ಮಧ್ಯಾಹ್ನದ ಊಟದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಝಟಕಾ ಪದ್ಧತಿಯ ಮಾಂಸಹಾರ ನೀಡಿದಕ್ಕೆ ಪೋಷಕರ ವಿರೋಧ !

ಬಂಗಾಲದ ಒಂದು ಸರಕಾರಿ ಶಾಲೆಯಲ್ಲಿನ ಘಟನೆ !

ಪೂರ್ವ ಮೇದಿನಿಪುರ (ಬಂಗಾಲ) – ಇಲ್ಲಿಯ ಒಂದು ಸರಕಾರಿ ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದಲ್ಲಿ ಝಟಕಾ ಪದ್ಧತಿಯ ಮಾಂಸಾಹಾರ ನೀತ್ತಿರುವುದರಿಂದ ಅವರ ಪೋಷಕರು ಜನವರಿ ೭ ರಂದು ಪ್ರತಿಭಟನೆ ನಡೆಸಿದರೆ. ಅವರು, `ಝಟಕಾ ಮಾಂಸ ತಿನ್ನಿಸಿರುವುದರಿಂದ ನಮ್ಮ ಮಕ್ಕಳನ್ನು ಅಪವಿತ್ರ ಗೊಳಿಸುವ ಪ್ರಯತ್ನ ಮಾಡಲಾಗಿದೆ ಮುಸಲ್ಮಾನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದರಿಂದ’ ಹಾಗೂ ಮುಖ್ಯೋಪಾಧ್ಯಾಯರು ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗುತ್ತಿದೆ. ಇದಕ್ಕೆ ಸಂಬಂಧಿತ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ.

`ಝಟಕಾ ಮಾಂಸ ನೀಡುವುದು ಇದು ಸಂಘದ ಧೊರಣೆಯ ಭಾಗ !’ (ಅಂತೆ) – ಪೋಷಕರ ಆರೋಪ

ಮುಸಲ್ಮಾನ ವಿದ್ಯಾರ್ಥಿಗಳ ಪೋಷಕರು, ಮುಸಲ್ಮಾನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದಲ್ಲಿ ಝಟಕಾ ಮಾಂಸ ತಿನ್ನಿಸಿ ಅವರ ಧಾರ್ಮಿಕ ಭಾವನೆಗೆ ದಕ್ಕೆ ತರುವುದು ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಧೋರಣೆಯ ಒಂದು ಭಾಗವಾಗಿದೆ. (ಹಿಂದೂಗಳಿಗೆ ಹಲಾಲ್ ಮಾಂಸ, ಹಲಾಲ ಉತ್ಪಾದನೆ ತಿನ್ನಿಸುವವರದು ಯಾವ ಧೋರಣೆಯ ಭಾಗವಾಗಿದೆ ?’, ಇದನ್ನು ಮುಸಲ್ಮಾನ ಪೋಷಕರು ಹೇಳುವರೇ ? – ಸಂಪಾದಕರು)

ಸರಕಾರದ ಆದೇಶದಲ್ಲಿ ಝಟಕಾ ಅಥವಾ ಹಲಾಲ್ ನ ಉಲ್ಲೇಖವಿಲ್ಲ !

ಬಂಗಾಲದಲ್ಲಿನ ತೃಣ ಮೂಲ ಕಾಂಗ್ರೆಸ್ ಸರಕಾರವು ಮಧ್ಯಾಹ್ನದ ಊಟದಲ್ಲಿ ಅನ್ನ, ತವ್ವೆ, ಸೋಯಾಬಿನ್, ಮೊಟ್ಟೆ, ಕೋಳಿಯ ಮಾಂಸ, ಋತುಗಳ ಪ್ರಕಾರ ದೊರೆಯುವ ಹಣ್ಣುಗಳು ನೀಡುವ ವ್ಯವಸ್ಥೆ ಮಾಡಿದೆ. ಇದರಲ್ಲಿ ಕೋಳಿಯ ಮಾಂಸ ಯಾವ ರೀತಿ ಅಂದರೆ ಹಲಾಲ್ ಅಥವಾ ಝಟಕಾ ಎಂದು ಹೇಳಿಲ್ಲ. (ಈಗ ಈ ಘಟನೆಯಿಂದ ತಕ್ಷಣ ಮುಸಲ್ಮಾನ ಪ್ರೇಮಿ ತೃಣ ಮೂಲ ಕಾಂಗ್ರೆಸ್ ಈ ಆದೇಶದಲ್ಲಿ ಬದಲಾವಣೆ ಮಾಡಿ ಮುಸಲ್ಮಾನರಿಗೆ ಹಲಾಲ್ ಪದ್ದತಿಯ ಮಾಂಸಹಾರ ನೀಡುವ ವ್ಯವಸ್ಥೆ ಮಾಡುತ್ತದೆ, ಇದರಲ್ಲಿ ಅನುಮಾನವಿಲ್ಲ ! – ಸಂಪಾದಕರು)

