ಮಾನರು ಭಾಗವಹಿಸಿದ್ದರು. ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಬೃಹತ್ ಪೊಲೀಸ ಬಂದೋಬಸ್ತು ಮಾಡಲಾಗಿತ್ತು. ಬಾಟ್ಲಾ ಹೌಸ ಚಕಮಕಿಯಲ್ಲಿ ಪೊಲೀಸ ಅಧೀಕ್ಷಕ ಮೊಹನಚಂದ್ರ ಶರ್ಮಾ ಸಾವನ್ನಪ್ಪಿದ್ದರು ಮತ್ತು 2 ಪೊಲೀಸರು ಗಾಯಗೊಂಡಿದ್ದರು. ಇದರಲ್ಲಿ 2 ಭಯೋತ್ಪಾದಕರು ಹತರಾಗಿದ್ದರು.

ಸಂಪಾದಕೀಯ ನಿಲುವು

ಶವವನ್ನು ಅವರ ಕುಟುಂಬದವರ ವಶಕ್ಕೆ ನೀಡದಿರುವ ಕಾನೂನು ರಚಿಸುವ ಆವಶ್ಯಕತೆಯಿದೆ ! ಈ ರೀತಿ ಭಯೋತ್ಪಾದಕರ ಅಂತ್ಯಸಂಸ್ಕಾರದಲ್ಲಿ ಸಹಭಾಗಿಯಾಗಿರುವವರ ಮಾನಸಿಕತೆಯನ್ನು ಗಮನಕ್ಕೆ ತೆಗೆದುಕೊಂಡು ಅದರಿಂದ ದೇಶಕ್ಕೆ ಅಪಾಯಕಾರಿಯಾಗಬಾರದೆಂದು ಅವರ ಮೇಲೆ ನಿಗಾವಹಿಸುವ ಆವಶ್ಯಕತೆಯಿದೆ !