ಪವಾಡದಿಂದ ಜೋಶಿಮಠ ಗ್ರಾಮದಲ್ಲಿನ ಭೂಕುಸಿತ ತಡೆದರೆ ಜೈ ಜೈಕಾರ ಮಾಡುವೆವು !

ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರನಂದ ಸರಸ್ವತಿ ಇವರು ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರ ಹೆಸರು ಹೇಳದೆ ಕರೆ !

ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

ಬೀಲಾಸಪುರ (ಛತ್ತೀಸ್ ಗಡ) – ಪವಾಡ ನಡೆಸುವವರು ಮೊದಲು ಜೋಶಿಮಠ ಗ್ರಾಮಕ್ಕೆ ಬರಬೇಕು ಮತ್ತು ಅಲ್ಲಿ ಆಗುತ್ತಿರುವ ಭೂಕುಸಿತ ನಿಲ್ಲಿಸಬೇಕು. ಹಾಗೆ ಮಾಡಿದರೆ ನಾವು ಅವರ ಜೈ ಜೈಕಾರ ಮಾಡುವೆವು, ಅವರಿಗೆ ವಂದಿಸುವೆವು, ಎಂದು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರ ಹೆಸರು ಹೇಳದೆ ಕರೆ ನೀಡಿದರು.

ಶಂಕರಾಚಾರ್ಯರು ಮಾತು ಮುಂದುವರಿಸಿ, ಪವಾಡ ಮಾಡುತ್ತಿದ್ದರೆ, ಮತಾಂತರವನ್ನು ತಡೆದು ತೋರಿಸಿ, ಆತ್ಮಹತ್ಯೆ ತಡೆಯಿರಿ ಹಾಗೂ ಶಾಂತಿ ಪ್ರಸ್ತಾಪಿಸಿರಿ. ನಿಮ್ಮ ಪವಾಡ ಜನರ ಒಳಿತಿಗಾಗಿ ಉಪಯೋಗಿಸಿದರೆ ನಾವು ನಮಸ್ಕಾರ ಮಾಡುತ್ತೇವೆ. ಇಲ್ಲವಾದರೆ ‘ನೀವು ಮೋಸ ಮಾಡುತ್ತಿರುವಿರಿ’, ಎಂದು ತಿಳಿಯುತ್ತೇವೆ ಎಂದು ಹೇಳಿದರು.