ಚಾರಧಾಮ ಯಾತ್ರೆಯಗಾಗಿ ರಸ್ತೆಯ ಕಾಮಗಾರಿ ವಿಷಯವಾಗಿ ತಜ್ಞರ ವರದಿ ಮುಚ್ಚುವ ಪ್ರಯತ್ನ ! – ಡಾ. ಸುಬ್ರಹ್ಮಣ್ಯಮ್ ಸ್ವಾಮಿ ಇವರ ಆರೋಪ

ನವ ದೆಹಲಿ – ಉತ್ತರಾಖಂಡದಲ್ಲಿನ ಚಾರಧಾಮ ರಸ್ತೆಯ ಕಾಮಗಾರಿಯ ಬಗ್ಗೆ ತಜ್ಞರ ವರದಿಯನ್ನು ಮುಚ್ಚುವುದು ಎಂದರೆ ಭಗವಂತ ಮಹಾದೇವನ ಸಿಟ್ಟು ಜನರಿಂದ ಮುಚ್ಚಿಡುವುದು ಆಗಿದೆ. ರಾಮ ಸೇತುವಿನ ಹಿನ್ನೆಲೆಯಲ್ಲಿ ಕೂಡ ಹೀಗೆ ಇದೆ. ಇದು ಶ್ರದ್ಧೆ ಮೂಢನಂಬಿಕೆ ಅಲ್ಲ, ಎಂದು ಭಾಜಪದ ನಾಯಕ ಡಾ. ಸುಬ್ರಹ್ಮಣ್ಯಮ್ ಸ್ವಾಮಿ ಇವರು ಉತ್ತರಖಂಡದ ಭೂಕುಸಿತದ ಬಗ್ಗೆ ಟೀಕಿಸಿದರು. ಜೋಶಿ ಮಠ ಗ್ರಾಮದಲ್ಲಿನ ಭೂಕುಸಿತದ ಹಿಂದೆ ಚಾರಧಾಮ ಯಾತ್ರೆಗಾಗಿ ನಡೆಸಲಾಗುತ್ತಿರುವ ರಸ್ತೆಯ ಕಾಮಗಾರಿ ಕೂಡ ಕಾರಣ ಎಂದು ತಜ್ಞರ ಹಾಗೂ ಸ್ಥಳೀಯರ ಅಭಿಪ್ರಾಯವಾಗಿದೆ. ತಜ್ಞರು ಈ ಬಗ್ಗೆ ವರದಿ ಕೂಡ ಪ್ರಸ್ತುತಪಡಿಸಿದ್ದು ಅದನ್ನು ಮುಚ್ಚಿಡಲಾಗುತ್ತಿದೆ, ಎಂದು ಡಾ. ಸ್ವಾಮಿಯವರು ಆರೋಪಿಸಿದ್ದಾರೆ.