‘ಲವ್ ಜಿಹಾದ’ನ ಆರೋಪಿ ಚಾಂದ ಮಹಮ್ಮದ,”ನಾನು ಹಿಂದೂ ಆಗಲು ಸಿದ್ಧನಿದ್ದೇನೆ’ ಎಂದು ಹೇಳಿದ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿ 2021 ರಲ್ಲಿ ಓರ್ವ ಹಿಂದೂ ಯುವತಿಗೆ ತಾನು ಹಿಂದೂ ಆಗಿದ್ದೇನೆಂದು ಹೇಳಿ ಪ್ರೀತಿಯ ಬಲೆಯಲ್ಲಿ ಸೆಳೆದು ಅವಳೊಂದಿಗೆ ವಿವಾಹವಾಗಿರುವ ಚಾಂದ ಮಹಮ್ಮದನ ವಿರುದ್ಧ ಯುವತಿಯು ಈ ಹಲ್ಲೆ ಮಾಡಿದ್ದಾನೆಂದು ದೂರು ನೀಡಿದ ಬಳಿಕ ಪೊಲೀಸರು ಅಪರಾಧ ದಾಖಲಿಸಿದ್ದಾರೆ. ತದನಂತರ ಈಗ ಚಾಂದ ಮಹಮ್ಮದ ಹಿಂದೂ ಆಗಲು ಸಿದ್ಧನಾಗಿದ್ದಾನೆ.

೧. ಚಾಂದ ಮಹಮ್ಮದನೊಂದಿಗೆ ವಿವಾಹವಾಗಿರುವ ಯುವತಿಯು ತನ್ನ ದೂರಿನಲ್ಲಿ, ನನ್ನ ಮುಸಲ್ಮಾನ ಪತಿ ನನ್ನನ್ನು ಪೀಡಿಸುತ್ತಾನೆ. ಅವನಿಗೆ ಮನಸ್ಸು ಬಂದಾಗಲೆಲ್ಲ ನನಗೆ ಹೊಡೆಯುತ್ತಾನೆ. ಅವನು ತಾನು ಸ್ವತಃ ಹಿಂದೂ ಆಗಿರುವೆನೆಂದು ಹೇಳಿ ನನ್ನೊಂದಿಗೆ ವಿವಾಹವಾಗಿದ್ದಾನೆ ಎಂದು ತಿಳಿಸಿದ್ದಾಳೆ.

೨. ಈ ವಿಷಯದಲ್ಲಿ ಚಾಂದ ಮಹಮ್ಮದ, ನನಗೆ ನನ್ನ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗುವುದಿದೆ. ನಾನು ಬೇಕಂತಲೇ ಅವಳ ಮನಸ್ಸು ನೋಯಿಸಿಲ್ಲ. ಸಿಟ್ಟಿನಿಂದ ಆಗಿರುವ ತಪ್ಪನ್ನು ನಾನು ಸುಧಾರಿಸುತ್ತೇನೆ. ನಾನು ಹೊಸ ಜೀವನವನ್ನು ಜೀವಿಸುತ್ತೇನೆ. ನಾನು ನನ್ನ ಧರ್ಮವನ್ನೂ ಬದಲಾಯಿಸುತ್ತೇನೆ. ನಾನು ಶನಿ ಮೌರ್ಯ ಆಗುತ್ತೇನೆ ಎಂದು ತಿಳಿಸಿದ್ದಾನೆ.

ಸಂಪಾದಕೀಯ ನಿಲುವು

ಹಿಂದೂ ಯುವತಿಯನ್ನು ಮೋಸಗೊಳಿಸಿದ ಚಾಂದ ಮಹಮ್ಮದ ಮೇಲೆ ಯಾರು ವಿಶ್ವಾಸ ಇಡುವರು ? ಇಂತಹವರಿಗೆ ಕಠಿಣ ಶಿಕ್ಷೆಯಾಗುವುದು ಆವಶ್ಯಕವಿದೆ !