ರಾಮಗಡ (ಜಾರ್ಖಂಡ್) ಇಲ್ಲಿ ಅರಮಾನ ಖಾನ್ ಇವನಿಂದ ವಿವಾಹಿತ ಹಿಂದೂ ಮಹಿಳೆಯ ಹತ್ಯೆ !

ರಾಂಚಿ – ಜಾರ್ಖಂಡಿನ ರಾಮಗಡ ಜಿಲ್ಲೆಯ ಅರಮಾನ ಖಾನ್ ಓರ್ವ ವಿವಾಹಿತ ಹಿಂದೂ ಮಹಿಳೆಯನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಇತ್ತಿಚೆಗೆ ಬೆಳಕಿಗೆ ಬಂದಿದೆ. ಮೃತ ಮಹಿಳೆಯ ಹೆಸರು ಮಮತಾ ಎಂದಾಗಿದೆ. ಘಟನೆಯ ನಂತರ ಅರಮಾನ ಖಾನ್ ಪರಾರಿಯಾಗಿದ್ದಾನೆ.

೧. ಅರಮಾನ ಖಾನ್ ಮಮತಾಗೆ ಆಕೆಯ ಪತಿಯನ್ನು ತೊರೆಯಲು ಒತ್ತಡ ಹೇರುತ್ತಿದ್ದನು. ಮಮತಾ ಪತಿಯನ್ನು ತೊರೆಯಲು ನಿರಾಕರಿಸಿರುವುದರಿಂದ ಅವನು ಆಕೆಯ ಹತ್ಯೆ ಮಾಡಿದನು. ಈ ಘಟನೆ ನಡೆದಾಗ ಮಮತಾಳ ೩ ವರ್ಷದ ಹುಡುಗಿ ಮನೆಯಲ್ಲಿ ಇದ್ದಳು.

೨. ಮಮತಾಳ ಅಕ್ಕ ಜಯಾದೇವಿ ಇವರು, ಮಮತಾ ಆಕೆಯ ಗಂಡನ ಜೊತೆಗೆ ದೆಹಲಿಯಲ್ಲಿ ವಾಸವಾಗಿದ್ದಳು. ಜನವರಿ ೧೪, ೨೦೨೩ ರಂದು ಮಮತಾ ಆಕೆಯ 3 ವರ್ಷದ ಮಗಳ ಜೊತೆಗೆ ಅಕ್ಕನ ಮನೆಗೆ ಬಂದಿದ್ದಳು. ಮನೆಯಲ್ಲಿ ಮಮತಾ ಒಬ್ಬಳೇ ಇರುವುದನ್ನು ನೋಡಿ ಅರಮಾನ್ ಖಾನ್ ಆಕೆಯನ್ನು ಸಂಪರ್ಕಿಸಿದನು. ಅರಮಾನನ ಜೊತೆಗೆ ಆಕೆಯ ಜಗಳವಾಯಿತು. ಆ ಸಮಯದಲ್ಲಿ ಅರಮಾನಾನು ಮಮತಾಳನ್ನು ಲಾಠಿಯಿಂದ ಥಳಿಸಿ ಆಕೆಯ ಹತ್ಯೆ ಮಾಡಿದನು.

೩. ಹತ್ಯೆಯ ಮಾಹಿತಿ ದೊರೆಯುತ್ತಲೇ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದರು. ಅವರು ಮೃತ ದೇಹ ಶವಪರೀಕ್ಷೆಗಾಗಿ ಕಳುಹಿಸಿದರು.

೪. ಮೃತ ಮಮತಾಳ ಅಕ್ಕ ಜಯಾದೇವಿ ಇವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಅರಮಾನ ಖಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸುವುದಕ್ಕೆ ಪೊಲೀಸರು ದಾಳಿ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿದರೆ ಈ ರೀತಿಯ ಘಟನೆ ನಿಲ್ಲುವುದು !