ನನ್ನ ಧ್ವನಿ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ ! -ಸೋನಮ ವಾಂಗಚುಕ

  • ಲಡಾಖದಲ್ಲಿನ ಖ್ಯಾತ ಪರಿಸರವಾದಿ ಸೋನಮ ವಾಂಗಚುಕ ಇವರ ಆರೋಪ !

  • ಲಡಖನ ಸಮಸ್ಯೆಯ ಬಗ್ಗೆ ಐದು ದಿನದಿಂದ ಉಪವಾಸ ಸತ್ಯಾಗ್ರಹ !

ಪರಿಸರವಾದಿ ಸೋನಮ ವಾಂಗಚುಕ

ಲೇಹ – ಲಡಾಖನಲ್ಲಿ ನಿರುದ್ಯೋಗ, ಪ್ರವಾಸೋದ್ಯಮ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಅಡಚಣೆ ಬರುತ್ತಿದೆ. ಪರಿಸರದ ಪ್ರಶ್ನೆ ಕೂಡ ನಿರ್ಮಾಣವಾಗಿದೆ. ಅದಕ್ಕಾಗಿ ನಾನು ಆಂದೋಲನ ನಡೆಸುತ್ತಿದ್ದೇನೆ; ಆದರೆ ನನ್ನ ಧ್ವನಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ, ಎಂದು ಲಡಾಖನ ಖ್ಯಾತ ಪರಿಸರವಾದಿ ಸೋನಮ ವಾಂಗಚುಕ ಇವರು ಆರೋಪಿಸಿದ್ದಾರೆ. ಈ ಪರಿಸ್ಥಿತಿಯನ್ನು ಖಂಡಿಸಲು ಸೋನಮ ವಾಂಗಚುಕ ಕಳೆದ ೫ ದಿನದಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ನನಗೆ ಬೆಂಬಲ ನೀಡಲು ಜನವರಿ ೩೦ ರಂದು ಒಂದು ದಿನ ಉಪವಾಸ ಮಾಡಬಹುದು, ಎಂದು ಅವರು ಜನರಿಗೆ ಕರೆ ನೀಡಿದ್ದಾರೆ. ಸೋನಮ ವಾಂಗಚುಕ ಇವರಿಗೆ ೨೦೧೮ ರಲ್ಲಿ ‘ಮೆಗಸೆಸ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಾಂಗಚುಕ ಇವರು ಒಂದು ವಿಡಿಯೋ ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು ನಾನು ಖಾರದುಂಗ ದರ್ರಾ ಈ ಸ್ಥಳದಲ್ಲಿ ಆಂದೋಲನ ನಡೆಸುವವನಿದ್ದೆ. ಅಲ್ಲಿ ಉಷ್ಣಾಂಶ 40 ಡಿಗ್ರಿಯ ವರೆಗೆ ಇಳಿಯುತ್ತದೆ; ಆದರೆ ನನಗೆ ಸರಕಾರದಿಂದ ಆ ಸ್ಥಳಕ್ಕೆ ಹೋಗಲು ಅವಕಾಶ ನೀಡಿಲ್ಲ. ನಾನು ಈಗ ಇದೇ ಸ್ಥಳದಲ್ಲಿ ಕುಳಿತು ಸತ್ಯಾಗ್ರಹ ಮುಂದುವರಿಸುವೆ.