ಮಾಕಪ್‌ನ ಸಂಸದ ಜಾನ್ ಬ್ರಿಟ್ಸ್ ಅವರ ಹುರುಳಿಲ್ಲದ ಆರೋಪ
ಕೋಯಿಕ್ಕೋಡ್ (ಕೇರಳ) : ಭಾಜಪವು ಈ ಹಿಂದೆ ಬಾಬ್ರಿ ಮಸೀದಿಯನ್ನು ಗುರಿಯಾಗಿಸಿಕೊಂಡಿತ್ತು ಮತ್ತು ಈಗ ಮಥುರಾದ ಜ್ಞಾನ್ವಾಪಿ ಮಸೀದಿ ಮತ್ತು ಈದ್ಗಾ ಮಸೀದಿಯನ್ನು ಗುರಿಯಾಗಿಸಿಕೊಂಡಿದೆ ಎಂದು ಮರ್ಕ್ಸವಾದಿ ಕಮ್ಯುನಿಸ್ಟ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸಂಸದ ಜಾನ್ ಬ್ರಿಟ್ಸ್ ಅವರು ’ನದಾವತುಲ್ ಮುಜಾಹಿದ್ದೀನ್’ ಸಭೆಯಲ್ಲಿ ಹುರುಳಿಲ್ಲದ ಆರೋಪ ಮಾಡಿದರು. ಇದಕ್ಕೂ ಮುನ್ನ ಬ್ರಿಟ್ಸ್ ಅವರು ಬಿಜೆಪಿ ನಾಯಕ ವಿ. ಮುರಳಿಧರನ್ ಹಾಗೂ ಗೋವಾದ ರಾಜ್ಯಪಾಲ ಹಾಗೂ ಕೇರಳದ ಭಾಜಪದ ಮಾಜಿ ಅಧ್ಯಕ್ಷ ಪಿ. ಎಸ್. ಶ್ರೀಧರನ್ ಪಿಳ್ಳೈ ಇವರನ್ನು ಆಹ್ವಾನ ನೀಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು “ಭಾಜಪ ಚುನಾವಣೆಯಲ್ಲಿ ಮತಗಳನ್ನು ಪಡೆಯಲು ಧಾರ್ಮಿಕ ಸಾಮರಸ್ಯ ಮತ್ತು ಸುಳ್ಳು ಭಾವನೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ” ಎಂದು ಅವರು ಆರೋಪಿಸಿದರು. “ದೇಶದ ಜನಸಂಖ್ಯೆಯ ಶೇಕಡಾ ೨೦ ರಷ್ಟಿರುವ ಸಮುದಾಯಕ್ಕೆ ಸಂಸತ್ತಿನಲ್ಲಿ ಸರಿಯಾದ ಪ್ರಾತಿನಿಧ್ಯವನ್ನು ನೀಡಲಾಗುತ್ತಿಲ್ಲ” ಎಂದು ಅವರು ಆರೋಪಿಸಿದರು. (ದೇಶದಲ್ಲಿ ಪ್ರಜಾಪ್ರಭುತ್ವವಿದೆ. ಸಂಸತ್ತಿಗೆ ಹೋಗಲು ಚುನಾವಣೆಗಳು ನಡೆಯುತ್ತವೆ. ಈ ಶೇ. ೨೦ ರಷ್ಟು ಜನಸಂಖ್ಯೆಯು ಸಂಸತ್ತಿಗೆ ಹೋಗಲು ಬಯಸಿದರೆ, ಅವರು ಚುನಾವಣೆ ಸ್ಪರ್ಧಿಸಬೇಕು ಮತ್ತು ಗೆಲ್ಲಬೇಕು ಮತ್ತು ಸಂಸತ್ತಿಗೆ ಹೋಗಬೇಕು. ಸಂವಿಧಾನದಲ್ಲಿ ಹೀಗೆ ಮಾಡಲು ಸಾಧ್ಯವಿಲ್ಲ ಆದ್ದರಿಂದ ಈ ರೀತಿಯ ಆರೋಪ ಮಾಡುವುದು ಇದೊಂದು ನೆಪವಾಗಿದೆ- ಸಂಪದಕರು)
‘बाबरी विध्वंस के लिए BJP जिम्मेदार, अब शाही ईदगाह और ज्ञानवापी निशाना’: CPM नेता ने केरल में मुस्लिमों को भड़काया, कहा – भारत सरकार में 20% आबादी की हिस्सेदारी नहीं#JohnBrittas #Keralahttps://t.co/wnt4KGQYL3
— ऑपइंडिया (@OpIndia_in) January 2, 2023
ಸಂಪಾದಕೀಯ ನಿಲುವು
|