ತೀರ್ಪು ನೀಡಲು ೨ ತಿಂಗಳು ತಡವಾಗಿದ್ದರಿಂದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಭೂಷಣ ಗವಯಿ ಇವರಿಂದ ಕಕ್ಷಿದಾರರಲ್ಲಿ ಕ್ಷಮೆಯಾಚನೆ

ನವದೆಹಲಿ – ಒಂದು ಪ್ರಕರಣದ ತೀರ್ಪು ನೀಡುವುದಕ್ಕೆ ೨ ತಿಂಗಳು ತಡವಾಗಿದ್ದರಿಂದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಭೂಷಣ ಗವಯಿ ಇವರು ಜನವರಿ ೧೦ ರಂದು ಕಕ್ಷಿದಾರರ ಕ್ಷಮೆ ಯಾಚಿಸಿದರು. ತೀರ್ಪು ನೀಡಲು ಏಕೆ ತಡವಾಯಿತು ? ಇದರ ಕಾರಣ ಕೂಡ ಅವರು ಕಕ್ಷಿದಾರರಿಗೆ ಹೇಳಿದರು. ತೀರ್ಪು ನೀಡಲು ತಡವಾಗಿದ್ದರಿಂದ ನ್ಯಾಯಮೂರ್ತಿಗಳು ಕ್ಷಮೆ ಯಾಚಿಸುವುದು ಬಹುಶಃ ಇದು ದೇಶದಲ್ಲಿನ ಮೊದಲನೆಯ ಉದಾಹರಣೆಯಾಗಿದೆ.

ಚಂದಿಗಡದಲ್ಲಿನ ಕಕ್ಷಿದಾರನ ಮನೆಯ ವಿಷಯದ ಅರ್ಜಿಯ ಬಗ್ಗೆ ನ್ಯಾಯಮೂರ್ತಿ ಗವಯಿ ಇವರ ಅಧ್ಯಕ್ಷತೆಯಲ್ಲಿನ ನ್ಯಾಯ ಪೀಠವು ನವೆಂಬರ್ ೩, ೨೦೨೨ ರಂದು ತೀರ್ಪು ನೀಡಲು ನಿಶ್ಚಯಿಸಿತ್ತು, ಆದರೆ ಅದನ್ನು ಜನವರಿ ೧೦ ರಂದು ನೀಡಲಾಯಿತು. ಈ ಸಮಯದಲ್ಲಿ ನ್ಯಾಯಮೂರ್ತಿ ಗವಯಿ ಇವರು, ಈ ತೀರ್ಪು ನೀಡಲು ತಡವಾಗಿದ್ದರಿಂದ ನಾನು ಮೊದಲು ನಿಮ್ಮ ಕ್ಷಮೆ ಯಾಚಿಸುತ್ತೇನೆ. ಈ ಮೊಕ್ಕದ್ದಮೆಯ ಕಾನೂನಿನಲ್ಲಿನ ನಿಯಮ, ಸತ್ಯ, ವ್ಯವಸ್ಥೆ ಇದರ ವಿಷಯವಾಗಿ ನನಗೆ ಅಭ್ಯಾಸ ಮಾಡಬೇಕಾಯಿತು ಆದ ಕಾರಣ ಸಮಯ ಬೇಕಾಯಿತು, ಎಂದು ಅವರು ಹೇಳಿದರು.