ವಿಚಾರಣೆ ನಡೆಸುವಂತೆ ಉತ್ತರಪ್ರದೇಶದಿಂದ ಆದೇಶ !ಮದರಸಾಗಳಿಗೆ ಸಿಗುವ ಆರ್ಥಿಕ ಸಹಾಯದ ವಿಚಾರಣೆ ನಡೆಸಲಾಗುವುದು ! |
ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶಕ್ಕೆ ತಾಗಿರುವ ನೇಪಾಳದ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ಮದರಸಾಗಳನ್ನು ಕಟ್ಟುತ್ತಿರುವುದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದಲ್ಲಿನ ಯೋಗಿ ಆದಿತ್ಯನಾಥ ಸರಕಾರವು ಅದರ ಬಗ್ಗೆ ವಿಚಾರಣೆ ನಡೆಸುವಂತೆ ಆದೇಶ ನೀಡಿದೆ. ಸರಕಾರವು ಗಡಿಯಲ್ಲಿನ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಈ ಅಕ್ರಮ ಮದರಸಾಗಳಿಗೆ ಸಿಗುವ ಆರ್ಥಿಕ ಸಹಾಯದ ಬಗ್ಗೆ ವಿಚಾರಣೆಯ ಜೊತೆಗೆ ಯಾವ ಸಂಸ್ಥೆಯಿಂದ ಈ ಮದರಸಾಗಳು ನಡೆಸಲಾಗುತ್ತಿದೆ, ಅದಕ್ಕೆ ಎಲ್ಲಿಂದ ಹಣ ಸಿಗುತ್ತದೆ ?, ಇದರ ಮಾಹಿತಿ ಕೂಡ ಪಡೆಯಲು ಹೇಳಿದೆ. ಸರಕಾರದಿಂದ ಈ ಹಿಂದೆಯೇ ರಾಜ್ಯದಲ್ಲಿನ ಮದರಸಾಗಳ ಸಮೀಕ್ಷೆ ಮಾಡಲಾಗಿತ್ತು. ರಾಜ್ಯ ಸಚಿವ ಧರ್ಮಪಾಲ ಸಿಂಹ ಇವರು, ಮದರಸಾಗಳ ಸಮೀಕ್ಷೆಯಿಂದ, ಈ ಪ್ರದೇಶಗಳಲ್ಲಿ ಮುಸಲ್ಮಾನರು ಬಡವರಾಗಿದ್ದಾರೆ. ಅವರು ಹಣ ನೀಡಲು ಸಾಧ್ಯವಿಲ್ಲ. ಆದರೂ ಕೂಡ ಇಲ್ಲಿ ಮದರಸಗಳು ಹೇಗೆ ನಡೆಯುತ್ತದೆ ? ಅದಕ್ಕೆ ಯಾರು ಹಣ ನೀಡುತ್ತಾರೆ ?, ಇದನ್ನು ನಾವು ನೋಡುವವರಿದ್ದೇವೆ. ಈ ಮದರಸಾಗಳ ಸಮೀಕ್ಷೆಯಲ್ಲಿ ಹಣ ನೀಡುವವರ ಮಾಹಿತಿ ನೀಡಿರಲಿಲ್ಲ. ಇಂತಹ ಅನೇಕ ಮದರಸಾಗಳು ಇವೆ, ಅದಕ್ಕೆ ಹೊರಗಿನಿಂದ ಹಣ ಸಿಗುತ್ತದೆ. ಹೊರಗಿನಿಂದ ಏಕೆ ಹಣ ಕೊಡಲಾಗುತ್ತದೆ ? ಇದರ ವಿಚಾರಣೆ ಕೂಡ ನಾವು ಮಾಡುವವರಿದ್ದೇವೆ. ನಮ್ಮ ರಾಜ್ಯದಲ್ಲಿ ನಮ್ಮ ಮಕ್ಕಳನ್ನು ಕೆಟ್ಟ ಕೆಲಸಕ್ಕಾಗಿ ಬಳಸುವ ಸಾಧ್ಯತೆ ಇರುವುದರಿಂದ ನಾವು ಜಾಗರೂಕವಾಗಿದ್ದೇವೆ ಎಂದು ಹೇಳಿದರು.
Funds probe by govt should be fair: Uttar Pradesh madrassas https://t.co/Lmk0oEGmhW
— TOI Cities (@TOICitiesNews) January 13, 2023
ಸಂಪಾದಕರ ನಿಲುವುಅಕ್ರಮ ಮದರಸಾಗಳು ಕಟ್ಟುವವರೆಗೂ ಸರಕಾರಿ ವ್ಯವಸ್ಥೆ, ಪೊಲೀಸರು ಮತ್ತು ಗೂಢಚಾರ ಇಲಾಖೆ ನಿದ್ರಿಸುತ್ತಿತ್ತೆ ? |