ಪಾಕಿಸ್ತಾನದಲ್ಲಿ ಈಗ ಮುಸಲ್ಮಾನೇತರರಿಗೂ ಕುರಾನ್ ಅಧ್ಯಯನ ಕಡ್ಡಾಯ !

ಪಾಕಿಸ್ತಾನ ಸರಕಾರದ ನಿರ್ಣಯ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನವು ದೇಶದಲ್ಲಿನ ಎಲ್ಲಾ ವಿದ್ಯಾಪೀಠಗಳಲ್ಲಿ ಕುರಾನ್ ಕಲಿಸುವುದು ಅನಿವಾರ್ಯಗೊಳಿಸಿದೆ. ಈ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಠರಾವು ಅಂಗಿಕರಿಸಲಾಯಿತು. ಈಗ ವಿದ್ಯಾಪೀಠಗಳಲ್ಲಿ ಕುರಾನ್ ಭಾಷಾಂತರ ಸಹಿತ ಕಲಿಸಲಾಗುವುದು. ಕುರಾನ್ ಅಧ್ಯಯನ ಮಾಡಿದ ನಂತರ ವಿದ್ಯಾರ್ಥಿಗಳಿಗೆ ಅದಕ್ಕಾಗಿ ಯಾವುದೇ ಪರೀಕ್ಷೆ ನೀಡಬೇಕಿಲ್ಲ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ ಕೂಡ ನೀಡುವುದಿಲ್ಲ. ಕುರಾನ್ ಕಲಿಸುವ ನಿರ್ಣಯದ ಹಿಂದೆ ವಿದ್ಯಾರ್ಥಿಗಳು ಕುರಾನ್ ಓದುವುದಕ್ಕೆ ಪ್ರೇರಿತರಾಗುವ ಉದ್ದೇಶವಾಗಿದೆ. ಆದ್ದರಿಂದ ಪಾಕಿಸ್ತಾನದಲ್ಲಿ ಈಗ ಮುಸಲ್ಮಾನೇತರರು ಅಂದರೆ ಅಲ್ಪಸಂಖ್ಯಾತ ಹಿಂದೂ ಮತ್ತು ಇತರ ಸಮಾಜದ ಜನರು ಕೂಡ ಕುರಾನ್ ಓದಬೇಕು.

ಜಮಾತೆ-ಎ-ಇಸ್ಲಾಮಿನ ಸಂಸದ ಮುಶ್ತಾಕ್ ಅಹಮದ್ ಇವರು ಈ ಸಂದರ್ಭದ ಠರಾವು ಮಂಡಿಸಿದ್ದರು. ಅವರು, ಕುರಾನಿನಲ್ಲಿ ಯಾವ ವಿಷಯ ಯೋಗ್ಯವಾಗಿದೆ ಮತ್ತು ಯಾವುದು ಅಯೋಗ್ಯ ? ಇದು ಜನರಿಗೆ ತಿಳಿಯಬೇಕು. ಜನರಿಗೆ ಯೋಗ್ಯ ಮತ್ತು ಅಯೋಗ್ಯದ ತಿಳುವಳಿಕೆ ಇರುವುದು ಬಹಳ ಮಹತ್ವದ್ದಾಗಿದೆ ಆದ್ದರಿಂದಲೇ ಕುರಾನ್ ಓದಬೇಕು ಮತ್ತು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದಲ್ಲಿನ ಯಾವುದೇ ಸರಕಾರವು ಎಲ್ಲ ಧರ್ಮದವರಿಗೆ ಹಿಂದೂ ಧರ್ಮ ಗ್ರಂಥದ ಅಧ್ಯಯನ ನೀಡುವ ಕಾನೂನು ರೂಪಿಸಲು ಧೈರ್ಯ ಮಾಡಲು ಸಾಧ್ಯವೇ ?