ಒಂದೂವರೆ ಕೋಟಿ ಖರ್ಚು ಮಾಡಿ ಚುನಾವಣೆಯಲ್ಲಿ ಆರಿಸಿ ಬಂದಿದ್ದೇನೆ !

ಹರಿಯಾಣದ ಓರ್ವ ಸರಪಂಚನ ಹೇಳಿಕೆ

ಹಿಸ್ಸಾರ (ಹರಿಯಾಣಾ) – ಒಂದೂವರೆ ಕೋಟಿ ರೂಪಾಯಿ ಖರ್ಚು ಮಾಡಿದ ಬಳಿಕ ನಾನು ಸರಪಂಚನಾಗಿದ್ದೇನೆ. ಆದ್ದರಿಂದ ನನಗೆ ‘ರೈಟ ಟು ರಿಕಾಲ್’ನ (ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸುವ ಅಧಿಕಾರ) ಹೆದರಿಕೆಯನ್ನು ತೋರಿಸುವವರಿಗೆ 2024 ರಲ್ಲಿ ಹಿಂದಕ್ಕೆ ಕಳುಹಿಸಲಾಗುವುದು, ಎಂದು ಹಾಂಸಿ ಪ್ರದೇಶದ ಓರ್ವ ಸರಪಂಚನು ಹೇಳಿಕೆ ನೀಡಿದ್ದಾರೆ. ಅವರ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ಈ ವಿಡಿಯೋ ಜನೇವರಿ 15 ರಂದು ರಾಜ್ಯದ ಪಂಚಾಯತ ಸಚಿವ ದೇವೆಂದ್ರ ಬಬಲಿಯವರ ವಿರುದ್ಧ ಆಯೋಜಿಸಲಾಗಿರುವ ಒಂದು ಕಾರ್ಯಕ್ರಮದಲ್ಲಿ ಹೇಳಿರುವುದಾಗಿದೆ.

ಸಂಪಾದಕೀಯ ನಿಲುವು

ಚುನಾವಣೆಯನ್ನು ಗೆಲ್ಲಲು ಹಣವನ್ನು ನೀರಿನಂತೆ ಖರ್ಚು ಮಾಡಬೇಕಾಗುತ್ತದೆ, ಇದು ದೇಶದ ಪ್ರತಿಯೊಬ್ಬ ವ್ಯಕ್ತಿಗೂ ತಿಳಿದಿದೆ. ಹಣವನ್ನು ಹಂಚದೇ ಇದ್ದರೆ ಮತಗಳು ಸಿಗುವುದಿಲ್ಲ ಎನ್ನುವುದೂ ತಿಳಿದಿದೆ. ಇದನ್ನೇ ಈ ಸರಪಂಚ ಹೇಳುತ್ತಿದ್ದಾನೆ ! ಸರಪಂಚನಾಗಲು ಒಂದೂವರೆ ಕೋಟಿ ಖರ್ಚು ಮಾಡಬೇಕಾಗಿದ್ದರೆ, ನಗರಸೇವಕ, ಶಾಸಕ ಮತ್ತು ಸಂಸದನಾಗಲು ಎಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು ಎನ್ನುವುದನ್ನು ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ !