ನ್ಯೂಯಾರ್ಕ (ಅಮೇರಿಕಾ) – ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಸ್ಥಿತಿಯ ವಿಷಯದಲ್ಲಿ ಕಳವಳ ವ್ಯಕ್ತ ಪಡಿಸಿದ್ದಾರೆ. ಅವರ ಅಭಿಪ್ರಾಯದಂತೆ ಪಾಕಿಸ್ತಾನದಲ್ಲಿ ಅಪಹರಣ, ಬಲವಂತವಾಗಿ ಮತಾಂತರ ಮತ್ತು ವಿವಾಹವಾಗುವ ಪ್ರಕರಣಗಳಲ್ಲಿ ಅತ್ಯಧಿಕ ಏರಿಕೆ ಕಂಡಿದೆ. ಇದನ್ನು ತಡೆಗಟ್ಟಲು ಆವಶ್ಯಕವಿರುವ ಕ್ರಮ ಕೈಕೊಳ್ಳುವ ಆವಶ್ಯಕತೆಯಿದೆ ಎಂದು ಹೇಳಿದೆ. ಅಲ್ಪಸಂಖ್ಯಾತರ ಮೇಲೆ ಆಗುವ ಆಘಾತಗಳು ತಡೆಗಟ್ಟಲು ಪಕ್ಷಪಾತ ಮಾಡದೇ ಕಠಿಣ ಕ್ರಮ ಕೈಗೊಳ್ಳಬೇಕು. ದೇಶದ ಕಾನೂನು ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಿದ್ಧಾಂತಕ್ಕನುಸಾರ ಈ ಕುರಿತು ಹೆಜ್ಜೆ ಇಡುವುದು ಅಗತ್ಯವಿದೆ. ಈ ಆಘಾತಗಳಿಗೆ ಕಾರಣಕರ್ತರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.
UN rights experts deplore a reported rise in abductions, forced marriages and conversions of girls from #Pakistan’s religious minorities, urging the government to swiftly halt such practices.https://t.co/HYDRz7mpkd
— Al Arabiya English (@AlArabiya_Eng) January 16, 2023
ನಮಗೆ ಇದನ್ನು ಕೇಳಿ ಬಹಳ ದುಃಖವಾಗುತ್ತಿದೆ, 13 ವರ್ಷದ ಬಾಲಕಿಯನ್ನು ಮನೆಯಿಂದ ಅಪಹರಿಸಲಾಗುತ್ತಿದೆ. ತದನಂತರ ಕಳ್ಳಸಾಗಾಣಿಕೆಯ ಮೂಲಕ ಅವರನ್ನು ಮತ್ತೊಂದು ಸ್ಥಳಕ್ಕೆ ಕಳುಹಿಸಲಾಗುತ್ತದೆ. ಅವಳಿಗಿಂತ ಎರಡು ಪಟ್ಟು ಹೆಚ್ಚಿರುವ ವಯಸ್ಸಿನ ಪುರುಷನೊಂದಿಗೆ ಅವಳ ವಿವಾಹ ಮಾಡಲಾಗುತ್ತದೆ. ಹಾಗೆಯೇ ಮತಾಂತರಗೊಳಿಸಲಾಗುತ್ತದೆ. ಇದು ಎಲ್ಲ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.
ನಾವು ಈ ವಿಷಯದಲ್ಲಿ ಚಿಂತೆಗೊಳಗಾಗಿದ್ದೇವೆ. ಇಂತಹವರಿಗೆ ನ್ಯಾಯವೂ ದೊರೆಯದೇ ಇದ್ದರಿಂದ ನಾವು ಹತಾಶರಾಗಿದ್ದೇವೆ. ಅಪಹರಣ ಮತ್ತು ಮತಾಂತರಗೊಳಿಸುವವರಿಗೆ ಸ್ಥಳೀಯ ಭದ್ರತಾ ದಳ ಮತ್ತು ನ್ಯಾಯಾಲಯದ ಬೆಂಬಲವಿದೆ. ಪೊಲೀಸರು ಸಂತ್ರಸ್ತ ಸಂಬಂಧಿಕರ ದೂರನ್ನು ನಿರ್ಲಕ್ಷಿಸುತ್ತಾರೆ. ದೂರನ್ನು ಕೂಡ ನೊಂದಾಯಿಸಲಾಗುವುದಿಲ್ಲ. ಅಪಹರಣ ಮಾಡಿ ಆಗಿರುವ ಮದುವೆಗೆ ‘ಪ್ರೇಮ ವಿವಾಹ’ ಎಂದು ಹೇಳಲಾಗುತ್ತದೆ. ಅಪಹರಣ ಮಾಡಿರುವವರಿಂದ ಸಂತ್ರಸ್ತೆಯ ಮೂಲಕ ಸುಳ್ಳು ದಾಖಲೆಗಳ ಮೇಲೆ ಒತ್ತಾಯವಾಗಿ ಹಸ್ತಾಕ್ಷರ ಬರೆಸಿಕೊಳ್ಳುತ್ತಾರೆ ಮತ್ತು ಅವಳ ಸ್ವ ಇಚ್ಛೆಯಿಂದ ವಿವಾಹ ಆಗಿರುವಂತೆ ತೋರಿಸುತ್ತಾರೆ. ಆದ್ದರಿಂದ ಪೊಲೀಸರು ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇದನ್ನು ತಡೆಗಟ್ಟಲು ಅಧಿಕಾರಿಗಳು ಕಾನೂನನ್ನು ಪಾಲಿಸಬೇಕು. ಇದರಿಂದ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಮತ್ತು ಮಾನವ ಹಕ್ಕುಗಳ ಪಾಲನೆಯಾಗುವುದು ಎಂದು ಹೇಳಿದೆ.
ಸಂಪಾದಕೀಯ ನಿಲುವು
|