ಪಂಜಾಬನಲ್ಲಿ ರೌಡಿಯ ಗುಂಡಿನ ದಾಳಿಯಲ್ಲಿ ಪೊಲೀಸ್ ಹವಾಲ್ದಾರ ಸಾವು

ಫಗವಾಡಾ (ಪಂಜಾಬ) – ಇಲ್ಲಿ ವಾಹನ ಕಳ್ಳತನ ಮಾಡುತ್ತಿದ್ದ ರೌಡಿಯನ್ನು ಬೆನ್ನತ್ತಿ ಹೋಗುತ್ತಿರುವಾಗ ರೌಡಿಯು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಪೊಲೀಸ ಹವಾಲದಾರ ಹತನಾಗಿದ್ದಾನೆ. ಕಮಲ ಬಾಜವಾ ಎಂದು ಅವರ ಹೆಸರಾಗಿದೆ. ಈ ಘಟನೆಯ ನಂತರ ಪುಗವಾಡಾ ಪೊಲೀಸರು ಫಿಲ್ಲೌರ್ ಪೊಲೀಸರಿಗೆ ಮಾಹಿತಿ ನೀಡಿದರು. ಪಿಲ್ಲೌರ್ ನಲ್ಲಿ ದಿಗ್ಬಂಧನದಲ್ಲಿದ್ದ ಪೊಲೀಸರು ಈ ರೌಡಿಯೊಂದಿಗೆ ಚಕಮಕಿ ನಡೆಯಿತು. ಇಬ್ಬರ ನಡುವೆ ಭಾರೀ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಯಿತು. ಇದರಲ್ಲಿ ಮೂರು ರೌಡಿಗಳಿಗೆ ಗುಂಡು ತಗಲಿದವು. ಗುಂಡಿನ ದಾಳಿಯ ನಂತರ ಈ ಮೂವರನ್ನು ಬಂಧಿಸಲಾಯಿತು. ಅವರ ನಾಲ್ಕನೆಯ ಸಹಚರ ಕತ್ತಲದ ಲಾಭ ಪಡೆದು ಪರಾರಿಯಾದನು. ಬಂಧಿಸಿರುವ ರೌಡಿಗಳ ಹೆಸರು ರಣಬಿರ, ವಿಷ್ಣು ಮತ್ತು ಕುಲವಿಂದರ ಎಂದಾಗಿದೆ. ಅವರನ್ನು ಆಸ್ಪತ್ರೆಯಲ್ಲಿ ಸೇರಿಸಲಾಗಿದೆ. ಪಂಜಾಬ್ ಸರಕಾರವು ಪೊಲೀಸ್ ಹವಾಲ್ದಾರ ಕಮಲ ಬಾಜವಾ ಇವರ ಪರಿವಾರದವರಿಗೆ ಎರಡು ಕೋಟಿ ರೂಪಾಯಿ ನೀಡುವ ಘೋಷಣೆ ಮಾಡಿದ್ದಾರೆ.

ಫಗವಾಡಾ ಇಲ್ಲಿಯ ಅರ್ಬನ್ ಎಸ್ಟೇಟ್ ನಲ್ಲಿನ ನಿವಾಸಿ ಅವತಾರ ಸಿಂಹ ಇವರು, `ನಾನು ಮತ್ತೆ ನನ್ನ ಸ್ನೇಹಿತ ನನ್ನ ಕ್ರೇಟಾ ಕಾರಿನಿಂದ ಮನೆಗೆ ಹೋಗುವಾಗ ನಮಗೆ ರೌಡಿಗಳು ಸುತ್ತುವರೆದರು. ರೌಡಿಗಳು ಶಸ್ತ್ರಾಸ್ತ್ರಗಳನ್ನು ತೋರಿಸಿ ನಮ್ಮನ್ನು ಕಾರಿನಿಂದ ಕೆಳಗಿಳಿಯಲು ಹೇಳಿದರು. ಆದ್ದರಿಂದ ನಾವು ಹೊರಗೆ ಬಂದೇವು ಮತ್ತು ರೌಡಿಗಳು ನನ್ನ ಕಾರನ್ನು ತೆಗೆದುಕೊಂಡು ಓಡಿ ಹೋದರು. ನಾವು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆವು. ಮಾಹಿತಿ ದೊರೆಯುತ್ತಲೇ ಪೊಲೀಸರು ಅವರನ್ನು ಬೆಂಬೇತ್ತಿದರು. ಆ ಸಮಯದಲ್ಲಿ ನಡೆದ ಚಕಮಕಿಯಲ್ಲಿ ಬಾಜವಾ ಇವರಿಗೆ ಗುಂಡು ತಗಲಿತು,’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಪಂಜಾಬನಲ್ಲಿ ಆಮ್ ಆದ್ಮಿ ಪಕ್ಷದ ಸರಕಾರ ರಚನೆಯಾದಾಗಿನಿಂದ ಅಲ್ಲಿಯ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ, ರೌಡಿಗಳ ಚಟುವಟಿಕೆ ಹೆಚ್ಚಿರುವುದು ಇದರಿಂದ ಮತ್ತೊಮ್ಮೆ ಸ್ಪಷ್ಟವಾಗುತ್ತದೆ !