`ಹಲಾಲ್’ ಮತ್ತು `ಝಟಕಾ’ ಮಾಂಸವೆಂದರೆ ಏನು ?

ಹಲಾಲ್ ಪದ್ಧತಿಯ ಮಾಂಸ ದೊರೆಯುವುದಕ್ಕೆ ಪ್ರಾಣಿಗಳ ಮುಖ ಮಕ್ಕಾದ ದಿಕ್ಕಿಗೆ ಮಾಡಿ ಅದರ ಕತ್ತಿನ ನರ ಕೊಯ್ಯಲಾಗುತ್ತದೆ ಮತ್ತು ಪ್ರಾಣಿಯನ್ನು ಬಿಡಲಾಗುತ್ತದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಹರಿದು ಹೋಗುತ್ತದೆ ನಂತರ ಆ ಪ್ರಾಣಿ ಚಡಪಡಿಸಿ ಸಾಯುತ್ತದೆ. ಈ ಪ್ರಾಣಿಯ ಬಲಿ ನೀಡುವಾಗ ಅದರ ಮುಖ ಮಕ್ಕಾದ ದಿಕ್ಕಿಗೆ ಮಾಡಲಾಗುತ್ತದೆ. ಹಿಂದೂ ಮತ್ತು ಶಿಖರು ಮುಂತಾದ ಭಾರತೀಯ ಧರ್ಮದಲ್ಲಿ `ಝಟಕಾ’ ಪದ್ಧತಿಯಿಂದ ಪ್ರಾಣಿಯ ಹತ್ಯೆ ಮಾಡಲಾಗುತ್ತದೆ. ಇದರಲ್ಲಿ ಪ್ರಾಣಿಯ ಕತ್ತು ಒಂದೇ ಏಟಿನಲ್ಲಿ ಕತ್ತರಿಸಲಾಗುತ್ತದೆ. ಇದರಿಂದ ಪ್ರಾಣಿಗೆ ಅಲ್ಪ ಪ್ರಮಾಣದಲ್ಲಿ ತೊಂದರೆ ಆಗುತ್ತದೆ.

ಸಂಪಾದಕೀಯ ನಿಲುವು

ಕಳೆದ ಕೆಲವು ವರ್ಷಗಳಿಂದ ಹಿಂದೂಗಳಿಗೆ ಹಲಾಲ್ ಮಾಂಸ ಮಾರಲಾಗುತ್ತದೆ, ಅದರ ಬಗ್ಗೆ ಹಿಂದೂಗಳು ಅಜ್ಞಾನಿಯಾಗಿದ್ದಾರೆ; ಆದರೆ ಝಟಕಾ ಮಾಂಸ ತಿನ್ನಲು ನೀಡಿದ ನಂತರ ಅದಕ್ಕೆ ತಕ್ಷಣ ವಿರೋಧಿಸುವ ಮುಸಲ್ಮಾನರು ಎಷ್ಟು ಜಾಗರೂಕರಾಗಿದ್ದಾರೆ, ಇದನ್ನು ಹಿಂದೂಗಳು ತಿಳಿದುಕೊಳ್ಳುವರೇ ?

ಎಲ್ಲೆಡೆ ಹಲಾಲ್ ಮಾಂಸ ಮಾರಾಟ ಮಾಡಲಾಗುತ್ತದೆ ಈಗ ಹಿಂದೂಗಳು `ಝಟಕಾ’ ಮಾಂಸ ದೊರೆಯಬೇಕು ಇದಕ್ಕಾಗಿ ಆಂದೋಲನ ಮಾಡಬೇಕಾಗುವುದು. ಈ ಪರಿಸ್ಥಿತಿ ನಿರ್ಮಿಸುವ ಮುಸಲ್ಮಾನ ಸಂಘಟನೆಗಳ ಬಗ್ಗೆ ಹಿಂದೂಗಳು ಯಾವಾಗ ಧ್ವನಿಯೆತ್ತುವರು ?