ಸಂಸ್ಕೃತವನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಮಾಡಿ ! – ಮಾಜಿ ನ್ಯಾಯಮೂರ್ತಿ ಶರದ ಬೋಬಡೆ

ಮಾಜಿ ನ್ಯಾಯಮೂರ್ತಿ ಶರದ ಬೋಬಡೆ

ನಾಗಪುರ – ಡಾ. ಬಾಬಾಸಾಹೇಬ ಆಂಬೇಡ್ಕರ ಇವರು ಸಂಸ್ಕೃತ ಭಾಷೆಯನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಜಾರಿಗೊಳಿಸಲು ಪ್ರಯತ್ನಿಸಿದ್ದರು ಎನ್ನುವ ಸುದ್ದಿ ಸಪ್ಟೆಂಬರ 11, 1949ರ ದಿನಪತ್ರಿಕೆಗಳಲ್ಲಿ ಪ್ರಸಾರವಾಗಿತ್ತು. ಸಂಸ್ಕೃತದ ಶಬ್ದಗಳು ನಮ್ಮ ದೇಶದ ಅನೇಕ ಭಾಷೆಗಳಲ್ಲಿ ಇವೆ. ‘ಡಾ. ಆಂಬೇಡ್ಕರರಿಗೆ ಅನಿಸಿಕೆಯಂತೆ ಸಂಸ್ಕೃತವನ್ನು ಅಧಿಕೃತ ಭಾಷೆಯೆಂದು ಏಕೆ ಜಾರಿಗೊಳಿಸಲು ಸಾಧ್ಯವಿಲ್ಲ ? ಈ ಭಾಷೆ ಉತ್ತರ ಅಥವಾ ದಕ್ಷಿಣಕ್ಕೆ ಮಾತ್ರ ಅಂತ ಇಲ್ಲ. ಈ ಭಾಷೆ ಜಾತ್ಯತೀತವಾದಿಗಳಿಗೂ ಪೂರ್ಣ ಸಶಕ್ತವಾಗಿದೆ’, ಎಂದು ಮಾಜಿ ನ್ಯಾಯಮೂರ್ತಿ ಶರದ ಬೋಬಡೆಯವರು ಹೇಳುತ್ತಾ, ಸಂಸ್ಕೃತವನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಜಾರಿಗೊಳಿಸಬೇಕೆಂದು ಕೋರಿದರು. ‘ಸಂಸ್ಕೃತ ಭಾರತಿ’ಯಿಂದ ಆಯೋಜಿಸಿದ್ದ ಅಖಿಲ ಭಾರತೀಯ ವಿದ್ಯಾರ್ಥಿ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು. ‘ಸಂಸ್ಕೃತವನ್ನು ಅಧಿಕೃತ ಭಾಷೆಯೆಂದು ಸ್ವೀಕರಿಸುವುದು ಒಂದು ರಾತ್ರಿಯಲ್ಲಿ ಸಾಧ್ಯವಿಲ್ಲ. ಅದಕ್ಕಾಗಿ ಕೆಲವು ವರ್ಷಗಳೇ ತಗಲಬಹುದು’ ಎಂದೂ ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಮಾಜಿ ನ್ಯಾಯಮೂರ್ತಿ ಬೋಬಡೆಯವರು ಮಂಡಿಸಿದ ಅಂಶಗಳು,

1. ಕಾನೂನಿನ ಅನುಗುಣವಾಗಿ ನ್ಯಾಯಾಲಯದ ಅಧಿಕೃತ ಭಾಷೆಯೆಂದು ಹಿಂದಿ ಮತ್ತು ಆಂಗ್ಲ ಭಾಷೆಯನ್ನು ಉಪಯೋಗಿಸಲಾಗುತ್ತದೆ. ಅನೇಕ ಬಾರಿ ನ್ಯಾಯಮೂರ್ತಿಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಉಪಯೋಗಿಸುವಂತೆ ಮನವಿ ಮಾಡಲಾಗುತ್ತದೆ. ಈಗ ಕೆಲವು ಜಿಲ್ಲಾ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಉಪಯೋಗಿಸಲಾಗುತ್ತಿದೆ.

2. ಈ ಅಂಶ ಇನ್ನೂ ವಿಳಂಬಗೊಳ್ಳಬೇಕೆಂದು ನನಗೆ ಅನಿಸುತ್ತಿಲ್ಲ. ಸರಕಾರ ಮತ್ತು ಆಡಳಿತವರ್ಗದವರ ನಡುವೆ ಸಂವಾದ ನಡೆಯುವುದರಿಂದಾಗಿ ಇದು ಪೂರ್ಣಗೊಳ್ಳಲು ಅಡಚಣೆಯಾಗಿದೆ.

