ನುಸುಳುಕೋರರು ಆದಿವಾಸಿ ಯುವತಿಯರೊಂದಿಗೆ ಬಲವಂತವಾಗಿ ವಿವಾಹವಾಗಿ ಅವರ ಭೂಮಿಯನ್ನು ಕಬಳಿಸುತ್ತಿದ್ದಾರೆ ! – ಕೇಂದ್ರ ಗೃಹಸಚಿವ ಅಮಿತ ಶಹಾ

ಪಶ್ಚಿಮ ಸಿಂಹಭೂಮ (ಜಾರಖಂಡ) – ದೇಶದಲ್ಲಿ ನುಸಳುವವರು ಬುಡಕಟ್ಟು ಜನಾಂಗದ ಯುವತಿಯರೊಂದಿಗೆ ಬಲವಂತವಾಗಿ ವಿವಾಹ ಮಾಡಿಕೊಂಡು ಅವರ ಭೂಮಿ ಕಬಳಿಸುತ್ತಾರೆ. ನುಸುಳುಕೋರರ ದುಸ್ಸಾಹಸವನ್ನು ತಡೆಯಿರಿ, ಇಲ್ಲವಾದರೆ ಜಾರ್ಖಂಡಿನ ಜನತೆ ನಿಮಗೆ ಕ್ಷಮಿಸುವುದಿಲ್ಲ. ಎಂದು ನಾನು ಹೇಮಂತ ಸೋರೆನ ಸರಕಾರಕ್ಕೆ ಎಚ್ಚರಿಕೆ ನೀಡುತ್ತೇನೆ. ಬುಡಕಟ್ಟು ಜನಾಂಗದ ಕಲ್ಯಾಣಕ್ಕಿಂತ ಮತಗಳಿಗಾಗಿ ಆಸೆ ಪಡುವುದು ಹೆಚ್ಚು ಮಹತ್ವದ್ದಲ್ಲ, ಎಂದು ಕೇಂದ್ರ ಗೃಹಸಚಿವ ಅಮಿತ ಶಹಾ ಇವರು ಒಂದು ಸಭೆಯಲ್ಲಿ ಹೇಳಿದರು.

ಅಮಿತ ಶಹಾ ತಮ್ಮ ಮಾತನ್ನು ಮುಂದುವರೆಸುತ್ತಾ, ರಾಜ್ಯದಲ್ಲಿ ಬುಡುಕಟ್ಟು ಜನಾಂಗದವರಿಗೆ ನೌಕರಿ ಮತ್ತು ಮಕ್ಕಳಿಗೆ ಶಿಕ್ಷಣ ನೀಡುವ ಹೆಸರಿನಲ್ಲಿ ವಂಚನೆ ಮಾಡಲಾಗುತ್ತಿದೆ. ಸೊರೇನ್ ಸರಕಾರದಿಂದ ಕಲ್ಯಾಣಕಾರಿ ಯೋಜನೆಯ ಹೆಸರಿನಲ್ಲಿ ಜನರಿಗೆ ಮೋಸ ಮಾಡಲಾಗುತ್ತಿದೆ, ಎಂದು ಶಹಾ ಅವರು ಆರೋಪಿಸಿದ್ದಾರೆ.