ಉತ್ತರಪ್ರದೇಶದ ಯುವಕ ಮುಂಬಯಿಯಲ್ಲಿನ ಮೌಲ್ವಿಯ ಪ್ರಭಾವದಿಂದ ಇಸ್ಲಾಂಗೆ ಮತಾಂತರ !

ಮುಂಬಯಿ – ಕೌಶಾಂಬಿ (ಉತ್ತರ ಪ್ರದೇಶ) ಇಲ್ಲಿಯ ಉದಯರಾಜ ಕೋರಿ ಈ ಯುವಕ ಮುಂಬಯಿಗೆ ಬಂದಿದ್ದನು. ಕೆಲವು ಸಮಯದ ನಂತರ ಅವನು ಮತ್ತೆ ಉತ್ತರ ಪ್ರದೇಶಕ್ಕೆ ಹಿಂತಿರುಗಿದನು. ಆಗ ಅವನು ಮತಾಂತರಗೊಂಡಿರುವುದು ಬಹಿರಂಗವಾಯಿತು. ಅವನು ತನ್ನ ಹೆಸರು ಅಹಮದ್ ಹುಸೇನ್ ಎಂದು ಬದಲಾಯಿಸಿರುವುದು ಅವರ ಕುಟುಂಬದವರಿಗೆ ತಿಳಿಯಿತು. ಅದರಿಂದ ಅವರೆಲ್ಲರಿಗೂ ಆಘಾತವಾಯಿತು. ಮತಾಂತರದ ಬಗ್ಗೆ ಅಹನದನು, ”ನಾನು ಮುಂಬಯಿಗೆ ಹೋದಾಗ ಒಬ್ಬ ಮೌಲ್ವಿವು ಸಂಚಾರ ವಾಣಿಯಲ್ಲಿ ಇಸ್ಲಾಂ ಧರ್ಮದ ಬಗ್ಗೆ ಒಂದು ವಿಡಿಯೋ ತೋರಿಸಿದನು. ಅದನ್ನು ನೋಡಿ ನಾನು ಸ್ವಯಿಚ್ಛೆಯಿಂದ ಹಿಂದೂ ಧರ್ಮ ತ್ಯಜಿಸಿ ಇಸ್ಲಾಂ ಧರ್ಮ ಸ್ವೀಕರಿಸಿದೆ. (ಮತಾಂತರ ಮಾಡುವುದಕ್ಕೆ ಮೌಲ್ವಿಯಿಂದ ನಡೆಯುವ ಧೂರ್ತತನ ತಿಳಿಯಿರಿ ! – ಸಂಪಾದಕರು) ಈ ಮತಾಂತರದ ಪ್ರಕರಣದಲ್ಲಿ ಕುಟುಂಬದವರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

ಈ ಪ್ರಕರಣದಲ್ಲಿ ಉತ್ತರ ಪ್ರದೇಶದಲ್ಲಿನ ಕೌಶಾಂಬಿಯಲ್ಲಿನ ಓರ್ವ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸಂಬಂಧಿತ ಮೌಲ್ವಿಗೆ ಬಂಧಿಸಲು ಮುಂಬಯಿ ಪೊಲೀಸರ ಪ್ರಯತ್ನ ನಡೆಯುತ್ತಿದೆ. ಮತಾಂತರ ಆಗಿರುವ ಯುವಕನ ತಾಯಿ ಅವನಿಗೆ ಬುದ್ಧಿ ಹೇಳುತ್ತಿದ್ದಾಳೆ. ಮಗನು ಮತ್ತೆ ಹಿಂದೂ ಧರ್ಮ ಸ್ವೀಕರಿಸುವನು ಎಂದು ಆಕೆಗೆ ಅನಿಸುತ್ತಿದೆ.

ಯುವಕನಿಂದ ಮುಸಲ್ಮಾನ ರೀತಿಯಲ್ಲಿ ಕೃತಿಗಳು ಆಗುತ್ತಿರುವುದರಿಂದ ಕುಟುಂಬದವರು ನೊಂದಿದ್ದಾರೆ !

ಅಹಮದ್ ಮೊದಲು ಹಿಂದೂ ಇರುವಾಗ ಮನೆಯಲ್ಲಿನ ಹಿರಿಯರ ಕಾಲಿಗೆ ಸ್ಪರ್ಶ ಮಾಡಿ ನಮಸ್ಕಾರ ಮಾಡುತ್ತಿದ್ದನು. ಈಗ ಅವನು ‘ಸಲಾಂ’ ಎನ್ನುತ್ತಾನೆ. ‘ಮುಂಬಯಿಯಿಂದ ಬಂದ ನಂತರ ಅವನು ಮಾತನಾಡುತ್ತಿರಬಹುದು’, ಎಂದು ಮೊದಲು ಅನಿಸಿತು. ಆದರೆ ನಂತರ ಅವನು ಮತಾಂತರಗೊಂಡಿರುವ ವಿಷಯ ಬಹಿರಂಗವಾಯಿತು. ಅಹಮದ್ ಮನೆಯಲ್ಲಿ ನಮಾಜ ಕೂಡ ಮಾಡುತ್ತಾನೆ. ಆದ್ದರಿಂದ ಮನೆಯಲ್ಲಿ ಎಲ್ಲರೂ ಬಹಳ ನೊಂದಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿದ್ದರಿಂದ ಅವರು ಧೂರ್ತ ಮೌಲ್ವಿಯ ಬಲೆಗೆ ಸಿಲುಕುತ್ತಾರೆ !