ಸರ್ವೋಚ್ಚ ಮುಖಂಡನ ವ್ಯಂಗ್ಯ ಚಿತ್ರ ಪ್ರಸಾರ ಮಾಡಿದ್ದರಿಂದ ಇರಾನ್ ಸೈನ್ಯದ ಮುಖ್ಯಸ್ಥನಿಂದ ‘ಶಾರ್ಲಿ ಹೆಬ್ದೋ’ ನಿಯತಕಾಲಿಕೆಯ ಸಂಪಾದಕನಿಗೆ ಬೆದರಿಕೆ !

ತೆಹೆರಾನ (ಇರಾನ್) – ಫ್ರಾನ್ಸ್ ನ ವ್ಯಂಗ್ಯಚಿತ್ರ ನಿಯತಕಾಲಿಕೆ ‘ಶಾರ್ಲಿ ಹೆಬ್ದೋ’ದಲ್ಲಿ ಇರಾನಿನ ಸರ್ವೋಚ್ಚ ಮುಖಂಡ ಆಯತುಲ್ಲಾ ಅಲಿ ಖಾಮೇನಿ ಇವರ ವ್ಯಂಗ್ಯ ಚಿತ್ರ ಪ್ರಸಾರ ಮಾಡಿದ್ದರಿಂದ ಇರಾನಿನ `ರಿವ್ಯಾಲ್ಯೂಶನರಿ ಗೈಡ್ಸ್’ ನ ಮುಖ್ಯಸ್ಥ ಮೇಜರ್ ಜನರಲ್ ಹುಸೇನ್ ಸಲಾಮಿ ಇವರು `ಶಾರ್ಲಿ ಹೆಬ್ದೋ’ ದ ಸಂಪಾದಕರಿಗೆ ಜೀವ ಬೆದರಿಕೆ ಹಾಕಿದ್ದಾರೆ. `ನಿಮ್ಮ ಸ್ಥಿತಿ ಸಲ್ಮಾನ್ ರಶ್ದಿ ಇವರ ಹಾಗೆ ಆಗಬಹುದು’, ಎಂದು ಸಲಾಮಿ ಇವರು ಹೇಳಿದರು. ಸಲ್ಮಾನ್ ರಶ್ದಿ ಇವರು ೧೯೮೮ ದಲ್ಲಿ ಬರೆದಿರುವ `ಸಾಟನಿಕ್ ವರ್ಸೆಸ್ (ಶೈತಾನಿ ಆಯತಗಳು (ವಾಕ್ಯಗಳು)) ಈ ಪುಸ್ತಕದಲ್ಲಿ ಕುರಾನಿನ ಅಪಮಾನ ಮಾಡಿದ್ದರಿಂದ ಅವರನ್ನು ಇರಾನಿನ ಅಂದಿನ ಸರ್ವೊಚ್ಚ ಮುಖಂಡ ಆಯತುಲ್ಲ ಖೋಮೆನಿ ಇವರು ಹತ್ಯೆ ಮಾಡುವ ಫತ್ವಾ ತೆಗೆದಿದ್ದರು.

ರಶ್ಡಿ ಇವರ ಮೇಲೆ ಕೆಲವು ತಿಂಗಳ ಹಿಂದೆ ಅಮೇರಿಕಾದಲ್ಲಿ ದಾಳಿ ಮಾಡಲಾಗಿತ್ತು. ಸಮಾಲಿ ಇವರು, ಮುಸಲ್ಮಾನರು ಒಂದಿಲ್ಲ ಒಂದು ದಿನ ಸೇಡು ತೀರಿಸಿಕೊಳ್ಳುವರು. ನೀವು ಹಂತಕನನ್ನು ಹಿಡಿಯಬಹುದು; ಆದರೆ ಹತ್ಯೆಯಾದವರು ಎಂದು ಹಿಂತಿರುಗಿ ಬರುವುದಿಲ್ಲ ಎಂದು ಹೇಳಿದ್ದಾರೆ.

ಇರಾನಿನ ಇನ್ನೂ ಕೆಲವು ಮೌಲ್ವಿಗಳ ವ್ಯಂಗ್ಯ ಚಿತ್ರಗಳನ್ನು ಮುದ್ರಿಸುವೆವು ! – ಶಾರ್ಲಿ ಹೆಬ್ದೋ

ಈ ಬೆದರಿಕೆಯ ಹಿನ್ನಲೆಯಲ್ಲಿ ‘ಶಾರ್ಲಿ ಹೆಬ್ದೋ’ದ ಸಂಪಾದಕ ಲಾರೆಂಟ್ ಸಾರಿಸೇವು ಇವರು ಪ್ರತ್ಯುತ್ತರ ನೀಡುತ್ತಾ, ನಾವು ಇರಾನಿನ ಇನ್ನೂ ಕೆಲವು ಮೌಲ್ವಿಗಳ ವ್ಯಂಗ್ಯ ಚಿತ್ರಗಳನ್ನು ಪ್ರಸಾರ ಮಾಡುವವರಿದ್ದೇವು. ಮುಲ್ಲಾಗಳು ಖುಷಿಯಲ್ಲಿ ಇಲ್ಲ, ಎಂದು ಅನಿಸುವುದಿಲ್ಲವೋ ಅಥವಾ ನಮ್ಮ ವ್ಯಂಗ್ಯ ಚಿತ್ರಗಳಿಂದ ಸರ್ವೋಚ್ಚ ಮುಖಂಡರಿಗೆ ನಗು ಬರುತ್ತಿಲ್ಲವೇ ಎಂದು ಕೇಳಿದ್ದಾರೆ.

ಸಂಪಾದಕೀಯ ನಿಲುವು

ಪ್ರಸಾರ ಮಾಧ್ಯಮಗಳ ಸ್ವಾತಂತ್ರ್ಯದ ಮೇಲೆ ಈ ರೀತಿಯ ಕಡಿವಾಣ ಹಾಕುವವರ ವಿರುದ್ಧ ಭಾರತದಲ್ಲಿನ ಪ್ರಗತಿ(ಅಧೋಗತಿ)ಪರರು ಎಂದಾದರೂ ಮಾತನಾಡುವರೇ ?