ದೆಹಲಿ ಮಹಾಪೌರ ಸ್ಥಾನದ ಚುನಾವಣೆ ಮೊದಲೇ ರಂಪಾರಾದ್ಧಾಂತ !

  • ಆಮ್ ಆದ್ಮಿ ಪಕ್ಷ ಮತ್ತು ಭಾಜಪ ಇವರ ನಗರಸೇವಕರಲ್ಲಿ ಹೊಡೆದಾಟ

  • ನಗರಸೇವಕರ ಮೇಲೆ ಬ್ಲೇಡ್ ನಿಂದ ದಾಳಿ ಮಾಡಿರುವ ಆರೋಪ

  • ಕುರ್ಚಿಗಳನ್ನು ಎಸೆದು ಹಲ್ಲೆ

  • ಚುನಾವಣೆ ಮುಂದೂಡಿಕೆ

ನವದೆಹಲಿ – ದೆಹಲಿ ಮಹಾನಗರ ಪಾಲಿಕೆಯ ಮಹಾಪೌರ, ಉಪ ಮಹಾಪೌರ ಮತ್ತು ಸ್ಥಾಯಿ ಸಮಿತಿಯ ೬ ಸದಸ್ಯರ ಚುನಾವಣೆಯ ಮೊದಲೇ ಪಾಲಿಕೆಯ ಸಭಾಗೃಹದಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಭಾಜಪದ ನಗರಸೇವಕರು ರಂಪಾರಾದ್ಧಾಂತ ಮಾಡಿದ್ದಾರೆ. ಆಯ್ಕೆಯಾಗಿರುವ ಸದಸ್ಯರ ಪ್ರಮಾಣ ವಚನಕ್ಕೆ ಆಮ್ ಆದ್ಮಿ ಪಕ್ಷದ ನಗರಸೇವಕರಿಂದ ವಿರೋಧ ವ್ಯಕ್ತವಾಯಿತು. ಈ ಸಮಯದಲ್ಲಿ ಅವರು ವ್ಯಾಸ ಪೀಠದಲ್ಲಿರುವ ಅಧಿಕಾರಿಯನ್ನು ಮುತ್ತಿಗೆಹಾಕಿ ಎಳೆದಾಡಿದರು. ಈ ಸಮಯದಲ್ಲಿ ಭಾಜಪದ ನಗರಸೇವಕರ ಜೊತೆಗೆ ಮೊದಲು ವಾದ ನಡೆದಿತ್ತು. ನಂತರ ಹೊಡೆದಾಟವಾಯಿತು. ಈ ಸಮಯದಲ್ಲಿ ಒಬ್ಬರಿಗೊಬ್ಬರ ಮೇಲೆ ಕುರ್ಚಿಗಳನ್ನು ಎಸೆದರು. ಜೊತೆಗೆ ಭಾಜಪದ ೨ ನಗರಸೇವಕರ ಅಂಗೈಗೆ ಬ್ಲೇಡಿನಿಂದ ದಾಳಿ ಮಾಡಲಾಗಿದೆ ಎಂದು ಭಾಜಪ ಆರೋಪಿಸಿದೆ. `ಈ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ಭಾಜಪ ಹೇಳಿದೆ. ಈ ಗಲಾಟೆಯಿಂದಾಗಿ ಚುನಾವಣೆ ಸ್ಥಗಿತಗೊಳಿಸಲಾಯಿತು. ಈ ಚುನಾವಣೆಯಲ್ಲಿ ಸಹಭಾಗಿಯಾಗುವುದಿಲ್ಲ ಎಂದು ಕಾಂಗ್ರೆಸ್ ಈ ಮೊದಲೇ ನಿರ್ಣಯಿಸಿತ್ತು. ಮಹಾಪೌರರ ಸ್ಥಾನದ ಚುನಾವಣೆಯಲ್ಲಿ ೨೮೩ ಸದಸ್ಯರು ಮತದಾನ ಮಾಡುವವರಿದ್ದರು. ಬಹುಮತಕ್ಕಾಗಿ ೧೩೩ ರ ಸಂಖ್ಯೆಯ ಅವಶ್ಯಕತೆ ಇದೆ. `ಆಮ್ ಆದ್ಮಿ ಪಕ್ಷದ ಬಳಿ ೧೫೦ ಹಾಗೂ ಭಾಜಪದ ಬಳಿ ೧೧೩ ಮತಗಳಿವೆ.

೧. ಆಯ್ಕೆಯಾಗಿರುವ ನಗರಸೇವಕರಿಗೆ ಅಕ್ರಮವಾಗಿ ಸಭಾಗೃಹಕ್ಕೆ ಕಳಿಸಿದ್ದರಿಂದ ಅವರಿಗೆ ಪ್ರಮಾಣವಚನ ನೀಡಬಾರದೆಂದು ಆಮ್ ಆದ್ಮಿ ಪಕ್ಷದ ನಗರ ಸೇವಕರ ಅಭಿಪ್ರಾಯವಾಗಿದೆ.

೨. ಆಮ್ ಆದ್ಮಿ ಪಕ್ಷದಿಂದ ಹಂಗಾಮಿ ಸಭಾಪತಿ ಸ್ಥಾನಕ್ಕಾಗಿ ಮುಕೇಶ್ ಗೋಯಲ್ ಇವರ ಹೆಸರು ಸೂಚಿಸಿತ್ತು; ಆದರೆ ಉಪರಾಜ್ಯಪಾಲರು ಈ ಸ್ಥಾನಕ್ಕೆ ಭಾಜಪದ ನಗರಸೇವಕ ಸತ್ಯ ಶರ್ಮ ಇವರನ್ನು ನೇಮಕಗೊಳಿಸಿದರು. ಕೇಜ್ರಿವಾಲ್ ಇವರು ಈ ನೇಮಕದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಕೇಜ್ರಿವಾಲರು, ಪಾಲಿಕೆಯಲ್ಲಿ ನಾಮನಿರ್ದೇಶನವು ದೆಹಲಿಯ ನಗರವಿಕಾಸ ಸಚಿವರಿಂದ ಮಾಡಲಾಗುತ್ತದೆ; ಆದರೆ ಪಾಲಿಕೆಯ ಆಯುಕ್ತರಿಂದ ನೇರ ಉಪರಾಜ್ಯಪಾಲರ ಬಳಿ ಫೈಲ್ ಕಳುಹಿಸಲಾಯಿತು. ನಾನು ಉಪರಾಜ್ಯಪಾಲರಿಗೆ ಪುನರ್ವಿಚಾರ ಮಾಡುವುದಕ್ಕಾಗಿ ಪತ್ರ ಬರೆದಿದ್ದೇನೆ ಎಂದು ಹೇಳಿದರು.

೩. ಭಾಜಪದ ನಾಯಕ ಮನೋಜ್ ತಿವಾರಿ ಇವರು `ಸಭಾಗೃಹದಲ್ಲಿ ಬಹುಮತ ಇದ್ದರೂ ಕೂಡ ಆಮ್ ಆದ್ಮಿ ಪಕ್ಷಕ್ಕೆ ಮಹಾಪೌರರ ಚುನಾವಣೆಯಲ್ಲಿ ವಿಜಯದ ಖಾತ್ರಿ ಇಲ್ಲ. ಆದ್ದರಿಂದ ಈ ರಂಪಾರಾದ್ಧಾಂತ ಉದ್ದೇಶಪೂರ್ವಕವಾಗಿ ಮಾಡಲಾಗಿದೆ’, ಎಂದು ಆರೋಪಿಸಿದರು.

೪. ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಹ ಇವರು ಮನೋಜ್ ತಿವಾರಿ ಇವರಿಗೆ ಪ್ರತ್ಯುತ್ತರ ನೀಡುತ್ತಾ, `ಭಾಜಪದಿಂದ ಸಾಂವಿಧಾನಿಕ ಮೌಲ್ಯದ ಉಲ್ಲಂಘನೆಯಾಗಿದ್ದು ಚುನಾವಣೆ ಪ್ರಕ್ರಿಯೆಯ ತಮಾಶೆಯ ವಿಷಯ ಮಾಡಲಾಗಿದೆ’, ಎಂದು ಪ್ರತ್ಯಾರೋಪ ಮಾಡಿದರು.

ಸಂಪಾದಕೀಯ ನಿಲುವು

ಜನರು ಆರಿಸಿ ಕಳಿಸಿರುವ ಜನಪ್ರತಿನಿಧಿಗಳು ಜನರ ಖರ್ಚಿನಿಂದ ನಡೆಸುವ ಪಾಲಿಗಕೆಯ ಸಭಾಗೃಹದಲ್ಲಿ ರಂಪಾರಾದ್ಧಾಂತ ಮಾಡಿ ಕೋಟಿಗಟ್ಟಲೆ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ, ಇದು ಪ್ರಜಾಪ್ರಭುತ್ವಕ್ಕಾಗಿ ಅಪಾಯಕಾರಿಯಾಗಿದೆ. ಇಂತಹ ಜನಪ್ರತಿನಿಧಿಗಳ ಸದಸ್ಯತ್ವ ರದ್ದು ಪಡಿಸುವ ಅಧಿಕಾರ ಜನರಿಗೆ ದೊರೆಯಬೇಕು !