ಶ್ರೀನಗರದ ಹುರಿಯತ್ ಕಾನ್ಫರೆನ್ಸ್ ನ ಕಾರ್ಯಾಲಯಕ್ಕೆ ಬೀಗ !

ರಾಷ್ಟ್ರೀಯ ತನಿಖಾ ದಳದಿಂದ ಪ್ರತ್ಯೇಕತಾವಾದಿ ಸಂಘಟನೆಯ ಮೇಲೆ ಕ್ರಮ

ಶ್ರೀನಗರ (ಜಮ್ಮು ಕಾಶ್ಮೀರ) – ಹುರಿಯತ್ ಕಾನ್ಫರೆನ್ಸ್ ಈ ಪ್ರತ್ಯೇಕತಾವಾದಿ ಸಂಘಟನೆಯು ಭಯೋತ್ಪಾದಕರಿಗೆ ಆರ್ಥಿಕ ಸಹಾಯ ನೀಡಿರುವ ಆರೋಪದಲ್ಲಿ ದೆಹಲಿಯ ಒಂದು ನ್ಯಾಯಾಲಯವು ಸಂಘಟನೆಯ ಇಲ್ಲಿಯ ರಾಜಬಾಗ ಕ್ಷೇತ್ರದಲ್ಲಿರುವ ಕಾರ್ಯಾಲಯಕ್ಕೆ ಸೀಲ್ ಮಾಡುವಂತೆ ಆದೇಶ ನೀಡಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ದಳವು ಜನವರಿ ೨೯ ರಂದು ಬೆಳಿಗ್ಗೆ ಕ್ರಮ ಕೈಗೊಂಡಿದೆ.

೧. ಹುರಿಯತ್ ಕಾನ್ಫರೆನ್ಸ್ ಈ ಸಂಘಟನೆ ೧೯೯೩ ರಲ್ಲಿ ಸ್ಥಾಪನೆಯಾಗಿದ್ದೂ. ಇದರಲ್ಲಿ ೨೬ ಪ್ರತ್ಯೇಕತಾವಾದಿ ಸಂಘಟನೆಗಳ ಸಮೂಹ ಇದ್ದು, ಕಳೆದ ಮೂರುವರೆ ವರ್ಷದಿಂದ ಕೇಂದ್ರ ಸರಕಾರ ಅದರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ.

೨. ಕಾನ್ಫರೆನ್ಸಿನ ರಾಜಬಾಗನ ಕಾರ್ಯಾಲಯಕ್ಕೆ ಆಗಸ್ಟ್ ೨೦೧೯ ರಿಂದ ಅಂದರೆ ಯಾವಾಗ ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಕಲಂ ೩೭೦ ಮತ್ತು ೩೫ ಅ (ಕಾಶ್ಮೀರಿ ನಾಗರೀಕರಲ್ಲದೆ ಇತರರಿಗೆ ಆಸ್ತಿ ಖರೀದಿಸುವ ಅಧಿಕಾರ ಇರಲಿಲ್ಲ) ತೆರವುಗೊಳಿಸಿದ ದಿನದಿಂದ ಮುಚ್ಚಿದೆ.

೩. ಇಲ್ಲಿಯವರೆಗೆ ಕಾನ್ಫರೆನ್ಸಿನ ಅಕ್ರಮ ಆಸ್ತಿಯ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಡಿಸೆಂಬರ್ ೨೦೨೨ ರಂದು ಸಂಘಟನೆಯ ಮಾಜಿ ಅಧ್ಯಕ್ಷ ಸೈಯದ್ ಅಲಿ ಶಾಹ ಗಿಲಾನಿ ಇವರ ೨೦ ಸ್ಥಳದಲ್ಲಿನ ಸಂಪತ್ತಿನ ಮೇಲೆ ಕ್ರಮ ಕೈಗೊಂಡಿದೆ. ಈ ಕ್ರಮ ರಾಜ್ಯ ತನಿಖಾ ದಳದಿಂದ ನಡೆದಿದೆ.

೪. ಈ ಹಿಂದೆಯೂ ಪೊಲೀಸ ಅಧಿಕಾರಿ ಜಮಾತೆ-ಏ-ಇಸ್ಲಾಮಿಯ ೩ ಸ್ಥಳಗಳಲ್ಲಿನ ಆಸ್ತಿಯ ಮೇಲೆ ಕ್ರಮ ಕೈಗೊಂಡಿದೆ. ರಾಜ್ಯ ತನಿಖಾ ದಳವು ಜಮಾತೆ-ಏ-ಇಸ್ಲಾಮಿಯದ ಒಟ್ಟು ೧೮೮ ಆಸ್ತಿಯನ್ನು ಗುರುತಿಸಿದ್ದು ಅದರ ಮೇಲೆ ಕೂಡ ಆದಷ್ಟು ಬೇಗ ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಭಾರತದಿಂದ ಕಾಶ್ಮೀರವನ್ನು ಬೇರ್ಪಡಿಸುವ ಹುರಿಯತ ಕಾನ್ಫರೆನ್ಸ್ ನ ೩ ದಶಕಗಳ ಇತಿಹಾಸ ಇರುವಾಗ, ಅದರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಮುಖಂಡರಿಗೆ ದೆಹಲಿಗೆ ಆಮಂತ್ರಣ ನೀಡುವ ಕಾಂಗ್ರೆಸ್ ಈಗ ‘ಭಾರತ ಜೋಡೋ’ ಯಾತ್ರೆ ಆಯೋಜಿಸುತ್ತಿದೆ ಇದು ಎಷ್ಟು ಹಾಸ್ಯಾಸ್ಪದವಾಗಿದೆ, ಎಂಬುದು ಗಮನಕ್ಕೆ ಬರುತ್ತದೆ ! ರಾಹುಲ ಗಾಂಧಿ ಈಗ ಕಾಶ್ಮೀರ ಯಾತ್ರೆಗೆ ಹೋಗುತ್ತಿರುವುದರಿಂದ ಅವರಿಗೆ ಇದರ ಬಗ್ಗೆ ಜನರು ಪ್ರಶ್ನೆ ಕೇಳುವುದು ಅವಶ್ಯಕ !