ಮ್ಹಾಪ್ಸಾ(ಗೋವಾ)ದಲ್ಲಿ ಶ್ರೀ ದೇವ ಬೋಡಗೇಶ್ವರ ಜಾತ್ರೆಯಲ್ಲಿ, ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಅವರಿಂದ ಸನಾತನ ಸಂಸ್ಥೆಯ ಗ್ರಂಥಪ್ರದರ್ಶಿನದ ಉದ್ಘಾಟನೆ !
ಮ್ಹಾಪ್ಸಾ, ಜನವರಿ 5 (ಸುದ್ದಿ.) – ಸನಾತನ ಸಂಸ್ಥೆಯು ಮಾಡುತ್ತಿರುವ ಕಾರ್ಯವು ಹಿಂದೂ ರಾಷ್ಟ್ರದ ನಿರ್ಮಾಣದಲ್ಲಿ ಮಹತ್ತರವಾದ ಕೊಡುಗೆಯಾಗಲಿದೆ. ಸನಾತನ ಸಂಸ್ಥೆಯ ಸಾಧಕರು, ಪ್ರತಿಯೊಬ್ಬರಲ್ಲೂ ಉತ್ತಮ ಸಂಸ್ಕಾರಗಳು ಮೂಡಬೇಕು ಮತ್ತು ಪ್ರತಿಯೊಬ್ಬರ ಜೀವನವೂ ಸುಸಂಸ್ಕೃತವಾಗಬೇಕು ಎಂಬುದಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಾರೆ. ಅದಕ್ಕಾಗಿ ಸನಾತನ ಸಂಸ್ಥೆಯ ಸಾಧಕರು ಶ್ರಮಿಸುತ್ತಾರೆ. ಸನಾತನ ಸಂಸ್ಥೆ ಮತ್ತು ಸನಾತನ ಸಂಸ್ಥೆಯ ಸಾಧಕರು ನಿಸ್ವಾರ್ಥ ಭಾವದಿಂದ ಕಾರ್ಯ ಮಾಡುತ್ತಾರೆ ಎಂದು ಗೋವಾದ ಮಾನ್ಯ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಅವರು ಗೌರವೋದ್ಘಾರ ತೆಗೆದರು. ಗೋವಾದ ಮ್ಹಾಪಸಾದಲ್ಲಿನ ಗ್ರಾಮದೇವತೆ ಶ್ರೀ ದೇವ ಬೋಡಗೇಶ್ವರರ ವಾರ್ಷಿಕ ಜಾತ್ರೆಯು ಜನವರಿ 5 ರಂದು ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಗ್ರಂಥ ಮತ್ತು ಸಾತ್ತ್ವಿಕ ಉತ್ಪನ್ನಗಳ ವಿತರಣಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇದನ್ನು ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಅವರು ದೀಪ ಬೆಳಗಿಸಿ ಹಾಗೂ ತೆಂಗಿನ ಕಾಯಿ ಒಡೆದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮೇಲಿನಂತೆ ಮೆಚ್ಚುಗೆ ವ್ಯಕ್ತಪಡಿಸಿದರು.
Hon Goa CM @DrPramodPSawant inaugurated Sanatan Sanstha’s exhibition at Shri Dev Bodgeshwar temple, Mapusa, Goa.
He appreciated Sanatan’s seekers & work.
Dr Sawant was impressed by the Knowledge in the books & asked people to visit Sanatan’s stall to learn about Spirituality pic.twitter.com/8IRmCH0nRG— Sanatan Sanstha (@SanatanSanstha) January 5, 2023
ಮುಖ್ಯಮಂತ್ರಿ ಸಾವಂತ ತಮ್ಮ ಮಾತನ್ನು ಮುಂದುವರೆಸುತ್ತಾ, “ಸನಾತನ ಸಂಸ್ಥೆಯ ವತಿಯಿಂದ ಈ ಜಾತ್ರೆಯಲ್ಲಿ ಅಧ್ಯಾತ್ಮ ಮತ್ತು ಸಾಧನೆ ಈ ವಿಷಯದ ಗ್ರಂಥಗಳ ಪ್ರದರ್ಶಿನಿಯನ್ನು ಆಯೋಜಿಸಲಾಗಿದೆ. ಶ್ರೀ ದೇವ ಬೋಡಗೇಶ್ವರ ಜಾತ್ರೋತ್ಸವಕ್ಕೆ ಬರುವ ಭಕ್ತರು ಈ ಪ್ರದರ್ಶನಕ್ಕೆ ಭೇಟಿ ನೀಡಬೇಕು. ಭಕ್ತರು ಪ್ರದರ್ಶಿನಿಯಲ್ಲಿರುವ ಗ್ರಂಥಗಳನ್ನು ಮತ್ತು ಕಿರುಗ್ರಂಥಗಳನ್ನು ತಮ್ಮ ಮನೆಗಳಿಗೆ ಕೊಂಡೊಯ್ದು ಮಕ್ಕಳಿಗೆ, ಅಂದರೆ ಭವಿಷ್ಯದ ಪೀಳಿಗೆಗೆ ತಲುಪಿಸಿ ಸುಸಂಸ್ಕೃತ ಭಾವಿ ಪೀಳಿಗೆಯನ್ನು ರಚಿಸಲು ಪ್ರಯತ್ನಿಸಬೇಕು” ಎಂದರು. ಈ ವೇಳೆ ಡಾ. ಪ್ರಮೋದ ಸಾವಂತ ಅವರು ಸನಾತನ ಸಂಸ್ಥೆ ಮತ್ತು ಸನಾತನದ ಸಾಧಕರಿಗೆ ಶುಭ ಹಾರೈಸಿದರು.
ಸನಾತನದ ಸಾಧಕರಾದ ಶ್ರೀ. ದಿನೇಶ ಹಳರ್ಣಕರ ಇವರು ಮುಖ್ಯ ಮಂತ್ರಿ ಡಾ. ಪ್ರಮೋದ ಸಾವಂತ ಅವರನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮ್ಹಾಸಾದ ಚುನಾವಣಾ ಕ್ಷೇತ್ರದ ಶಾಸಕ ಹಾಗೂ ಗೋವಾ ವಿಧಾನಸಭಾ ಉಪಸಭಾಪತಿ ಜೋಶುವಾ ಡಿಸೋಜಾ ಅವರೂ ಉಪಸ್ಥಿತರಿದ್ದರು. ಸನಾತನ ಸಾಧಕರಾದ ಶ್ರೀ.ಸಂಜಯ ನಾಯಿಕ ಇವರು ಪುಷ್ಪಗುಚ್ಛ ನೀಡಿ ಅವರನ್ನು ಸ್ವಾಗತಿಸಿದರು. ಈ ವೇಳೆ ಮ್ಹಾಪ್ಸಾ ಪುರಸಭೆಯ ಅಧಕ್ಷೆ ಸೌ. ಶುಭಾಂಗಿ ವಾಯಂಗಣಕರ, ಕಾರ್ಪೊರೇಟರ್ ಅರೋಲಕರ, ಕಾರ್ಪೊರೇಟರ್ ಶೇಖರ ಬೇನಕರ, ಕಾರ್ಪೊರೇಟರ್ ಸುಶಾಂತ ಹರಮಲಕರ, ಕಾರ್ಪೊರೇಟರ್ ಸೌ. ಎಂ. ಅನ್ವಿ ಕೊರಗಾಂವಕರ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಪೊರೇಟರ್ ತಾರಕ ಅರೋಲಕರ ಅವರೂ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಉದ್ಘಾಟನಾ ಸಮಾರಂಭದ ಸೂತ್ರಸಂಚಾಲನೆಯನ್ನು ಸನಾತನ ಸಂಸ್ಥೆಯ ಸಾಧಕಿ ಶ್ರೀಮತಿ ನೈನಾ ಹಳರ್ಣಕರ ಇವರು ಮಾಡಿದರು.
`ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಗ್ರಂಥಪ್ರದರ್ಶಿನಿ ಮತ್ತು ಸಾತ್ವಿಕ ಉತ್ಪನ್ನಗಳ ವಿತರಣಾ ಕೇಂದ್ರವು ಜನವರಿ 5 ರಿಂದ 11 ರವರೆಗೆ ಬೆಳಿಗ್ಗೆ 11 ರಿಂದ ರಾತ್ರಿ 10 ರವರೆಗೆ ಭಕ್ತರಿಗಾಗಿ ತೆರೆದಿರಲಿದೆ. ಜಿಜ್ಞಾಸುಗಳು ಹಾಗೂ ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸನಾತನ ಸಂಸ್ಥೆ ಕರೆ ನೀಡಿದೆ. |