ತ್ರಿಪುರಾದ ಮಾಜಿ ಮುಖ್ಯಮಂತ್ರಿ ವಿಪ್ಲವ ದೇವ ಇವರ ಪಿತ್ರಾರ್ಜಿತ ಮನೆಯನ್ನು ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಿಂದ ಧ್ವಂಸ !

ಮಾಜಿ ಮುಖ್ಯಮಂತ್ರಿ ಮತ್ತು ಭಾಜಪದ ನಾಯಕ ವಿಪ್ಲವ ದೇವ

ಗೋಮತಿ (ತ್ರಿಪುರ) – ಉದಯಪುರದಲ್ಲಿ ತ್ರಿಪುರದ ಮಾಜಿ ಮುಖ್ಯಮಂತ್ರಿ ಮತ್ತು ಭಾಜಪದ ನಾಯಕ ವಿಪ್ಲವ ದೇವ ಇವರ ಪಿತ್ರಾರ್ಜಿತ ಮನೆಯನ್ನ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿ ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಆ ಸಮಯದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ. ಹಾಗೂ ಆ ಸಮಯದಲ್ಲಿ ಕಾರ್ಯಕರ್ತರಿಂದ ಅಲ್ಲಿಯ ಅಂಗಡಿ ಮತ್ತು ಕೆಲವು ವಾಹನಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು. ವಿಪ್ಲವ ದೇವ ಇವರ ದಿವಂಗತ ತಂದೆ ಹಿರಾಧನ ದೇವ ಇವರ ಸ್ಮರಣೆಗಾಗಿ ವಾರ್ಷಿಕ ಶ್ರಾದ್ಧ ವಿಧಿಯ ಆಯೋಜನೆ ಮಾಡುವವರಿದ್ದರು; ಹಿಂದಿನ ದಿನ ಹಿಂದೆ ಈ ಘಟನೆ ನಡೆದಿದೆ.

ಸಂಪಾದಕೀಯ ನಿಲುವು

  • ಲೋಕತಂತ್ರದ ಹೆಸರಿನಲ್ಲಿ ಹಿಂಸಾಚಾರ ನಡೆಸುವ ಇಂತಹ ಗೂಂಡಾ ಕಾರ್ಯಕರ್ತರಿರುವ ಮಾರ್ಕ್ಸ್ ಮಾದಿ ಕಮ್ಯುನಿಷ್ಟ ಪಕ್ಷದ ಮೇಲೆ ನಿಷೇಧ ಹೇರಬೇಕು !
  • ತ್ರಿಪುರದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ಘಟಿಸಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !