-
೨ ಪೋಲಿಸ್ ಮತ್ತು ಕೆಲವು ಹಿಂದೂಗಳಿಗೆ ಗಾಯ !
-
ದಾಳಿ ಪೂರ್ವನಿಯೋಜಿತ !
ಜಾಮತಾಡ (ಜಾರ್ಖಂಡ್) – ಇಲ್ಲಿಯ ಡೋಕಿಡಿಹ ಗ್ರಾಮದಲ್ಲಿ ಜನವರಿ ೨೭ ರಂದು ಶ್ರೀ ಸರಸ್ವತಿ ದೇವಿ ಮೂರ್ತಿಯ ವಿಸರ್ಜನೆಯ ಮೆರವಣಿಗೆಯ ಸಮಯದಲ್ಲಿ ಮುಸಲ್ಮಾನರಿಂದ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಪೋಲಿಸ್ ಮತ್ತು ಇತರ ಕೆಲವು ಹಿಂದುಗಳು ಗಾಯಗೊಂಡರು. ಪರಿಸ್ಥಿತಿಯ ಮೇಲೆ ನಿಯಂತ್ರಣ ಪಡೆಯಲು ಪೊಲೀಸರು ಗುಂಡಿನ ದಾಳಿ ನಡೆಸಿದರು. ಮೆರವಣಿಗೆ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಹೋಗುವಾಗ ಈ ಘಟನೆ ನಡೆದಿದೆ. ಏರು ಧ್ವನಿಯಲ್ಲಿ ಸಂಗೀತ ಹಾಕಿರುವುದರ ಜೊತೆಗೆ ಮೆರವಣಿಗೆ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಹೋಗುವಾಗ ಕಲ್ಲು ತೂರಾಟ ಆರಂಭವಾಯಿತು ಆಗ ಹಿಂದೂಗಳು ಪೊಲೀಸರನ್ನು ಕರೆಸಿದರು. ಪೊಲೀಸರು ಎರಡು ಪಕ್ಷದವರಿಗೆ ತಿಳಿಸಿದ ನಂತರ ಹಿಂದೂಗಳು ಸಂಗೀತ ಹಾಕದೆ ಮೆರವಣಿಗೆ ನಡೆಸಲು ಒಪ್ಪಿದರು; ಆದರೂ ಕೂಡ ಮುಸಲ್ಮಾನರು ಮತ್ತೆ ಅನಿರೀಕ್ಷಿತವಾಗಿ ದಾಳಿ ನಡೆಸಿದರು. ಅವರು ಮನೆಯ ಮಾಳಿಗೆಯಿಂದ ಕಲ್ಲು ತೂರಾಟ ನಡೆಸಿದರು. ಇದು ಪೂರ್ವನಿಯೋಜಿತ ದಾಳಿಯಾಗಿತ್ತು. ಮಾಳೆಗೆಯಲ್ಲಿ ಮುಂಚಿತವಾಗಿಯೇ ಕಲ್ಲುಗಳನ್ನು ಸಂಗ್ರಹಿಸಿ ಇಟ್ಟಿದ್ದರು. ಕಲ್ಲುತೂರಾಟ ತಡೆಯಲು ಪೊಲೀಸರಿಗೆ ಗುಂಡು ಹಾರಿಸಬೇಕಾಯಿತು. ಅದರ ನಂತರ ಹೆಚ್ಚಿನ ಪೋಲಿಸ ಬಂದೋಬಸ್ತಿನಲ್ಲಿ ಮೂರ್ತಿಯ ವಿಸರ್ಜನೆ ಮಾಡಿದರು.
ಸಂಪಾದಕೀಯ ನಿಲುವುದೇಶದಲ್ಲಿ ಎಂದಾದರೂ ಇತರ ಧರ್ಮದವರ ಮೆರವಣಿಗೆಯ ಮೇಲೆ ದಾಳಿ ನಡೆಯುವದಿಲ್ಲ; ಆದರೆ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಪ್ರತಿ ಸಲ ಹಿಂದುಗಳ ಧಾರ್ಮಿಕ ಮೆರವಣಿಗೆಯ ಮೇಲೆ ದಾಳಿ ಆಗುತ್ತದೆ, ಇದನ್ನು ಶಾಶ್ವತವಾಗಿ ತಡೆಯಲು ಸಾಧ್ಯವಾಗದೇ ಇರುವುದು ಹಿಂದುಗಳಿಗೆ ನಾಚಿಕೆಗೇಡು ! |