3. ಸಂಸ್ಕೃತವನ್ನು ಅಧಿಕೃತ ಭಾಷೆಯನ್ನಾಗಿ ಜಾರಿಗೊಳಿಸಲು ಯಾವುದೇ ಧರ್ಮದೊಂದಿಗೆ ಕೊಡುಕೊಳ್ಳುವಿಕೆಯಿಲ್ಲ. ಕಾರಣ ಶೇ. 95ರಷ್ಟು ಭಾಷೆಗಳ ಸಂಬಂಧ ಧರ್ಮದೊಂದಿಗೆ ಇಲ್ಲ. ಇದು ದರ್ಶನ, ಕಾನೂನು, ಸಾಹಿತ್ಯ, ಶಿಲ್ಪಕಲೆ, ಖಗೋಳಶಾಸ್ತ್ರ ಇತ್ಯಾದಿಗಳನ್ನು ಸಂಬಂಧಿಸಿದೆ.

4. ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ‘ನಾಸಾ’ದ ವಿಜ್ಞಾನಿಗಳು ಈ ಭಾಷೆಯನ್ನು ಗಣಕಯಂತ್ರದಲ್ಲಿ ಉಪಯುಕ್ತವಾಗಿದೆಯೆಂದು ತಿಳಿಸಿದ್ದಾರೆ. ಅವರು ‘ಕೃತಕ ಬುದ್ಧಿವಂತಿಗೆ ಸಂಬಂಧಿಸಿದಂತೆ ಸಂಸ್ಕೃತದ ಮೇಲೆ ಸಂಶೋಧನೆ ನಡೆಸಿದ್ದಾರೆ. ಕಡಿಮೆ ಶಬ್ದಗಳಲ್ಲಿ ಸಂದೇಶಗಳನ್ನು ಕಳುಹಿಸಲು ಈ ಭಾಷೆಯನ್ನು ಉಪಯೋಗಿಸಬಹುದು’, ಎಂದು ಹೇಳಿದ್ದಾರೆ.

5. ದೇಶದ ಶೇ. 43.63 ರಷ್ಟು ಜನರು ಹಿಂದಿ ಮಾತನಾಡುತ್ತಿದ್ದು, ಕೇವಲ ಶೇ. 6 ರಷ್ಟು ನಾಗರಿಕರು ಮಾತ್ರ ಇಂಗ್ಲಿಷ್ ಮಾತನಾಡುತ್ತಾರೆ ಎಂದು ಒಂದು ಸಮೀಕ್ಷೆಯಿಂದ ಕಂಡು ಬಂದಿದೆ. ಗ್ರಾಮೀಣ ಭಾಗದಲ್ಲಿ ಶೇ. 3 ರಷ್ಟು ಜನರು ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಿದ್ದು, ಶೇ. 41 ರಷ್ಟು ಶ್ರೀಮಂತ ಜನರು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಾರೆ. ಹಾಗೆಯೇ ಕೇವಲ ಶೇ. 2 ರಷ್ಟು ಬಡವರು ಇಂಗ್ಲಿಷ್ ಮಾತನಾಡುತ್ತಾರೆ.

6. ಸಂಸ್ಕೃತ ಭಾಷೆಯು ಪ್ರಾದೇಶಿಕ ಭಾಷೆಯೊಂದಿಗೆ ಹೊಂದಿಕೊಳ್ಳುವ ಏಕೈಕ ಭಾಷೆಯಾಗಿದೆ. ಈ ದಾವೆಯನ್ನು ನಾನು ಭಾಷಾತಜ್ಞರೊಂದಿಗೆ ಚರ್ಚಿಸಿದ ಬಳಿಕವಷ್ಟೇ ಹೇಳುತ್ತಿದ್ದೇನೆ; ಕಾರಣ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡುವಾಗ ಅನೇಕ ಸಂಸ್ಕೃತ ಶಬ್ದಗಳನ್ನು ಉಪಯೋಗಿಸಲಾಗುತ್ತದೆ. ಉರ್ದು ಭಾಷೆ ಸಹಿತ ಇತರ ಅನೇಕ ಭಾಷೆಗಳಲ್ಲಿ ಸಂಸ್ಕೃತ ಶಬ್ದವಿದೆ. ಮರಾಠಿ, ಆಸ್ಸಾಮಿ, ಹಿಂದಿ, ತೆಲುಗು, ಬಂಗಾಳಿ, ಕನ್ನಡ ಮುಂತಾದ ಭಾಷೆಗಳಲ್ಲಿ ಶೇ. 60 ರಿಂದ 70 ರಷ್ಟು ಸಂಸ್ಕೃತ ಶಬ್ದಗಳಿವೆ ಎಂದು ಹೇಳಿದರು.

ಸಂಪಾದಕರ ನಿಲುವು

ದೇಶದ ಒಬ್ಬ ಮಾಜಿ ನ್ಯಾಯಮೂರ್ತಿಗಳು ಈ ರೀತಿ ಹೇಳಿಕೆ ನೀಡುವುದು, ಬಹಳ ದೊಡ್ಡ ವಿಷಯವಾಗಿದೆ. ಕೇಂದ್ರ ಸರಕಾರ ಈ ವಿಷಯವನ್ನು ಗಂಭೀರತೆಯಿಂದ ಪರಿಗಣಿಸಬೇಕೆಂದು ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತದೆ !