ಭಾರತದ ತಪ್ಪಾದ ನಕಾಶೆ ಪ್ರಸಾರ ಮಾಡಿದ್ದ ವಾಟ್ಸ್ಅಪ್ ನಿಂದ ಕ್ಷಮಾಯಾಚನೆ

ನವದೆಹಲಿ – ಭಾರತದ ತಪ್ಪಾದ ನಕಾಶೆ ಪ್ರಸಾರ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ವಾಟ್ಸ್ಅಪ್ ಭಾರತದ ಕ್ಷಮೆಯಾಚಿಸಿ ಮತ್ತೊಮ್ಮೆ ಈ ರೀತಿಯ ತಪ್ಪು ಆಗುವುದಿಲ್ಲ’, ಎಂದು ಹೇಳಿದೆ. ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ ಚಂದ್ರಶೇಖರ ಇವರು ವಾಟ್ಸ್ಅಪ್ ಗೆ ತನ್ನ ತಪ್ಪು ಸುಧಾರಿಸುವಂತೆ ಆದೇಶ ನೀಡಿದ್ದಾರೆ. ಹೊಸ ವರ್ಷದ ಪ್ರಯುಕ್ತ ವಾಟ್ಸ್ಅಪ್ ನಿಂದ ಜಗತ್ತಿನ ನಕಾಶೆ ಪ್ರಸಾರಮಾಡಿತ್ತು. ಅದರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿದೆ ಹಾಗೂ ಭಾರತದ ಕೆಲವು ಭಾಗ ಚೀನಾದಲ್ಲಿ ತೋರಿಸಲಾಗಿತ್ತು. ವಿಶೇಷವೆಂದರೆ ಕಳೆದ ವರ್ಷ ಟ್ವಿಟರ್ ನಿಂದಲೂ ಕೂಡ ಭಾರತದ ತಪ್ಪಾದ ನಕಾಶೆ ಪ್ರಸಾರ ಮಾಡಿತ್ತು. ಅದರ ನಂತರ `ಟ್ವಿಟರ್ ಇಂಡಿಯಾ’ದ ಮಹಾವ್ಯವಸ್ಥಾಪಕ ಮನೀಶ್ ಮಾಹೇಶ್ವರಿ ಇವರ ಮೇಲೆ ಮಾಹಿತಿ ತಂತ್ರಜ್ಞಾನ ಕಾನೂನಿನ ಕಲಂ ೫೦೫ ಅಡಿಯಲ್ಲಿ ದೂರು ದಾಖಲಿಸಲಾಗ್ಗಿತ್ತು.

೧. ವಾಟ್ಸ್ಅಪ್ ನಿಂದ ಡಿಸೆಂಬರ್ ೩೧ ರಂದು ಕ್ರೈಸ್ತರ ಹೊಸ ವರ್ಷದ ಶುಭಾಶಯ ನೀಡುವುದಕ್ಕಾಗಿ ಟ್ವಿಟರ್ ನಲ್ಲಿ ಹೊಸ ವರ್ಷದ ಹಿಂದಿನ ಸಂಜೆ ನೇರ ಪ್ರಕ್ಷೇಪಣೆ ಮಾಡಿದ್ದು. ಈ ಸಮಯದಲ್ಲಿ ನೀಡಿದ್ದ ಸಂದೇಶದಲ್ಲಿ ಭಾರತದ ತಪ್ಪಾದ ನಕಾಶೆ ಜೋಡಿಸಿತ್ತು.

೨. ಈ ತಪ್ಪಿನಿಂದ ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಇವರು, ಯಾವ ಕಂಪನಿಗೆ ಭಾರತದಲ್ಲಿ ವ್ಯವಹಾರ ಮಾಡುವ ಇಚ್ಛೆ ಇದ್ದರೇ ಅವರು ದೇಶದ ಯೋಗ್ಯವಾದ ನಕಾಶೆಯನ್ನು ಉಪಯೋಗಿಸಬೇಕೆಂದು ಹೇಳಿದರು.

೩. ರಾಜೀವ ಚಂದ್ರಶೇಖರ ಇವರ ಆದೇಶದ ನಂತರ ವಾಟ್ಸಾಅಪ್, ನಮ್ಮ ತಪ್ಪು ಅರಿವಿಗೆ ತಂದ ಕೊಟ್ಟಿರುವುದಕ್ಕಾಗಿ ಧನ್ಯವಾದಗಳು. ನಾವು ಪ್ರಕ್ಷೇಪಣೆ ನಿಲ್ಲಿಸಿದ್ದೇವೆ. ಈ ತಪ್ಪಿಗಾಗಿ ಕ್ಷಮೆ ಯಾಚಿಸುತ್ತೇವೆ. ಭವಿಷ್ಯದಲ್ಲಿ ಕಾಳಜಿ ವಹಿಸುವೆವು ಎಂದು ಹೇಳಿದೆ.

೪. `ಝೂಮ್’ ಈ ಕಂಪನಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ಕೂಡ ಅವರ ಟ್ವಿಟರ್ ಖಾತೆಯಲ್ಲಿ ಭಾರತದ ತಪ್ಪಾದ ನಕಾಶೆ ಪೋಸ್ಟ್ ಮಾಡಿದ್ದರು. ಅವರಿಗೂ ಕೂಡ ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಇವರು ಅವರ ಕಿವಿ ಹಿಂಡಿದ್ದರು.

ಸಂಪಾದಕೀಯ ನಿಲುವು

ಕೇವಲ ಕ್ಷಮೆ ಕೇಳಿದರೆ ಸಂಬಂಧಪಟ್ಟವರಿಗೆ ಬಿಟ್ಟುಬಿಡಬಾರದು, ಬದಲಾಗಿ ಅವರ ಮೇಲೆ ದೂರು ದಾಖಲಿಸಿ ಸಂಬಂಧಪಟ್ಟವರಿಗೆ ಶಿಕ್ಷೆಯಾದರೆ ಬೇರೆ ಕಂಪನಿಗಳಿಗೆ ಭಯ ಹುಟ್ಟುವುದು !