ಸಮಾಜವಾದಿ ಪಕ್ಷದ ಮುಖಂಡರಿಗೆ ಮಠ ಮಂದಿರಗಳಲ್ಲಿ ಪ್ರವೇಶ ನಿಷೇಧ ! – ಸಂತ ಸಮಾಜದ ಘೋಷಣೆ

‘ಶ್ರೀರಾಮಚರಿತಮಾನಸವನ್ನು ನಿಷೇಧಿಸಲು ಆಗ್ರಹಿಸಿದ ಪ್ರಕರಣ

ಪ್ರಯಾಗರಾಜ (ಉತ್ತರಪ್ರದೇಶ) – ಸಮಾಜವಾದಿ ಪಕ್ಷದ ಮುಖಂಡ ಸ್ವಾಮಿ ಪ್ರಸಾದ ಮೌರ್ಯ ಇವರು ‘ಶ್ರೀರಾಮಚರಿತಮಾನಸ’ವನ್ನು ನಿಷೇಧಿಸಬೇಕೆಂದು ಆಗ್ರಹಿಸಿದಾಗ ಅವರನ್ನು ವಿರೋಧಿಸುತ್ತಿರುವಾಗಲೇ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ ಅವರನ್ನು ಕಾಪಾಡುತ್ತಾ ಕಾರ್ಯದರ್ಶಿ ಸ್ಥಾನ ನೀಡಿದ್ದಾರೆ. ಆದ್ದರಿಂದ ಸಾಧು-ಸಂತರು ಅಸಮಾಧಾನಗೊಂಡಿದ್ದಾರೆ. ಇಲ್ಲಿಯ ಮಾಘ ಮೇಳದಲ್ಲಿ ಸಹಭಾಗಿ ಆಗಿರುವ ಸಾಧು-ಸಂತರು, ‘ನಾವು ನಮ್ಮ ಮಠ ಮಂದಿರಗಳಲ್ಲಿ ಸಮಾಜವಾದಿ ಪಕ್ಷದ ಮುಖಂಡರಿಗೆ ಪ್ರವೇಶ ನೀಡುವುದಿಲ್ಲ’, ಎಂದು ಘೋಷಣೆ ಮಾಡಿದರು.

ಸಮಾಜವಾದಿ ಪಕ್ಷದ ಅವನತಿಯ ಸಮಯ ಹತ್ತಿರ ಬಂದಿದೆ ! – ಸಂತ ಶಿವಯೋಗಿ ಮೌನಿ ಬಾಬಾ ಮಹಾರಾಜ

ಸಂತ ಶಿವಯೋಗಿ ಮೌನಿ ಬಾಬಾ ಮಹಾರಾಜ

ಸಂತ ಶಿವಯೋಗಿ ಮೌನಿ ಬಾಬಾ ಮಹರಾಜ ಇವರು, ಸಮಾಜವಾದಿ ಪಕ್ಷದ ಅವನತಿಯ ಸಮಯ ಬಂದಿದೆ. ಸಂತ ಸಮಾಜವು, ಲೋಕಸಭೆಯ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವನ್ನು ಬಹಿಷ್ಕರಿಸುವ ಬಗ್ಗೆ ಪ್ರಸ್ತುತ ನಡೆಯುತ್ತಿರುವ ಮಾಘ ಮೇಳದಲ್ಲಿ ಭಕ್ತರಿಗೆ ಹೇಳಲಾಗುವುದು. ‘ಜೋ ರಾಮ್ ಕಾ ನಹಿ, ವೇ ಕಿಸೀ ಕಾಮ್ ಕೆ ನಹೀ’. ನೀವು ಹೀಗೆ ಹಿಂದುಗಳ ಧರ್ಮ ಗ್ರಂಥ, ಭಾರತ ಮಾತೆ ಮತ್ತು ರಾಷ್ಟ್ರಗೀತೆಯ ಅವಮಾನ ಮಾಡುತ್ತಿದ್ದರೆ ನಿಮಗೆ ಉನ್ನತ ಸ್ಥಾನ ನೀಡುತ್ತಿದ್ದರೆ ಅದನ್ನು ನಾವು ಸ್ವೀಕರಿಸುವುದಿಲ್ಲ ಎಂದು ಹೇಳಿದರು.