ಅಲಿಗಢನ ಪ್ರಾಥಮಿಕ ಶಾಲೆಯ ಮುಸಲ್ಮಾನ ಶಿಕ್ಷಕರಿಂದ ಭಾರತಮಾತೆಯ ಚಿತ್ರಕ್ಕೆ ಪುಷ್ಪ ಅರ್ಪಿಸಲು ನಿರಾಕರಣೆ !

ಜನರ ಒತ್ತಡದ ಬಳಿಕ ಪುಷ್ಪ ಅರ್ಪಣೆ !

ಅಲಿಗಢ (ಉತ್ತರಪ್ರದೇಶ) – ಇಲ್ಲಿಯ ಲಖಟೋಯಿ ಗ್ರಾಮದ ಒಂದು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಸಲ್ಮಾನ ಶಿಕ್ಷಕ ಹಸಮುದ್ದೀನ ಗಣರಾಜ್ಯೋತ್ಸವ ದಿನದಂದು ಶ್ರೀ ಸರಸ್ವತಿ ದೇವಿ ಮತ್ತು ಭಾರತಮಾತೆಯ ಚಿತ್ರಗಳ ಮೇಲೆ ಪುಷ್ಪವನ್ನು ಅರ್ಪಿಸಲು ನಿರಾಕರಿಸಿದನು. ಅವನ ಮೇಲೆ ಒತ್ತಡ ಹೇರಿದ ಬಳಿಕ ಅವನು ಪುಷ್ಪವನ್ನು ಅರ್ಪಿಸಿದನು. ಅವನು ಮೊದಲು ಅನಾರೋಗ್ಯವೆಂದು ಮತ್ತು ತದನಂತರ ಧರ್ಮದ ಹೆಸರಿನಲ್ಲಿ ಪುಷ್ಪ ಅರ್ಪಿಸಲು ನಿರಾಕರಿಸುತ್ತಿದ್ದನು. ‘ನಾವು ಕೇವಲ ಅಲ್ಲಾನ ಎದುರಿಗೆ ತಗ್ಗಿಸುತ್ತೇವೆ’, ಎಂದು ಅವನು ಹೇಳುತ್ತಿದ್ದನು. ಈ ಪ್ರಕರಣದ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗುತ್ತಿದೆ.

ಪ್ರಾಥಮಿಕ ಶಿಕ್ಷಣಾಧಿಕಾರಿ ಸತೇಂದ್ರ ಕುಮಾರ ಮಾತನಾಡುತ್ತಾ, ಈ ಪ್ರಕರಣದ ವಿಚಾರಣೆ ನಡೆಸುವಂತೆ ಆದೇಶ ನೀಡಿದ್ದಾರೆ. ಒಂದು ವೇಳೆ ವಿಚಾರಣೆಯಲ್ಲಿ ಸತ್ಯವಿದೆಯೆಂದು ಕಂಡು ಬಂದರೆ, ಅವನ ಮೇಲೆ ಕ್ರಮ ಕೈಗೊಳ್ಳಲಾಗುವುದು (ಇದರ ವಿಡಿಯೋ ಪ್ರಸಾರವಾಗಿದೆ ಇದರಿಂದ ಈ ಪ್ರಕರಣದಲ್ಲಿ ಸತ್ಯಾಂಶವಿದೆಯೆಂದು ಪರಿಶೀಲಿಸಲು ಇನ್ನೂ ಏನು ಬಾಕಿಯಿದೆ ? ಶಿಕ್ಷಣಾಧಿಕಾರಿಗಳ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಯಾರಿಗಾದರೂ ಅನ್ನಿಸಿದರೆ ಆಶ್ವರ್ಯವಿಲ್ಲ – ಸಂಪಾದಕರು)

ಸಂಪಾದಕೀಯ ನಿಲುವು

ಸರ್ವಧರ್ಮಸಮಭಾವದವರು ಈ ವಿಷಯದಲ್ಲಿ ಏಕೆ ಬಾಯಿ ತೆರೆಯುವುದಿಲ್ಲ. ಅವರು ಕೇವಲ ಹಿಂದೂಗಳಿಗೆ ಮಾತ್ರ ಈ ನುಡಿಮುತ್ತು ನೀಡಲು ಪ್ರಯತ್ನಿಸುತ್ತಲೇ ಇರುತ್ತಾರೆ ಎನ್ನುವುದನ್ನು ಗಮನಿಸಬೇಕು !